Karnataka

Bangalore Urban

CC/420/2021

Smt. Harshini.S - Complainant(s)

Versus

The President,Poornima Convention Hall - Opp.Party(s)

Sri. S.B.Mukkannappa

18 Jun 2022

ORDER

DISTRICT CONSUMER DISPUTES REDRESSAL COMMISSION,
8TH FLOOR, B.W.S.S.B BUILDING, K.G.ROAD,BANGALORE-09
 
Complaint Case No. CC/420/2021
( Date of Filing : 13 Aug 2021 )
 
1. Smt. Harshini.S
Aged about 28 Years, D/o.Srinivasa Murthy,W/o Mr.Sreesh Ponnuru, R/at No.65/A/2648,2nd Floor,Sri.Venkateshwara Nilaya,37th Cross,28th Main,9th Block,Jayanagar, Bengaluru-560069
...........Complainant(s)
Versus
1. The President,Poornima Convention Hall
No.27/1,31st Cross,16th Main, 4th Block, Jayanagar, Bengaluru-560011.
............Opp.Party(s)
 
BEFORE: 
 HON'BLE MR. K. SHIVARAMA PRESIDENT
 HON'BLE MR. H. Janardhan MEMBER
 HON'BLE MS. Renukadevi Deshpande MEMBER
 
PRESENT:
 
Dated : 18 Jun 2022
Final Order / Judgement
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀಮತಿ ಎಂ.ಶೋಭಾ  ಅಧ್ಯಕ್ಷರು,
         2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
 
ಆದೇಶ 
 
ಸಿ.ಸಿ.ಸಂಖ್ಯೆ:420/2020
ಆದೇಶ ದಿನಾಂಕ 19ನೇ ಡಿಸೆಂಬರ್ 2022
ಶ್ರೀ ಹೆಚ್.ಎನ್.ಸಂದೀಪ್,
ಬಿನ್.ಲೇಟ್.ಹೆಚ್.ಸಿ.ನರೇಂದ್ರ ಸ್ವಾಮಿ,
35 ವರ್ಷ,
ನಂ.44, 3ನೇ ಕ್ರಾಸ್, ಹೊಯ್ಸಳ ಲೇಔಟ್, ಅಮೃತಹಳ್ಳಿ, ಬೆಂಗಳೂರು 92.
(ಶ್ರೀ ನಾರಾಯಣ ಎಂ.ನಾಯಕ್, ವಕೀಲರು)                                   
 
 
-ಪಿರ್ಯಾದುದಾರರು
       ವಿರುದ್ಧ
1. ಮೆ.ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಎ ಕಂಪನಿ ಇನ್‍ಕಾರ್ಪೊರೇಟೆಡ್ ಅಂಡರ್ ದಿ ಕಂಪನಿಸ್ ಆಕ್ಟ್ 1956, 
ಅಮೃತ ಕ್ಯಾಸ್ಟಲ್, 5-9-16, ಸೈಫಬಾದ್, ಸೆಕ್ರೆಟೆರಿಯಟ್ ಎದುರು, ಹೈದರಾಬಾದ್ 500 063.
ಪ್ರತಿನಿಧಿಸುವವರು ವ್ಯವಸ್ಥಾಪಕರು ಶ್ರೀ ಯೆಡಗುರಿ ರಾಜೀವ ರೆಡ್ಡಿ
ಮತ್ತು
ಕಾರ್ಪೊರೇಟ್ ಕಛೇರಿ ವಿಳಾಸ ಕಂಟ್ರಿಕ್ಲಬ್, ಕೂಲ್ ಕಟ್ಟಡ, 6-3-1219, 4 ಮತ್ತು 5ನೇ ಮಹಡಿ, ಬೇಗಂಪೇಟೆ, ಹೈದರಬಾದ್ 500 016.
ಮತ್ತು ಬೆಂಗಳೂರು ವಿಳಾಸ ಮತ್ತು ಮುಖ್ಯ ಕಛೇರಿ ವಿಳಾಸ:
ಮೆ.ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ನಂ.15, 1ನೇ ಮಹಡಿ, ಲೆ-ಮೆರಿಡಿಯನ್ ಸ್ಟಾಫ್ ಗೇಟ್ ಹೋಟೆಲ್ ಎದುರು, ಕನ್ನಿಂಗ್‍ಹ್ಯಾಮ್ ರಸ್ತೆ, ವಸಂತನಗರ, ಬೆಂಗಳೂರು 560 032.
 
ಬ್ರಾಚ್ ಕಛೇರಿ:
ಮೆ.ಕಂಟ್ರಿ ವೆಕೇಷನ್ಸ್,
ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.
ನಂ.67/ಎ, ಸಾತನೂರು ಹಳ್ಳಿ, ಯಲಹಂಕ ಹೋಬಳಿ, ಬೆಂಗಳೂರು 560 064. 
 
(ಶ್ರೀ ಡಿ.ನರಸೇಗೌಡ, ವಕೀಲರು)
 
2. ಶ್ರೀ ಯೆಡಗುರಿ ಸಿದ್ದಾರ್ಥ ರೆಡ್ಡಿ
ವ್ಯವಸ್ಥಾಪಕರು
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಕಂಟ್ರಿ ಕ್ಲಬ್, ಕೂಲ್ ಕಟ್ಟಡ, 6-3-1219, 4 ಮತ್ತು 5ನೇ ಮಹಡಿ, ಬೇಗಂಪೇಟ್, ಹೈದರಾಬಾದ್ 500 016.
 
3. ಶ್ರೀ ಯೆಡಗುರಿ ರಾಜೀವ ರೆಡ್ಡಿ, ಜಂಟಿ ವ್ಯವಸ್ಥಾಪಕರು ಮತ್ತು ಸಿಇಓ, ಮೆ:ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಕಂಟ್ರಿ ಕ್ಲಬ್, ಕೂಲ್ ಕಟ್ಟಡ, 6-3-1219, 4 ಮತ್ತು 5ನೇ ಮಹಡಿ, ಬೇಗಂಪೇಟೆ, ಹೈದರಬಾದ್ 500 016.
 
4. ಶ್ರೀ ಯೆಡಗುರಿ ವರುಣ ರೆಡ್ಡಿ, ವೇಸ್ ಚೇರ್‍ಮೆನ್, ಜಂಟಿ ವ್ಯವಸ್ಥಾಪಕರು ಮತ್ತು ಸಿಇಓ, ಮೆ:ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಕಂಟ್ರಿ ಕ್ಲಬ್, ಕೂಲ್ ಕಟ್ಟಡ, 6-3-1219, 4 ಮತ್ತು 5ನೇ ಮಹಡಿ, ಬೇಗಂಪೇಟೆ, ಹೈದರಬಾದ್ 500 016.
(2ರಿಂದ 4ರ ಎದುರುದಾರರನ್ನು ಕೈಬಿಡಲಾಗಿದೆ)
5. ಶ್ರೀ ಮಂಜುನಾಥ್, ಬ್ರಾಚ್ ಮ್ಯಾನೇಜರ್ ಮತ್ತು ಲೈನ್ ಮ್ಯಾನೇಜರ್,  ಮೆ:ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಕಂಟ್ರಿ ಕ್ಲಬ್, ನಂ.67/ಎ, ಸಾತನೂರ್ ಹಳ್ಳಿ, ಯಲಹಂಕ ಹೋಬಳಿ, ಬೆಂಗಳೂರು 560 064.
 
6. ಮಿಸ್.ರೆಬೆಕಾ, ಲೈನ್ ಮ್ಯಾನೇಜರ್,  ಮೆ.ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಡಿವಿಷನ್ ಆಫ್ ಸಿಸಿಹೆಚ್‍ಹೆಚ್‍ಎಲ್ ನಂ.15, 1ನೇ ಮಹಡಿ, ಲೆ-ಮೆರಿಡಿಯನ್ ಸ್ಟಾಫ್ ಗೇಟ್ ಹೋಟೆಲ್ ಎದುರು, ಕನ್ನಿಂಗ್‍ಹ್ಯಾಮ್ ರಸ್ತೆ, ವಸಂತನಗರ, ಬೆಂಗಳೂರು 560 032.
 
7. ಶ್ರೀ ಜಗದೀಶ್ ಎಂ., ಲೈನ್ ಮ್ಯಾನೇಜರ್,  ಮೆ.ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಡಿವಿಷನ್ ಆಫ್ ಸಿಸಿಹೆಚ್‍ಹೆಚ್‍ಎಲ್ ನಂ.15, 1ನೇ ಮಹಡಿ, ಲೆ-ಮೆರಿಡಿಯನ್ ಸ್ಟಾಫ್ ಗೇಟ್ ಹೋಟೆಲ್ ಎದುರು, ಕನ್ನಿಂಗ್‍ಹ್ಯಾಮ್ ರಸ್ತೆ, ವಸಂತನಗರ, ಬೆಂಗಳೂರು 560 032.
 
8. ಶ್ರೀ ಅಕ್ಮಲ್ ಪಾಷ, ಲೈನ್ ಮ್ಯಾನೇಜರ್,  ಮೆ.ಕಂಟ್ರಿ ವೆಕೇಷನ್ಸ್,
(ಎ ಡಿವಿಷನ್ ಆಫ್ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಅಂಡ್ ಹಾಲಿಡೇಸ್ ಲಿ.) ಡಿವಿಷನ್ ಆಫ್ ಸಿಸಿಹೆಚ್‍ಹೆಚ್‍ಎಲ್ ನಂ.15, 1ನೇ ಮಹಡಿ, ಲೆ-ಮೆರಿಡಿಯನ್ ಸ್ಟಾಫ್ ಗೇಟ್ ಹೋಟೆಲ್ ಎದುರು, ಕನ್ನಿಂಗ್‍ಹ್ಯಾಮ್ ರಸ್ತೆ, ವಸಂತನಗರ, ಬೆಂಗಳೂರು 560 032.
(5ರಿಂದ 8ರವರೆಗಿನ ಎದುರುದಾರರು ಗೈರು ಹಾಜರಾಗಿರುತ್ತಾರೆ)
 
… ಎದುರುದಾರರು
 
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ 
ಮಹಿಳಾ ಸದಸ್ಯರು,
 
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಕಲಂ 35ರ ಅಡಿಯಲ್ಲಿ ದೂರು ಸಲ್ಲಿಸಿದ್ದು, 
ಎ) ಎದುರುದಾರರಿಂದ ದೂರುದಾರನಿಗೆ ಸೇವೆಯಲ್ಲಿನ ಕೊರತೆಗಾಗಿ ಮತ್ತು ಹಾನಿಗಳಿಗಾಗಿ, ಮಾನಸಿಕ ಮತ್ತು ಹಣಕಾಸಿನ ತೊಂದರೆಯಿಂದ ಅನಾನುಕೂಲತೆ, ಕೌಟುಂಬಿಕ ತೊಂದರೆಗಳಿಗಾಗಿ ಪರಿಹಾರ ರೂಪವಾಗಿ ಒಟ್ಟು ಮೊತ್ತ ರೂ.7,34,859/- ಕೊಡುವಂತೆ ಎದುರುದಾರರಿಗೆ ನಿರ್ದೇಶಿಸಬೇಕೆಂದು ಮತ್ತು 
ಏ) ಪ್ರಸ್ತುತ ಪ್ರಕ್ರಿಯೆಯ ವೆಚ್ಚಕ್ಕಾಗಿ ಆದೇಶಿಸಬೇಕೆಂದು ಮತ್ತು ಇತರೆ ಸೌಲಭ್ಯಗಳಿದ್ದರೆ ಕೊಡಿಸಬೇಕೆಂದು ಕೋರಿರುತ್ತಾರೆ. 
 
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ಎದುರುದಾರರು ಕಂಟ್ರಿ ಹಾಸ್ಪಿಟಾಲಿಟಿ ಬಿಸಿನೆಸ್ ಆಪರೇಟಿಂಗ್, ಕ್ಲಬ್‍ಗಳು, ಫಿಟ್‍ನೆಸ್ ಸೆಂಟರ್‍ಗಳು, ಹೋಟೆಲ್‍ಗಳು ಹೊರದೇಶಗಳ ಪ್ರಯಾಣ ಯೋಜನೆ ಸೇವೆಗಳು ಮತ್ತು ರೆಸಾರ್ಟ್‍ಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಂಪನಿಯಾಗಿದ್ದು, ಹೈದರಾಬಾದ್ ಮತ್ತು ಬೆಂಗಳೂರು ಶಾಖೆಯ ನೊಂದಾಯಿತ ಕಛೇರಿಯನ್ನು ಹೊಂದಿದೆ.  1ನೇ ಎದುರುದಾರರು ಕ್ಲಬ್‍ನ ಮಾರಾಟ ಪ್ರತಿನಿಧಿಗಳಾಗಿ ಒಬ್ಬರಾದ ಹರೀಶ್ ಕಹಿಲಾ ಸದಸ್ಯತ್ವದ ಬಗ್ಗೆ ವಿವರಿಸಿ ಸದಸ್ಯತ್ವದ ನಿಯಮಗಳು ಮತ್ತು ಪ್ರಯೋಜನಗಳನ್ನು ವಿವರಿಸಿ ಜೂನ್ 2018 ಅಂತ್ಯದೊಳಗೆ ಸದಸ್ಯತ್ವ ಖರೀದಿಸಿದರೆ ಸದಸ್ಯತ್ವಕ್ಕೆ ವಿಶೇಷ ಕೊಡುಗೆಗಳು ಇದೆ ಎಂದು ಸಂಪೂರ್ಣ ಮೊತ್ತ ಏಕಕಾಲದಲ್ಲಿ ಒಂದನೇ ಎದುರುದಾರರಿಗೆ ಪಾವತಿಸಿದರೆ ವಿದೇಶ ಪ್ರವಾಸದಲ್ಲಿ ಪ್ರಯಾಣಿಸುವಾಗ ಉಚಿತ ವಿದೇಶ ಮೊದಲ ಪ್ರವಾಸ ಪ್ಯಾಕೇಜ್ ಮತ್ತು ಇತರೆ ಪ್ರಯೋಜನಗಳನ್ನು ಪಡೆಯಬಹುದೆಂದು ವಿವರಿಸಿದ್ದು, ಅದರಂತೆ ದೂರುದಾರರು ಬ್ಲ್ಯೂ (ಸ್ಟ್ಯಾಂಡರ್ಡ್, ಅಥವಾ ಪ್ರಮಾಣಿತ ಬೆಲೆ) ವರ್ಗದ ಕ್ಲಬ್ ಸದಸ್ಯತ್ವ ಅನ್ನು ಆಯ್ಕೆ ಮಾಡಿ ದೂರುದಾರರು ಮತ್ತು ಎದುರುದಾರರ 24.06.2018ರಂದು ಸದಸ್ಯತ್ವದ ಮಾರಾಟದ ಒಪ್ಪಂದವನ್ನು ಕಾರ್ಯಗತಗೊಳಿಸಿ ಒಟ್ಟು ಮೊತ್ತ ರೂ.2,15,000/- ಮತ್ತು ರೂ.46,859/- ಅವರ ಬ್ಯಾಂಕಿನ ಖಾತೆಯ ಮೂಲಕ ಮತ್ತು ಕ್ರಡಿಟ್ ಕಾರ್ಡ್‍ಗಳ ಸೌಲಬ್ಯವನ್ನು ಬಳಸಿಕೊಂಡು ಇತರ ಶುಲ್ಕಗಳಿಗಾಗಿ 24.06.2018 ಸದಸ್ಯತ್ವದ ಮಾರಾಟ ಒಪ್ಪಂದದ ಪ್ರಕ್ರಿಯೆಯನ್ನು ಮತ್ತು ಜೀವಮಾನದ ಬ್ಲ್ಯೂ ಪ್ರಮಾಣಿತ ಸದಸ್ಯರಾಗಿದ್ದಾರೆಂದು ಮತ್ತು ಕೈಪಿಡಿಯ ಕಾರ್ಡ್ ಸೌಲಭ್ಯದ ಮೂಲಕ ಪಾವತಿಸಿದ ಶುಲ್ಕ ವಿಧಿಸಲಾಗುವುದಿಲ್ಲ ಮತ್ತು ಅದನ್ನು ಎದುರುದಾರರು ಪರಿವರ್ತಿಸುತ್ತಾರೆ. ಇಎಂಐ, ಬಡ್ಡಿ, ಘಟಿಕಗಳು ಮತ್ತು ತೆರಿಗೆ ಪರಿವರ್ತಿಸಲು ಉಂಟಾದ ಎಲ್ಲಾ  ವೆಚ್ಚಗಳನ್ನು ಭರಿಸುತ್ತಾರೆಂದು ಎದುರುದಾರರು ಭರವಸೆ ನೀಡಿದ್ದರು ಮತ್ತು ವಿಮಾನ ಟಿಕೇಟ್, ವಿಸಾ ಶುಲ್ಕಗಳು ಅರ್ಹತಾ ಮತ್ತು ಸೇವಾ ಮತ್ತು ದೃಶ್ಯ ವೀಕ್ಷಣೆ ಇವೆಲ್ಲವುಗಳನ್ನು ಒಳಗೊಂಡಿದೆ ಎಂದು ಪೂರಕ ದೇಶಿಯಾ ಮತ್ತು ಅಂತರರಾಷ್ಟ್ರೀಯ ಪ್ರವಾಸದೊಂದಿಗೆ ದೂರುದಾರರು ಪ್ರಯೋಜನ ಪಡೆಯುತ್ತಾರೆಂದು ಬ್ಯಾಂಕ್ ಖಾತೆಯ ಪ್ರತಿಯನ್ನು ಮತ್ತು ಸದಸ್ಯತ್ವ ಶುಲ್ಕ ರಶೀದಿಯನ್ನು ಮತ್ತು ಸ್ವಾಗತ ಪತ್ರವನ್ನು ಎದುರುದಾರರಿಂದ ಪಡೆದುಕೊಂಡು ಸದಸ್ಯತ್ವ ಲಾಭ ಪಡೆಯಲು ಎದುರುದಾರರು ಮೂರು ರಾತ್ರಿ ನಾಲ್ಕು ಹಗಲು ದುಬೈ ಪ್ರವಾಸದ ಉಲ್ಲೇಖನವನ್ನು ನೀಡಲು ವಿನಂತಿಸಿ ವಿದೇಶ ಪ್ರವಾಸಕ್ಕೆ ಉಚಿತ ಪ್ರವಾಸದ ಸೌಲಭ್ಯ ಒದಗಿಸುವಂತೆ ಕೇಳಿದಾಗ ಎದುರುದಾರರು ನುಣುಚಿಕೊಳ್ಳುತ್ತಾ ಉತ್ತರ ನೀಡಲು ನಿರಾಕರಿಸಿದಾಗ ದೂರುದಾರರು ಪಾವತಿಸಿದ ಅನುಸರಣೆಯ ನಂತರ ಮತ್ತು ಈ ಮೇಲ್ ಮೂಲಕ ಎದುರುದಾರರು ಅದನ್ನು ಒದಗಿಸಲು ವಿಫಲರಾದಾಗ ಮತ್ತು ಅನೇಕ ಅನುಸರಣೆಯ ನಂತರ ಎದುರುದಾರರು ಪಾವತಿಸಿದ ರೂ.1,24,000/- ವೆಚ್ಚದೊಂದಿಗೆ ಒಪ್ಪಿಕೊಂಡು 27.02.2019 ಫಿನ್ಜಿ: ಪೈನಾನ್ಸ್ನ್‍ನಿಂದ ದುಬೈಗೆ ಪ್ರವಾಸದ ವೆಚ್ಚಕ್ಕಾಗಿ ದೂರುದಾರರು ರೂ.2,00,000/- ಗಳನ್ನು ಎರವಲು ಪಡೆದು ಹೋಗುವ ಸಂಧರ್ಭದಲ್ಲಿ ಸದಸ್ಯತ್ವ ಪಡೆಯುವ ಸಮಯದಲ್ಲಿ ಎದುರುದಾರರು ಒಪ್ಪಕೊಂಡಂತೆ ಉಚಿತ ಸೇವೆ ಸೌಲಭ್ಯಗಳನ್ನು ಒದಗಿಸಲು ವಿಫಲವಾಗಿದೆ ಎಂದು ಮತ್ತು ಇದೇ ಸಮಯದಲ್ಲಿ ಮತ್ತು ಸದಸ್ಯತ್ವ ಶುಲ್ವವನ್ನು ಮರಳಿಪಡೆಯಲು ಯತ್ನಿಸಿದ್ದು, ಅಂತಿಮವಾಗಿ ಎದುರುದಾರರು ರೂ.20,000/- ಮತ್ತು ರೂ.60,000/- ಗಳನ್ನು 29.09.2018ರಂದು ಒಟ್ಟು ಮೊತ್ತದಲ್ಲಿ ರೂ.2,15,000/- ಗಳಲ್ಲಿ ರೂ.80,000/- ಗಳನ್ನು ಮರುಪಾವತಿಸಿ ಮತ್ತು ಪರಿವರ್ತಿತ ಶುಲ್ಕ ರೂ.46,859/- ಮತ್ತು ಇಎಂಐ ಬಡ್ಡಿ ಮೊತ್ತ ರೂ.48,000/- ಮತ್ತು ಇತರೆ ಖರ್ಚು ರೂ.5,000/- ಒಟ್ಟು ಮೊತ್ತ ರೂ.2,34,859/- ಮರುಪಾವತಿಸಲು ಸಮಯಾವಕಾಶವನ್ನು ಕೋರಿದ್ದರು. ಮರುಪಾವತಿಸುವ ಉದ್ದೇಶವನ್ನು ನಿರಾಕರಿಸಿದ್ದು, ಸಾರ್ವಜನಿಕರನ್ನು ವಂಚನೆ ಮನೋಭಾವದಿಂದ ಹೊಂದಿದೆ ಎಂದು ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದೆ ಎಂದು ಯಾವುದೇ ಪ್ರಯೋಜನವಾಗದೇ ಗ್ರಾಹಕರ ಸೇವಾ ವೇದಿಕೆ ಮತ್ತು ಎದುರುದಾರರಿಂದ ಮೊತ್ತವನ್ನು ಪಡೆಯಲು ವಿಫಲವಾಗಿ ಶೇಕಡ 18% ಬಡ್ಡಿಯೊಂದಿಗೆ ಬಾಕಿ ಮೊತ್ತವನ್ನು ಮರುಪಾವತಿಸುವಂತೆ ಈಮೇಲ್ ಕಳಿಸಿದ್ದು, 24.06.2018ರಂದು ಯಾವುದೇ ಜವಾಬು ಸಿಗದೇ ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆ, ಅನುಚಿತ ವ್ಯಾಪಾರ ಪದ್ದತಿಯನ್ನು ಎಸಗಿದ್ದಾರೆಂದು ಮತ್ತು ಸೇವಾ ನ್ಯೂನತೆ ಎಸಗಿದ್ದಾರೆಂದು ಮತ್ತು ರೂ.5,00,000/- ಪರಿಹಾರ ರೂಪವಾಗಿ ಒಟ್ಟು ಮೊತ್ತ ರೂ.7,34,859/- ಮರುಪಾವತಿಸುವಂತೆ ಕೋರಿರುತ್ತಾರೆ. ಆದರೆ ಇದು ವಿಫಲವಾದಾಗ ಅಂತಿಮವಾಗಿ 11.07.2019ರಂದು ಕಾನೂನು ನೋಟೀಸ್ ನೀಡಿದ್ದು, ಯಾವುದೇ ಜವಾಬು ಸಿಗದೆ ಸೇವಾ ನ್ಯೂನತೆ ಮಾನಸಿಕ ಹಿಂಸೆ, ಕೊಟ್ಟಿದ್ದಾರೆಂದು ಈ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಕೊಡಿಸಬೇಕೆಂದು ಕೋರಿರುತ್ತಾರೆ.
3. ದೂರುದಾರರ ದೂರು ಸಲ್ಲಿಸಿ ನೋಟೀಸ್ ಜಾರಿ ಮಾಡಲಾಗಿ 1 ಮತ್ತು 5 ಎದುರುದಾರರು ಗೈರುಹಾಜರಾಗಿರುತ್ತಾರೆ. ಇವರನ್ನು ಏಕಪಕ್ಷೀಯವಾಗಿ ಇಡಲಾಗಿದೆ ಮತ್ತು 6, 8 ಇವರನ್ನು ಸಹ ಏಕಪಕ್ಷೀಯವಾಗಿ ಇಡಲಾಗಿದೆ ಮತ್ತು 2 ರಿಂದ 4ನೇ ದುರುದಾರರಿಗೆ ನೋಟೀಸ್ ನೀಡಲು ಇದರ ಬಗ್ಗೆ ದೂರುದಾರರು ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಕಾರಣ ಇವರನ್ನು ಗ್ರಾಹಕರ ಆಯೋಗದಿಂದ ಕೈಬಿಡಲಾಗಿದೆ ಎಂದು ತೀರ್ಮಾನಕ್ಕೆ ಬಂದಿದ್ದು, ಹಾಗು 1ನೇ ಎದುರುದಾರರು ಹಾಜರಾಗಿ ತಕರಾರನ್ನು ಸಲ್ಲಿಸಿರುತ್ತಾರೆ. ದೂರುದಾರರು ಸಲ್ಲಿಸಿದ ದೂರನ್ನು ಕಾನೂನಿನಲ್ಲಿ ಅಥವಾ ಸತ್ಯಗಳ ಮೇಲೆ ನಿರ್ವಹಿಸಲಾಗುವುದಿಲ್ಲ, ದೂರುದಾರರು ಶುದ್ದ ಹಸ್ತದಿಂದ ಸಂಪರ್ಕಿಸಿಲ್ಲದ ಕಾರಣ ಅದನ್ನು ಮಿತಿಯಲ್ಲಿ ವಜಾಗೊಳಿಸಲಾಗುತ್ತದೆ. ಯಾವುದೇ ಕ್ರಮದ ಕಾರಣವಿಲ್ಲದೆ ದೂರನ್ನು ನಿರ್ವಹಿಸಲಾಗುವುದಿಲ್ಲ, ದೂರು ಅಸ್ಪಷ್ಟವಾಗಿದೆ ಎಂದು ದೂರನ್ನು ವಜಾಗೊಳಿಸಬಹುದಾಗಿದೆ ಎಂದು ದೂರಿನಲ್ಲಿ ಮಾಡಿದ ಅವ್ಯವಹಾರಗಳನ್ನು ಸಂಪೂರ್ಣವಾಗಿ ಸುಳ್ಳು ಎಂದು ದೂರುದಾರರು ನೀಡುವ ವಿವಿಧ ರಜಾ ದಿನಗಳನ್ನು ಪೂರೈಕೆಗಳ ಬಗ್ಗೆ ದೂರುದಾರರಿಗೆ ವಿವರಿಸಿದ ನಂತರ ಖರೀದಿ ಒಪ್ಪಂದದ ಪತ್ರ ನೀಡಿದ ನಂತರ ಸದಸ್ಯತ್ವ ಪಡೆದಿದ್ದಾರೆ ಕಂಪನಿಯಿಂದ ಕೂಪನ್‍ಗಳನ್ನು ದೂರುದಾರರು ಒಂದು ದಿನ ಸವಲತ್ತುಗಳನ್ನು ರಜಾ ಓಚರ್‍ಗಳನ್ನು ನೀಡಲಾಗಿದೆ.  ಸದಸ್ಯತ್ವ ಕಾರ್ಡ್‍ಗಳನ್ನು ವಿತರಿಸಲಾಗಿದೆ. ದೂರಿನಲ್ಲಿ ಮಾಡಿದ ಆರೋಪ ಸಂಪೂರ್ಣ ಆದಾರರಹಿತವಾಗಿದೆ ಮತ್ತು ಸೇವೆಯಲ್ಲಿನ ಕೊರತೆಯನ್ನು ಸಲ್ಲಿಸದೇ ದೂರುದಾರರು ಯಾವುದೇ ದಾಖಲೆಯನ್ನು ಸಲ್ಲಿಸದೇ ಈಮೇಲ್‍ಗಳನ್ನು ಸ್ವೀಕರಿಸಿಲ್ಲ ಆದ್ದರಿಂದ ಯಾವುದೇ ದೃಷ್ಟಿಯಿಂದ ನೋಡಿದರೂ ದೂರನ್ನು ನಿರ್ವಹಿಸಲಾಗುವುದಿಲ್ಲ 24.06.2018 ಖರೀದಿಯ ಒಪ್ಪಂದಕ್ಕೆ ಖುದ್ದಾಗಿ ಸಹಿ ಮಾಡಿರುತ್ತಾರೆ.  ಒಪ್ಪಂದದ ಷರತ್ತುಗಳ ಪ್ರಕಾರ ಯಾವುದೇ ಕಾರಣಕ್ಕೆ ಮೊತ್ತವನ್ನು ಮರುಪಾವತಿಸಲಾಗುವುದಿಲ್ಲ ಮತ್ತು ಕ್ಲಬ್‍ನ ಸದಸ್ಯತ್ವ ರದ್ದತಿಗೆ ಯಾವುದೇ ನಿಬಂದನೆಗಳಿಲ್ಲ ಅಲ್ಲದೆ ದೂರುದಾರರು ಯಾವುದೇ ಮೂರನೇ ವ್ಯಕ್ತಿಗೆ ಸದಸ್ಯತ್ವವನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅಥವಾ ಉಡುಗರೆಯನ್ನು ನೀಡಲು ಸ್ವತಂತ್ರ್ಯವನ್ನು ನೀಡಿದೆ ಅದರ ಹೊರತಾಗಿಯೂ ದೂರುದಾರರು ತನಗೆ ತಿಳಿದಿರುವ ಕಾರಣಗಳಿಗಾಗಿ ಸುಳು ಮತ್ತು ಕ್ಷುಲ್ಲಕ ದೂರನ್ನು ಸಲ್ಲಿಸಿದ್ದಾರೆ. ಆದ್ದರಿಂದ ಈ ಆಯೋಗಕ್ಕೆ ಯಾವುದೇ ಪ್ರಕರಣವನ್ನು ಪ್ರಯೋಗಿಸಲು ಯಾವುದೇ ಅಧಿಕಾರವಿಲ್ಲವೆಂದು, ಸೇವೆಯ ಲೋಪದೋಷವನ್ನು ಮಾಡಿಲ್ಲವೆಂದು ದೂರುದಾರನಿಗೆ ಸ್ಪಷ್ಟವಾಗಿ ತಿಳಿಸಿದೆ ಮತ್ತು ಉಚಿತ ಕೊಡುಗೆಗಳನ್ನು ತಿಳಿಸಿದೆ ಯಾವುದೇ ಮೊತ್ತವನ್ನು ಹಿಂದಿರುಗಿಸಲಾಗುವುದಿಲ್ಲ ಆದ್ದರಿಂದ ಈ ಅಂಶದಲ್ಲಿ ಯಾವುದೇ ಒಪ್ಪಂದವಿಲ್ಲದಿರುವಾಗ ಮತ್ತು ಪರಿಹಾರವನ್ನು ಪಾವತಿಸಿದ ಮೊತ್ತದ ಮರುಪಾವತಿ ಮತ್ತು ನಿರ್ವಹಣೆ ಶುಲ್ಕ ಮತ್ತು ಪರಿಹಾರ ಉದ್ಬವಿಸುವುದಿಲ್ಲ ಯಾವುದೇ ಕ್ರಿಯೆಗೆ ಕಾರಣವಿಲ್ಲ ಮತ್ತು ಯಾವುದೇ ಸೇವೆಗಳಲ್ಲಿ ಕೊರತೆಯನ್ನು ಉಂಟುಮಾಡಿಲ್ಲ. ದೂರುದಾರರ ಮೊತ್ತವು ಮರುಪಾವತಿಸಲು ಅರ್ಹತೆಗೊಳಗಾಗಿರುವುದಿಲ್ಲ ಮತ್ತು ವಾರ್ಷಿಕ ಶುಲ್ಕ 28,030/- ಗಳನ್ನು ಸದರಿ ಪಾವತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮೇಲ್ಕಂಡ ಸುಳ್ಳು ಮತ್ತು ನಿಷ್ಕ್ರಿಯ ದೂರನ್ನು ಸಲ್ಲಿಸಿರುತ್ತಾರೆ. ದೂರುದಾರರ ಮೊತ್ತ ಮರುಪಾವತಿಗೆ ಅರ್ಹರಾಗಿರುವುದಿಲ್ಲ. ಪರಿಹಾರ ರೂಪವಾಗಿ ರೂ.5,00,000/- ಗಳನ್ನು ಕೊಡಲು ಯಾವುದೇ ಕಾರಣವಿಲ್ಲವೆಂದು ಈ ದೂರನ್ನು ವಜಾಗೊಳಿಸಬೇಕೆಂದು ಕೋರಿರುತ್ತಾರೆ. 
4. ದೂರುದಾರರರಿಗೆ ಎಷ್ಟೇ ಅವಕಾಶ ಮಾಡಿಕೊಟ್ಟರೂ ದೂರುದಾರರು ಪ್ರಮಾಣೀಕೃತ ನುಡಿ ಸಾಕ್ಷ್ಯವನ್ನು ಹಾಜರುಪಡಿಸಿರುವುದಿಲ್ಲ ಮತ್ತು ಖರೀದಿಯ ಕರಾರು ಪತ್ರ ಮತ್ತು ಈಮೇಲ್ ಸಂವಹನಗಳನ್ನು ಹಾಜರುಪಡಿಸಿರುತ್ತಾರೆ. ದಾಖಲೆ ಪುಟ 1 ರಿಂದ 54.  ದೂರುದಾರರು ನುಡಿ ಸಾಕ್ಷ್ಯವನ್ನು ವಾದವನ್ನು ಮಂಡಿಸದೇ ಇರುವುದರಿಂದ ದಾಖಲೆಗಳ ಅರ್ಹತೆ ಮೇರೆಗೆ ತೀರ್ಪಿಗಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರರು, ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ, ದುರ್ನಡತೆಯನ್ನು, ನಿರ್ಲಕ್ಷತೆಯ£ ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ? 
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
 
ಕಾರಣಗಳು
7. 1ನೇ ಅಂಶದ ಮೇಲೆ:- ದೂರುದಾರರು ತನ್ನ ದೂರಿನಲ್ಲಿ ಕೊಟ್ಟ ಸಂಗತಿಗಳನ್ನು ನಾವು ಈಗಾಗಲೇ ಸುದೀರ್ಘವಾಗಿ ಪ್ಯಾರಾ-2ರಲ್ಲಿ ವಿವರಿಸಿದ್ದೇವೆ.  ಪ್ರಸ್ತುತ ಪ್ರಕರಣದಲ್ಲಿ ಆಯೋಗಕ್ಕೆ ಮುಂದೆ ಹಾಜರಾಗದೆ, ದೂರುದಾರರ ದೂರು ಸಲ್ಲಿಸಿ ನೋಟೀಸ್ ಜಾರಿ ಮಾಡಲಾಗಿ 1 ಮತ್ತು 5 ಎದುರುದಾರರು ಗೈರುಹಾಜರಾಗಿರುತ್ತಾರೆ. ಇವರನ್ನು ಏಕಪಕ್ಷೀಯವಾಗಿ ಇಡಲಾಗಿದೆ ಮತ್ತು 6, 8 ಇವರನ್ನು ಸಹ ಏಕಪPಕ್ಷೀಯವಾಗಿ ಇಡಲಾಗಿದೆ ಮತ್ತು 2 ರಿಂದ 4ನೇ ದುರುದಾರರಿಗೆ ನೋಟೀಸ್ ನೀಡಲು ಇದರ ಬಗ್ಗೆ ದೂರುದಾರರು ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಕಾರಣ ಇವರನ್ನು ಗ್ರಾಹಕರ ಆಯೋಗದಿಂದ ಕೈಬಿಡಲಾಗಿದೆ ಎಂದು ತೀರ್ಮಾನಕ್ಕೆ ಬಂದಿದ್ದು, ಹಾಗು 1ನೇ ಎದುರುದಾರರು ಹಾಜರಾಗಿ ತಕರಾರನ್ನು ಸಲ್ಲಿಸಿರುತ್ತಾರೆ.  ದೂರುದಾರರು ಸದಸ್ಯತ್ವ ಶುಲ್ಕವನ್ನು ಮರುಪಾವತಿಸಲು ಕೋರಿರುತ್ತಾರೆ. ಎದುರುದಾರರು ಸೇವೆಯ ಕೊರತೆಯಿಂದ, ಅದಕ್ಕೆ ಪ್ರತಿಯಾಗಿ ಎದುರುದಾರರು ಖರೀದಿಯ ಒಪ್ಪಂದದ ಕರಾರು ಪತ್ರ ಮಾಡಕೊಂಡಿದ್ದರೂ ದೂರುದಾರರಿಗೆ ಹಣವನ್ನು ಮರುಪಾವತಿಸಲು ಇದಕ್ಕೆ ದೂರುದಾರರು ಹೆಚ್‍ಡಿಎಫ್‍ಸಿ ಖಾತೆಯ ಪುಟ 50 ಹಾಜರುಪಡಿಸಿದ್ದು, ಎದುರುದಾರರು ಎರಡು ದಿನಾಂಕಗಳಲ್ಲಿ 28.08.2018 ರಂದು ರೂ.20,000/- ಗಳನ್ನು ಮತ್ತು ಪುಟ 51ರಲ್ಲಿ 24.02.2019 ರೂ.60,000/- ಗಳನ್ನು ಪಾವತಿಸಿದ್ದು, ಅಲ್ಲದೆ ಪುಟ 52 ರಿಂದ 53 ರಲ್ಲಿ ದೂರುದಾರರು ಎದುರುದಾರರಿಗೆ ಈ ಮೇಲ್ ಕಳಿಸಿದ್ದು, ಅದರಲ್ಲಿ ಸ್ಪಷ್ಟವಾಗಿ ಮರುಪಾವತಿಸಿದ ಈಮೇಲ್ ದಾಖಲೆಗಳನ್ನು ಹಾಜರುಪಡಿಸಿರುತ್ತಾರೆ. ಪುಟ 53 ಈ ರೀತಿ ಇರುತ್ತದೆ. 

Expensive details below:

My membership fee-215000/-

Credit card swiping & EMI from the bank SBI, ICICI & HSBC=45000/-

Interest for 1 years-2% for 200000=48000/-

Allowance such as petrol & mobile calls=5000/-

Totally all expensive =215000+45000+48000+5000=313000/-(Three lakhs thirteen thousands rupees)

Part payment from the club=60000/-

One EMI interest payment =20000/-

Totally=60000+20000=80000/-

Still pending :313000-80000=233000/- (Two lakh thirty three thousands rupees)

Note: Time what i have spend & what i gone through all this all years (terrible, horrible, unbearable).Hence, i am request to payback my entire expensive immediately as mentioned above in detail. (Two lakh thirty three thousands rupees)

If not got the positive results from your end ASAP, i will move on to the consumer court also.

ಆದರೆ ದೂರುದಾರರು ಸಲ್ಲಿಸಿದ ಈ ಮೇಲ್ ಸಂವಹನಗಳಿಗೆ ಎದುರುದಾರರು ಯಾವುದೇ ಜವಾಬು ಕೊಡದೇ ಮತ್ತು ನುಡಿ ಸಾಕ್ಷ್ಯವನ್ನು ಹಾಜರುಪಡಿಸದೇ ಅಲ್ಲದೇ ತಮ್ಮ ತಕರಾರಿನಲ್ಲಿ ಈ ವಿಷಯವಾಗಿ ಅಲ್ಲಗಳೆಯದೇ ಇರುವುದರಿಂದ ದೂರುದಾರರು ದಾಖಲೆಗಳ ಮತ್ತು ಈಮೇಲ್ ಸಂವಹನಗಳ ಆಧಾರದ ಮೇಲೆ ರೂ.20,000/- ಮತ್ತು ರೂ.60,000/- ಗಳು ಮರುಪಾವತಿಸಿದ್ದು, ಉಳಿದ ಮೊತ್ತವನ್ನು ಮರುಪಾವತಿಸಲು ಭರವಸೆಯನ್ನು ಕೊಟ್ಟಿದ್ದು, ಮೇಲ್ನೋಟಕ್ಕೆ ಸಾಬೀತುಪಡಿಸಿದ್ದು, ಆದ್ದರಿಂದ ದೂರುದಾರರು ದೂರಿನಲ್ಲಿ ಕೇಳಿಕೊಂಡ ಪ್ರಾರ್ಥನೆಯಂತೆ ಇದಕ್ಕೆ ಪ್ರತಿಯಾಗಿ ಎದುರುದಾರರು ಮೊತ್ತವನ್ನು ಮರುಪಾವತಿಸುವ ಬಗ್ಗೆ ತಕರಾರಿನಲ್ಲಿ ಅಲ್ಲಗಳೆಯದೇ ಇರುವುದರಿಂದ ದೂರುದಾರರು ಕೇಳಿಕೊಂಡ ಮೊತ್ತದಲ್ಲಿ ರೂ.3800/- ಗಳನ್ನು ಆಡಳಿತಾತ್ಮಕ ಖರ್ಚು ಎಂದು ಕಡಿತಗೊಳಿಸಿ ಉಳಿದ ಮೊತ್ತ ರೂ.2,31,089/- ಗಳನ್ನು ಶೇಕಡ 6ರ ಬಡ್ಡಿಯಂತೆ ದಾಖಲಿಸಿದ ದಿನಾಂಕದಿಂದ ಮರುಪಾವತಿಸುವವರೆಗೆ ಮತ್ತು ಮಾನಸಿಕ ಹಿಂಸೆ ಸಮಯದ ನಷ್ಟಕ್ಕಾಗಿ ಮತ್ತು ಸೇವಾ ನ್ಯೂನತೆಗಾಗಿ ರೂ.50,000/- ಗಳನ್ನು ಪರಿಹಾರ ರೂಪವಾಗಿ ಮತ್ತು ರೂ.10,000/- ರೂಪಾಯಿಗಳನ್ನು ನ್ಯಾಯಾಲಯದ ಖರ್ಚುಗಳನ್ನು ಪಾವತಿಸುವಂತೆ ನಿರ್ದೇಶಿಸಲಾಗಿದೆ. ಈ ಕಾರಣಕ್ಕಾಗಿ ಒಂದನೇ ಅಂಶವನ್ನು ಭಾಗಶ: ಸಕಾರಾತ್ಮಕ ಎಂದು ತೀರ್ಮಾನಿಸಲಾಗಿದೆ.  
8. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ಕೊಟ್ಟಿರುವ ನಿರ್ಣಯಕ್ಕೆ ಅನುಗುಣವಾಗಿ ಈ ಕೆಳಕಂಡ ಆದೇಶವನ್ನು ಮಾಡಿದ್ದೇವೆ. 
 
                                                                                ಆದೇಶ
1. ಗ್ರಾಹಕ ಸಂರಕ್ಷಣಾ ಕಾಯಿದೆ 2019ರ ಕಲಂ 35 ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಒಂದನೇ ಎದುರುದಾರರು ದೂರುದಾರರಿಗೆ ರೂ.2,31,089/- ಗಳನ್ನು ಸದಸ್ಯತ್ವ ಶುಲ್ಕವನ್ನು ದೂರುದಾರರು ದಾಖಲಿಸಿದ ದಿನಾಂಕದಿಂದ ಮರುಪಾವತಿಯಾಗುವವರೆಗೆ ಶೇಕಡ 6ರ ಬಡ್ಡಿಯಂತೆ ಮತ್ತು ನ್ಯಾಯಾಲಯದ ಖರ್ಚು ರೂ.10,000/- ಗಳನ್ನು ಈ ಆದೇಶವಾದ 60 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸತಕ್ಕದ್ದು, ತಪ್ಪಿದಲ್ಲಿ ದೂರುದಾರರು ಸಲ್ಲಿಸಿದ ದೂರಿನ ದಿನಾಂಕದಿಂದ ರೂ.2,31,089/- ಗಳಿಗೆ ಶೇಕಡ 9ರ ಬಡ್ಡಿಯಂತೆ ಪಾವತಿಸತಕ್ಕದ್ದು. 
3. ಉಭಯತ್ರರಿಗೆ ಹೆಚ್ಚುವರಿ ದಾಖಲೆಗಳನ್ನು ಹಿಂತಿರುಗಿಸಲು ಸೂಚಿಸಿದೆ.
4. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು. 
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 19ನೇ ಡಿಸೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
 
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಎಂ.ಶೋಭಾ)ಅಧ್ಯಕ್ಷರು
 
 
[HON'BLE MR. K. SHIVARAMA]
PRESIDENT
 
 
[HON'BLE MR. H. Janardhan]
MEMBER
 
 
[HON'BLE MS. Renukadevi Deshpande]
MEMBER
 

Consumer Court Lawyer

Best Law Firm for all your Consumer Court related cases.

Bhanu Pratap

Featured Recomended
Highly recommended!
5.0 (615)

Bhanu Pratap

Featured Recomended
Highly recommended!

Experties

Consumer Court | Cheque Bounce | Civil Cases | Criminal Cases | Matrimonial Disputes

Phone Number

7982270319

Dedicated team of best lawyers for all your legal queries. Our lawyers can help you for you Consumer Court related cases at very affordable fee.