Sri.M.Krishnappa filed a consumer case on 22 Apr 2024 against The Manager, United Insurance TPA Pvt Ltd in the Kolar Consumer Court. The case no is CC/140/2023 and the judgment uploaded on 04 May 2024.
ಫೈಲಿ೦ಗ್ ದಿನಾ೦ಕಃ 08/11/2023
ಆದೇಶದ ದಿನಾ೦ಕಃ 22/04/2024
ಕೋಲಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಹಳೆಯ D.C ಕಛೇರಿ ಆವರಣ, ಕೋಲಾರ.
ದಿನಾ೦ಕಃ 2024 ರ ಏಪ್ರಿಲ್ 22 ನೇ ದಿನ
ಶ್ರೀ. ಸೈಯದ್ ಅನ್ಸರ್ ಕಲೀಮ್ ֽ ಬಿ.ಎಡ್., ಎಲ್.ಎಲ್.ಬಿ.,.......... ಅಧ್ಯಕ್ಷರು.
ಶ್ರೀಮತಿ. ಸವಿತಾ ಐರಣಿ ಬಿ.ಎ.ಎಲ್., ಎಲ್.ಎಲ್. ಎಮ್.,,,,,,,ಮಹಿಳಾ ಸದಸ್ಯರು.
ದೂರು ಸ೦ಖ್ಯೆಃ 140/2023.
ಶ್ರೀ. ಎ೦. ಕ್ರಿಷ್ಣಪ್ಪ @ ದೊಡ್ಡಮುನಿಸ್ವಾಮಪ್ಪ
ವಯಸ್ಸು 71 ವಷ೯,
ಸೊಣ್ಣನಾಯಕನಹಳ್ಳಿ ಗ್ರಾಮ,
ಬೈರನಹಳ್ಳಿ ಅ೦ಚೆ,
ಮಾಲೂರು ತಾಲ್ಲೂಕು,
ಕೋಲಾರ ಜಿಲ್ಲೆ.
(ಶ್ರೀ. ಡಿ.ವಿ. ಲಕ್ಷ್ಮೀನಾರಾಯಣ, ವಕೀಲರು) ……… ದೂರುದಾರರು.
-V/S-
1) ವ್ಯವಸ್ಥಾಪಕರು,
ಯುನೈಟೆಡ್ ಇನ್ಸೂರೆನ್ಸ್ ಟಿಪಿಎ ಪ್ರೈವೇಟ್ ಲಿ.,
ಐವರ್ ಡಿ/4ನೇ ಪ್ಲೋರ್,
ಐಪಿಸಿ ನಾಲೆಡ್ಜ್ ಪಾಕು೯
4/1, ಬನ್ನೇರುಘಟ್ಟ ರಸ್ತೆ,
ಬೆ೦ಗಳೂರು-560029.
(ಶ್ರೀ. ಕೆ.ಎ೦. ನರಸಿ೦ಹ ಮೂತಿ೯, ವಕೀಲರು)
2) ಕಾಪೋ೯ರೇಟ್ ಅಧಿಕಾರಿಗಳು,
ಬೆ೦ಗಳೂರು ಬ್ಯಾಪ್ವಿಸ್ಟ್ ಹಾಪ್ಪಿಟಲ್,
ಬಳ್ಳಾರಿ ರಸ್ತೆ ಹೆಬ್ಬಾಳ,
ಬೆ೦ಗಳೂರು-560029.
(ಶ್ರೀ. ಅರುಣ್ ಕುಮಾರ್, ವಕೀಲರು)
3) ಪ್ರಧಾನ ವ್ಯವಸ್ಥಾಪಕರು,
ಭಾರತ್ ಎಲೆಕ್ಟ್ರಾನಿಕ್ ಲಿ.,
ಜಾಲಹಳ್ಳಿ ಅ೦ಚೆ,
ಬೆ೦ಗಳೂರು – 560013.
(ಏಕ ತಪಿ೯ಯ) …….ಎದುರುದಾರರು.
:: D zÉà ±À ::
ತೀಪು೯ ನೀಡಿಕೆ:- ಶ್ರೀಮತಿ. ಸವಿತಾ ಐರಣಿ, ಮಹಿಳಾ ಸದಸ್ಯರು:-
¥Àæ¸ÀÄÛvÀ ¥ÀæPÀgÀtzÀ°è zÀÆgÀÄzÁgÀgÀÄ UÁæºÀPÀ ಹಿತರಕ್ಷಣಾ PÁAiÉÄÝ-2019 PÀ®A:35gÀ CrAiÀÄ°è zÀÆgÀÄ ¸À°è¹zÀÄÝ, zÀÆgÀÄzÁgÀgÀÄ JzÀÄgÀÄzÁgÀjAzÀ DzÀ ¸ÉêÁ £ÀÆ£ÀåvÉUÉ ಹಾಗೂ JzÀÄgÀÄzÁgÀjAzÀ ದೂರುದಾರರ ವಿಮಾ ಐಡಿ ಕಾಡು೯ಗಳ ಪ್ರಕಾರ ಜೀವನ ಪಯ೯೦ತ ಉಚಿತ ಚಿಕಿತ್ಸೆ ನೀಡುವ೦ತೆ ಮತ್ತು ರೂ. 14,830/- ಗಳನ್ನು ಚಿಕಿತ್ಸೆಗೆ ಪಾವತಿಸಿದ ಮೊತ್ತಕ್ಕೆ ಶೇಕಡ 18% ರ ಬಡ್ಡಿಯೊ೦ದಿಗೆֽ ಮತ್ತು ಅವಮಾನ, ಮಾನಸಿಕ ಹಿ೦ಸೆಗೆ ನಷ್ಟಪರಿಹಾರ ರೂ. 2,00,000/- ಇತರೆ ಖಚು೯ ವೆಚ್ಚಗಳು ರೂ. 5,000/- ¥ÀjºÁgÀ PÉÆÃj zÀÆgÀÄ ¸À°è¹gÀÄvÁÛgÉ.
2. zÀÆj£À ¸ÀAQë¥ÀÛ «ªÀgÀUÀ¼ÀÄ :-
ದೂರುದಾರರು 3ನೇ ಎದುರುದಾರರಾದ ಭಾರತ್ ಎಲೆಕ್ಟ್ರಾನಿಕ್ ಕ೦ಪನಿಯಲ್ಲಿ 32 ವಷ೯ಗಳ ಕಾಲ ಸೇವೆ ಸಲ್ಲಿಸಿֽ ವಯೋಮಿತಿ ವೆುೕರೆಗೆ 2013 ರ ಜೂನ್ ತಿ೦ಗಳಲ್ಲಿ ನಿವೃತ್ತಿ ಹೊ೦ದಿರುತ್ತಾರೆ. 3ನೇ ಎದುರುದಾರರ ಕ೦ಪನಿಯ ನಿಯಮಾವಳಿ ಪ್ರಕಾರ ದೂರುದಾರರು ಹಾಗೂ ಅವರ ಪತ್ನಿ ಶ್ರೀಮತಿ ನ೦ಜಮ್ಮರಿಗೆ 1ನೇ ಎದುರುದಾರರಾದ “ಯುನೈಟೆಡ್ ಇ೦ಡಿಯಾ ಇನ್ಸೂರೆನ್ಸ್ ಕ೦ಪನಿಯಿ೦ದ” ಜೀವನ ಪಯ೯೦ತ ಒಳ ಮತ್ತು ಹೊರ ರೋಗಿ-ಯಾಗಿ ಚಿಕಿತ್ಸೆ ಪಡೆಯುವ ಸೌಲಭ್ಯವನ್ನು ಹೊ೦ದಿರುತ್ತಾರೆ. ದೂರುದಾರರ ID CARD NO.4039753015 ಮತ್ತು ಅವರ ಪತ್ನಿಯ ID CARD NO.4039753016 ಗಳನ್ನು 1ನೇ ಎದುರುದಾರರ ವಿಮಾ ಕ೦ಪನಿಯು ನೀಡಿರುವುದಾಗಿ ತಿಳಿಸಿರುತ್ತಾರೆ. 2ನೇ ಎದುರು-ದಾರರಾದ “ಬ್ಯಾಪ್ಟಿಸ್ಟ್ ಆಸ್ಪತ್ರೆ” ಬೆ೦ಗಳೂರು ವಾಪ್ತಿಗೆ ಸೇರಿರುತ್ತದೆ. 1ನೇ ಎದುರುದಾರರು ದೂರುದಾರರಿಗೆ 2021 ರಲ್ಲಿ 2ನೇ ಎದುರುದಾರರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊ೦ಡಿರುವುದ್ದಕ್ಕೆ ֽ ಚಿಕಿತ್ಸೆ ವೆಚ್ಚವನ್ನು ಬರಿಸಿರುವುದಾಗಿ ದೂರುದಾರರು ತಿಳಿಸಿರುತ್ತಾರೆ.
3. ದೂರುದಾರರು ಮು೦ದುವರಿದು ತಿಳಿಸುವುದೇನೆ೦ದರೆ, ದಿನಾ೦ಕಃ 13/09/2023 ರ೦ದು ಅವರ ಪತ್ನಿ ಶ್ರೀಮತಿ ನ೦ಜಮ್ಮರವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾ-ದಾಗ 2ನೇ ಎದುರುದಾರರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದಾಗ 2ನೇ ಎದುರುದಾರ-ರು ನಿರಾಕರಿಸಿ, 1ನೇ ಎದುರುದಾರರು ತಮ್ಮ ಕ೦ಪನಿಯಿ೦ದ 2ನೇ ಎದುರುದಾರರ ಆಸ್ಪತ್ರೆಯ ಸೇವೆಯನ್ನು ರದ್ದುಪಡಿಸಿರುತ್ತಾರೆ೦ದು ತಿಳಿಸಿ ದೂರುದಾರರಿಗೆ ಹಣ ನೀಡಿ ಚಿಕಿತ್ಸೆ ಪಡೆದುಕೊಳ್ಳ-ಲು ಸೂಚಿಸುತ್ತಾರೆ.
4. ದೂರುದಾರರು ಮು೦ದುವರೆದು ತಿಳಿಸುವುದೇನೆ೦ದರೆ, ದೂರುದಾರರು ಚಿಕಿತ್ಸೆ ವೆಚ್ಚ-ಗಳನ್ನು ಪಾವತಿಸಿ ಅವರ ಪತ್ನಿಗೆ ಚಿಕಿತ್ಸೆ ಕೊಡಿಸಿರುತ್ತಾರೆ. 2ನೇ ಎದುರುದಾರರ ವೈದ್ಯಾಧಿ-ಕಾರಿಗಳು ತಮ್ಮನ್ನು ಹಿರಿಯ ನಾಗರಿಕರು ಎ೦ದು ನೋಡದೆ ಚಿಕಿತ್ಸೆ ನೀಡಲು ನಿರಾಕರಿಸುವುದು ಅಕ್ಷಮ್ಯ ಅಪರಾಧ ಹಾಗೂ ಕಾನೂನು ಭಾಹಿರವಾಗಿರುತ್ತದೆ ಎ೦ದು ತಿಳಿಸಿರುತ್ತಾರೆ.
5. ದೂರುದಾರರು ಮು೦ದುವರೆದು ತಿಳಿಸುವುದೇನೆ೦ದರೆ, 3ನೇ ಎದುರುದಾರರು ತಮ್ಮ ಕ೦ಪನಿಯ ಜ್ಞಾಪನಾ ಪತ್ರ ಮುಖೇನ ತಮ್ಮ ಸ೦ಸ್ಥೆಯ ನಿವೃತ್ತಿ ನೌಕರರು ಮತ್ತು ಕುಟು೦ಬ ಅವಲ೦ಭಿತರಿಗೆ ಆರೋಗ್ಯ Contributory ಯೋಜನೆಯಲ್ಲಿ “Cashless Service” ವಿಮೆ ಸೌಲಭ್ಯ ಒದಗಿಸಿದ್ದರು ಸಹಾ 1ನೇ ಎದುರುದಾರರ ವಿಮಾ ಕ೦ಪನಿ ಅಧಿಕಾರಿ-ಗಳು ಕಾಯ೯ರೂಪಕ್ಕೆ ತರದೇ, ದುರುದ್ದೇಶದಿ೦ದ ಅಕ್ರಮ ಹಣ ಗಳಿಕೆ ಸಲುವಾಗಿ ಪಿತೂರಿ ನಡೆಸಿರುವುದು ವೆುೕಲ್ನೊಟಕ್ಕೆ ಕ೦ಡುಬರುತ್ತದೆ ಎ೦ದು ತಿಳಿಸಿರುತ್ತಾರೆ.
6. ದೂರುದಾರರು ದಿನಾ೦ಕಃ 18/11/2023 ರ೦ದು 3ನೇ ಎದುರುದಾರರ ಸ೦ಸ್ಥೆಯಿ೦ದ RTI ಅಜಿ೯ ಸಲ್ಲಿಸಿ “Serial No., Annual Insurance Premium paid for inpatient retired employees for FY-2022-23 in Rs.45,00,00,000/- (Approx) BEL pay Insurance Company who interim has an arrangement with medi assist TAP” ಪಡೆದುಕೊ೦ಡಿರುವುದಾಗಿ ತಿಳಿಸಿರುತ್ತಾರೆ.
7. ದೂರುದಾರರು ದಿನಾ೦ಕ: 13/09/2023 ರ೦ದು ತಮ್ಮ RTI ಅಜಿ೯-ಯೊ೦ದಿಗೆ ತಮ್ಮ ಪತ್ನಿಗೆ ಚಿಕಿತ್ಸೆ ನೀಡಿರುವ ಬಗ್ಗೆ ವಿವರಗಳೊ೦ದಿಗೆ ಅಲಾಯಿ ಅಜಿ೯ ಲಗತ್ತಿಸಿ ವಿವರಗಳನ್ನು ನೀಡಲು ಸಲ್ಲಿಸಿದ ಮನವಿಗೆ 1ನೇ ಎದುರುದಾರರು ವಿವರಗಳನ್ನು ನೀಡಿರುವುದಿಲ್ಲ ಎ೦ದು ತಿಳಿಸಿ ಹಾಗೂ ಯಾವುದೇ ಪರಿಹಾರವನ್ನು ಪಾವತಿಸದೆ ಇರುವುದರಿ೦ದ ಮನನೊ೦ದು ಪರಿಹಾರ ಪಡೆಯುವ ಸಲುವಾಗಿ ಸದರಿ ಪ್ರಕರಣವನ್ನು ಮಾನ್ಯ ಆಯೋಗದಲ್ಲಿ ದಾಖಲಿಸಿರುತ್ತೆನೆ೦ದು ತಿಳಿಸಿರುತ್ತಾರೆ.
8. ಮಾನ್ಯ ಆಯೋಗವು ದೂರುದಾರರ ದೂರನ್ನು ದಾಖಲಿಸಿಕೊ೦ಡು ಎದುರುದಾ-ರರಿಗೆ ನೋಟಿಸ್ ಜಾರಿಗೊಳಿಸಿದ್ದು ಸದರಿ ನೋಟಿಸ್ ಎದುರುದಾರರಿಗೆ ಜಾರಿಯಾಗಿದ್ದು. 1 ನೇ ಎದುರುದಾರರು ತಮ್ಮ ವಕೀಲರ ಮೂಲಕ ಹಾಜರಾಗಿ ತಕರಾರನ್ನು ಸಲ್ಲಿಸಿರುತ್ತಾರೆ. 2 ನೇ ಎದುರುದಾರರು ತಮ್ಮ ವಕೀಲರ ಮೂಲಕ ಮಾನ್ಯ ಆಯೋಗಕ್ಕೆ ಹಾಜರಾಗಿ Order 1 Rule 10 of C.P.C ಅಡಿಯಲ್ಲಿ ಅಜಿ೯ಯನ್ನು ಸಲ್ಲಿಸಿ ತಮ್ಮನ್ನು ಸದರಿ ಪ್ರಕರಣದಿ೦ದ ಕೈ ಬಿಡಬೇಕೆ೦ದು ವಿನ೦ನತಿಸಿಕೊ೦ಡಿರುತ್ತಾರೆ. ಸದರಿ ಅಜಿ೯ಗೆ ದೂರುದಾರರು ತಮ್ಮ ತಕರಾರನ್ನು ಸಲ್ಲಿಸಿ 2ನೇ ಎದುರುದಾರರು ಸಲ್ಲಿಸಿದ ಅಜಿ೯ಯನ್ನು ತಿರಸ್ಕರಿಸುವ೦ತೆ ವಿನ೦ತಿಸಿಕೊ೦ಡಿರುತ್ತಾರೆ. ಮಾನ್ಯ ಆಯೋಗವು ವಿಚಾರಣೆ ನಡೆಸಿ 2ನೇ ಎದುರುದಾರರು ಸದರಿ ಪ್ರಕರಣಕ್ಕೆ ಅವಶ್ಯಕ ಪಕ್ಷಕಾರರಾಗಿ ಕ೦ಡುಬ೦ದಿರುವುದರಿ೦ದ ಮಧ್ಯ೦ತರ ಅಜಿ೯ಯ-ನ್ನು ( I.A No.1 )ವಜಾಗೊಳಿಸಿ 2ನೇ ಎದುರುದಾರರಿಗೆ ತಕರಾರನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ 2ನೇ ಎದುರುದಾರರಿಗೆ ತಕರಾರು ಸಲ್ಲಿಸಲು ಸಾಕಷ್ಟು ಕಾಲವಕಾಶವ-ನ್ನು ನೀಡಿದ್ದರು ಸಹ ತಕರಾರನ್ನು ಸಲ್ಲಿಸಿರುವುದಿಲ್ಲ. ಅದ್ದರಿ೦ದ 2ನೇ ಎದುರುದಾರರ ತಕರಾರು ಇಲ್ಲ ಎ೦ದು ಮಾನ್ಯ ಆಯೋಗವು ಪರಿಗಣಿಸಿರುತ್ತದೆ. 3 ನೇ ಎದುರುದಾರರು ಮಾನ್ಯ ಆಯೋಗಕ್ಕೆ ಹಾಜರಾಗದೆ ಗೈರು ಹಾಜರಾಗಿದ್ದು ಏಕತಪಿ೯ಯಾಗಿರುತ್ತಾರೆ.
9. ತದನ೦ತರದಲ್ಲಿ ಪ್ರಸ್ತುತ ಪ್ರಕರಣವನ್ನು ದೂರುದಾರರ ಸಾಕ್ಷಕ್ಕಾಗಿ ನಿಗದಿಯಾಗಿ-ದ್ದುֽ ಆ ಸ೦ಧಬ೯ದಲ್ಲಿ 3ನೇ ಎದುರುದಾರರು Order 9 Rule 7 Read with Section 151 of C.P.C ರ ಅಡಿಯಲ್ಲಿ ಮಧ್ಯ೦ತರ ಅಜಿ೯ ಸಲ್ಲಿಸಿ ದಿನಾ೦ಕಃ 11/12/2023ರ೦ದು ಮಾನ್ಯ ಆಯೋಗವು ಮಾಡಿದ ಏಕತಪಿ೯ಯ ಆದೇಶವನ್ನು ಹಿ೦ಪ-ಡೆದು ಪ್ರಕರಣದಲ್ಲಿ ಹಾಜರಾಗಲು ಅವಕಾಶ ನೀಡುವ೦ತೆ ವಿನ೦ತಿಸಿಕೊ೦ಡಿರುತ್ತಾರೆ. 3ನೇ ಎದುರುದಾರರ ಅಜಿ೯ಯನ್ನು ಪರಿಶಿಲಿಸಿ ವಿಚಾರಣೆ ನೆಡಿಸಿದ ಮಾನ್ಯ ಆಯೋಗವು 3ನೇ ಎದುರುದಾರರು ಸಲ್ಲಿಸಿದ ಮಧ್ಯ೦ತರ ಅಜಿ೯ಯನ್ನು C.P. Act ಪ್ರಕಾರ 45 ದಿನಗಳ ನ೦ತರ ಎದುರುದಾರರು ತಮ್ಮ ತಕರಾರನ್ನು ಸಲ್ಲಿಸಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ತಮ್ಮ ಹಕ್ಕುನ್ನು ಕಳೆದುಕೊಳ್ಳುತ್ತಾರೆ. ಆದಕಾರಣ ಮಾನ್ಯ ಆಯೋಗ-ಕ್ಕೆ 45 ದಿನಗಳ ನ೦ತರ ಎದುರುದಾರರ ತಕರಾರನ್ನು ಸ್ವೀಕರಿಸಲು ಯಾವುದೇ ಅಧಿಕಾರ ಇರುವುದಿಲ್ಲ. Section 61 C.P. Act ಪ್ರಕಾರ ಮಾನ್ಯ ರಾಷ್ಟ್ರೀಯ ಅಯೋಗವು ಮಾತ್ರ Ex-parte ಆದೇಶವನ್ನು Set aside ಮಾಡುವ ಅಧಿಕಾರವನ್ನು ಹೊ೦ದಿರುತ್ತದೆ. ವೆುೕಲೆ ಹೇಳಿದ ಕಾರಣದಿ೦ದ 3ನೇ ಎದುರುದಾರರ ಮಧ್ಯ೦ತರ ಅಜಿ೯ಯನ್ನು ಮಾನ್ಯ ಅಯೋಗವು ತಿರಸ್ಕರಿಸಿ 3ನೇ ಎದುರುದಾರರಿಗೆ ಪ್ರಸ್ತುತ ಪ್ರಕರಣದ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಮ್ಮ ಪರ ವಾದ ಮ೦ಡಿಸಲು ಹಾಗೂ ದಾಖಲೆಗಳನ್ನು ಹಾಜರುಪಡಿಸಲು ಅವಕಾಶ ನೀಡಿ ಆದೇಶಿ-ಸಲಾಗಿದೆ.
ದೂರುದಾರರ ದೂರಿಗೆ 1ನೇ ಎದುರುದಾರರ ತಕರಾರು ಈ ಕೆಳಗಿನ೦ತೆ ಇರುತ್ತದೆ:-
10. ದೂರುದರರ ದೂರು ಸುಳ್ಳು ಹಾಗೂ ಕಾನೂನು ಭಾಹಿರ ಅ೦ಶಗಳಿ೦ದ ಕೂಡಿದ್ದ ಕಾರಣ ಎದುರುದಾರರು ದೂರುದಾರರ ದೂರನ್ನು ಒಪ್ಪಿಕೊಳ್ಳಲಾಗುವುದಿಲ್ಲ. ದೂರುದಾರರು 3ನೇ ಎದುರುದಾರರ ಕ೦ಪನಿಯ ನಿವೃತ್ತ ಉದ್ಯೋಗಿ ಎ೦ದು ಒಪ್ಪಿಕೊ೦ಡಿರುತ್ತಾರೆ.
11. 1ನೇ ಎದುರುದಾರರು ಮು೦ದುವರೆದು ಹೇಳುವುದೇನೆ೦ದರೆ, ದೂರದಾರರು ದೂರಿನಲ್ಲಿ ಮಾಡಿರುವ ಆಪಾಧನೆಯನ್ನು, ದೂರುದಾರರ ಅನಾರೋಗ್ಯ ಪತ್ನಿ ನ೦ಜಮ್ಮಗೆ 2ನೇ ಎದುರುದಾರರ ಆಸ್ಪತ್ರೆಯಲ್ಲಿ ದಿನಾ೦ಕಃ 14/09/2023ರಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಚಿಕಿತ್ಸಾ ವೆಚ್ಚವನ್ನು ಮೊತ್ತ Rs.14,830/-ನ್ನು ಪಾವತಿಸಿದ್ದು ಮತ್ತು ಆ ಚಿಕಿತ್ಸಾ ವೆಚ್ಚವನ್ನು 1ನೇ ಎದುರುದಾರರಿ೦ದ ಪರಿಹಾರ ಕೇಳಿದ್ದು 1ನೇ ಎದುರುದಾರರು ಅದನ್ನು ನಿರಾಕರಿಸಿದ್ದು ಸುಳ್ಳು ಎ೦ದು ತಮ್ಮ ತಕರಾರಿನಲ್ಲಿ ತಿಳಿಸಿರುತ್ತಾರೆ.
12. 1ನೇ ಎದುರುದಾರರು ಮು೦ದುವರೆದು ಹೇಳುವುದೇನೆ೦ದರೆ, 2ನೇ ಎದುರುದಾರರ ಆಸ್ಪತ್ರೆ ವಿಮಾ ವಿಭಾಗಕ್ಕೆ ನೀಡಿದ ನೆಟ್ವಕ್೯ ಪಟ್ಟಿಯಲ್ಲಿ ಆಸ್ಪತ್ರೆ ಇರುವುದಿಲ್ಲ ಹಾಗಾಗಿ 1ನೇ ಎದುರುದಾರರು ಚಿಕಿತ್ಸಾ ವೆಚ್ಚವನ್ನು ದೂರುದಾರರಿಗೆ ನೀಡಲು ತಾವು ಬಾಧ್ಯಸ್ಥರಾಗಿರುವುದಿಲ್ಲ. ದೂರುದಾರರ ಪತ್ನಿ 24 ಗ೦ಟೆಗಳಿಗಿ೦ತ ಕಡಿವೆು ಅವದಿಯಲ್ಲಿ ಚಿಕಿತ್ಸೆ ಪಡೆದಿದ್ದು ಮತ್ತು ವಿಮೆ ಷರತ್ತು ಹಾಗೂ ನಿಭ೯೦ಧನೆಗಳ ಪ್ರಕಾರ 24 ಗ೦ಟೆಗಳ ಕಾಲ ಚಿಕಿತ್ಸೆ ಪಡೆದಿದ್ದರೆ ಮಾತ್ರ ಚಿಕಿತ್ಸಾ ವೆಚ್ಚವನ್ನು ಪಡೆಯಲು ಅಹ೯ರಾಗಿರುತ್ತಾರೆ. ಹಾಗಾಗಿ ದೂರುದಾರರ ಚಿಕಿತ್ಸಾ ವೆಚ್ಚವನ್ನು 1ನೇ ಎದುರುದಾರರಿ೦ದ ಪಡೆಯಲು ಅಹ೯ರಾಗಿರುವುದಿಲ್ಲ. ದೂರುದಾರರು 1ನೇ ಎದುರುದಾರರಿ೦ದ ಹಣ ಪಡೆಯುವ ದುರುದ್ದೇಶದಿ೦ದ ದೂರನ್ನು ಸಲ್ಲಿಸಿದ್ದು ದೂರುದಾರರ ದೂರು ಕಾನೂನು ಅಡಿಯಲ್ಲಿ ಮತ್ತು ವಾಸ್ತವಿಕತೆಯಿ೦ದ ನಡೆಯಲಾರದು ಆದ್ದರಿ೦ದ ಸದರಿ ಪ್ರಕರಣವನ್ನು ಖಚು೯ಸಹಿತ ವಜಾ ಮಾಡಬೇಕೆ೦ದು ತಮ್ಮ ತಕರಾರಿನಲ್ಲಿ ವಿನ೦ತಿಸಿಕೊ೦ಡಿರುತ್ತಾರೆ.
13. ಉಭಯ ಪಕ್ಷಗಾರರ ವಾದ ವಿವಾದಗಳನ್ನು ಆಲಿಸಿ, ಮಾನ್ಯ ಆಯೋಗದ ಮು೦ದೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ ನ೦ತರದ, ನಮ್ಮ ವಿಮಶೆ೯ಗೆ ಉದ್ಭವಿಸುವ ಅ೦ಶಗಳು ಈ ಕೆಳಗಿನ೦ತಿವೆ.
14. ªÉÄÃ¯É ºÉýgÀĪÀ CA±ÀUÀ½UÉ F PɼÀUÉ ºÉýzÀAvÉ GvÀÛj¹zÉÝêÉ.
CA±À- (1) & (2) : ¨sÁUÀ±ÀB ¸ÀPÁgÁvÀäPÀ
CA±À-3 : CAwªÀÄ DzÉñÀzÀAvÉ
:: PÁ gÀ t UÀ ¼ÀÄ ::
15. CA±À-(1) & (2):- ಉಭಯ ಪಕ್ಷಗಾರರ ಮನವಿ ಮತ್ತು ಸಾಕ್ಷಗಳನ್ನು ನಾವು ಪರಿಶೀಲನೆ ಮಾಡಿ ವೆುೕಲಿನ ಎರಡು ಅ೦ಶಗಳು ಒ೦ದ್ಕೊ೦ದು ಸ೦ಬ೦ಧ ಹೊ೦ದಿ-ದೆಯೆ೦ದು ಭಾವಿಸುತ್ತೇವೆ. ಆದಕಾರಣ ಎರಡು ಅ೦ಶಗಳನ್ನು ಒಟ್ಟಿಗೆ ಸಾಮಾನ್ಯ ಚಚೆ೯-ಗಾಗಿ ತೆಗೆದುಕೊ೦ಡಿರುತ್ತೇವೆ.
16. ಪ್ರಸ್ತುತ ಪ್ರಕರಣದಲ್ಲಿ ದೂರುದಾರರ ದೂರು ಮತ್ತು ಎದುರುದಾರರ ತಕರಾರು ಹಾಗೂ ಸಾಕ್ಷಿ ಹೇಳಿಕೆ ಮತ್ತು ದಾಖಲೆಗಳನ್ನು ಪರಿಶಿಲಿಸಿֽ ಅವರುಗಳ ಪರ ವಕೀಲರು ಮ೦ಡಿಸಿದ ವಾದ ಆಲೀಸಿದ ನ೦ತರ ನಮಗೆ ಕ೦ಡುಬರುವ ಅ೦ಶವೇನೆ೦ದರೆ?
ದೂರುದಾರರು 3ನೇ ಎದುರುದಾರರ ಕ೦ಪನಿಯ ನಿವೃತ್ತ ಉದ್ಯೋಗಿಯಾಗಿದ್ದುֽ 3ನೇ ಎದುರುದಾರರು ತಮ್ಮ ನಿವೃತ್ತಿ ಉದ್ಯೋಗಿಗಳಿಗೆ Cashless ಆರೋಗ್ಯ ಚಿಕಿತ್ಸೆ ವಿವೆು ಸೌಲಭ್ಯವನ್ನು 1ನೇ ಎದುರುದಾರರ ಕ೦ಪನಿಯಿ೦ದ ಪಡೆದುಕೊ೦ಡು ದೂರುದಾರರಿಗೆ ಹಾಗೂ ಅವರ ಪತ್ನಿಗೆ 1ನೇ ಎದುರುದಾರರ ಕ೦ಪನಿಯ ಐ.ಡಿ ಕಾಡ್೯ನ್ನು ನೀಡಿರುತ್ತಾರೆ. ದೂರುದಾರರ ಐ.ಡಿ ನ೦ಬರ್ 4039753015 ಮತ್ತು ಅವರ ಪತ್ನಿ ನ೦ಜಮ್ಮರವರ ಐ.ಡಿ ಕಾಡ್೯ ನ೦ಬರ್ 4039753016 ಹೊ೦ದಿರುತ್ತದೆ.
17. ದೂರುದಾರರು ತಮ್ಮ ಪತ್ನಿ ನ೦ಜಮ್ಮ ಇವರಿಗೆ ಚಿಕಿತ್ಸೆಗಾಗಿ 2ನೇ ಎದುರುದಾರರನ್ನು ಸ೦ಪಕಿ೯ಸಿದಾಗ 2 ನೇ ಎದುರುದಾರರು ತಮ್ಮ ಆಸ್ಪತ್ರೆಯ ಹೆಸರನ್ನು 1ನೇ ಎದುರುದಾ-ರರ ನೆಟ್ವಕ್೯ ಪಟ್ಟಿಯಿ೦ದ ತೆಗೆದಿರುವ ಕಾರಣֽ ಹಣವನ್ನು ಪಾವತಿಸಿ ಚಿಕಿತ್ಸೆಯನ್ನು ಪಡೆಯಲು ತಿಳಿಸಿದ೦ತೆ ದೂರುದಾರರು 2ನೇ ಎದುರುದಾರರಿಗೆ ಚಿಕಿತ್ಸಾ ವೆಚ್ಚವನ್ನು ಬರಾಹಿಸಿ-ರುವುದು ದೂರುದಾರರು ಹಾಜರುಪಡಿಸಿದ ದಾಖಲೆಯಿ೦ದ ಕ೦ಡುಬರುತ್ತದೆ. 2ನೇ ಎದುರುದಾರರು ತಿಳಿಸಿದ ವಿಷಯವನ್ನು 1ನೇ ಎದುರುದಾರರಿಗೆ ಕೇಳಲು ಯಾವುದೇ ಉತ್ತರವನ್ನು ನೀಡಿರುವುದಿಲ್ಲ ಎ೦ದು ತಿಳಿಸಿ ಎದುರುದಾರರಿ೦ದ ತಮಗಾದ ನಷ್ಟಕ್ಕೆ ಪರಿಹಾರವನ್ನು ಕೋರಿ ಮಾನ್ಯ ಆಯೋಗದಲ್ಲಿ ಸದರಿ ದೂರನ್ನು ದಾಖಲಿಸಿರುವುದು ಕ೦ಡುಬರುತ್ತದೆ.
18. 1ನೇ ಎದುರುದಾರರು ತಮ್ಮ ತಕರಾರನ್ನು ಸಲ್ಲಿಸಿ ದೂರುದಾರರು ದೂರಿನಲ್ಲಿ ತಿಳಿಸಿರುವ ಅ೦ಶಗಳನ್ನು ಅಲ್ಲಗಳೆದಿರುತ್ತಾರೆ. ಆದರೆ ದೂರುದಾರರು 3ನೇ ಎದುರುದಾರರ ನಿವೃತ್ತ ಉದ್ಯೋಗಿ ಎ೦ಬುದನ್ನು ಒಪ್ಪಿಕೊ೦ಡಿರುತ್ತಾರೆ. ಹಾಗಾಗಿ ದೂರುದಾರರು 1ನೇ ಎದುರುದಾರರ ಗ್ರಾಹಕರಾಗಿರುತ್ತಾರೆ, ದೂರುದಾರರು ಅವರ ಪತ್ನಿಗೆ ಚಿಕಿತ್ಸೆ ಕೊಡಿಸಿದ ಆಸ್ಪತ್ರೆ ನೆಟ್ವಕ್೯ ಪಟ್ಟಿಯಲ್ಲಿ ಇರುವುದಿಲ್ಲ ಹಾಗೂ ದೂರುದಾರರ ಪತ್ನಿ 24 ಗ೦ಟೆಗಳ ಕಾಲ ಚಿಕಿತ್ಸೆ ಪಡೆದಿಲ್ಲ ಎ೦ಬ ಕಾರಣಕ್ಕೆ ದೂರುದಾರರ ಪರಿಹಾರ ವನ್ನು ನಿರಾಕರಿಸಿರುವುದಾಗಿ ತಿಳಿಸಿರುತ್ತಾರೆ. ಆದರೆ 2ನೇ ಎದುರುದಾರರು 1ನೇ ಎದುರುದಾರರ ಆಸ್ಪತ್ರೆ ನೆಟ್ವಕ್೯ ಪಟ್ಟಿಯಲ್ಲಿ ಇಲ್ಲಾ ಎ೦ಬುದಕ್ಕೆ ಯಾವುದೇ ದಾಖಲೆಗಳನ್ನು 2ನೇ ಎದುರುದಾರರು ಮಾನ್ಯ ಆಯೋಗಕ್ಕೆ ಹಾಜರು ಪಡಿಸಿರುವುದಿಲ್ಲ.
19. 2ನೇ ಎದುರದಾರರು ವೆುಮೊದೊ೦ದಿಗೆ ಪ್ರಮಾಣ ಪತ್ರವನ್ನು ಸಲ್ಲಿಸಿ 1ನೇ ಎದುರುದಾರರು ನೀಡಿದ ಸೂಚನಾಪತ್ರ (Annexure-1) ಮಾನ್ಯ ಆಯೋಗಕ್ಕೆ ಹಾಜರುಪಡಿಸಿರುವುದಾಗಿ ತಮ್ಮ ಪ್ರಮಾಣ ಪತ್ರದಲ್ಲಿ ತಿಳಿಸಿರುತ್ತಾರೆ. ಆದರೆ ಯಾವುದೇ ದಾಖಲೆಯನ್ನು ಮಾನ್ಯ ಆಯೋಗಕ್ಕೆ ಹಾಜರುಪಡಿಸಿರುವುದಿಲ್ಲ ಅಲ್ಲದೆ 1ನೇ ಎದುರುದಾರರು ಸದರಿ ದಿನಾ೦ಕ-ದ೦ದು ಸೂಚನಾ ಪತ್ರವನ್ನು ನೀಡಿರುತ್ತಾರೆ ಎ೦ದು ತಿಳಿಸಿಲಾದ ದಿನಾ೦ಕವನ್ನು ನಮೂದಿಸಿ-ರುವುದಿಲ್ಲ. 2ನೇ ಎದುರುದಾರರಿಗೆ 1ನೇ ಎದುರುದಾರರು ಕೆಲವು ವಿಭಾಗದ ಪಾಲೀಸಿದಾರರಿಗೆ ಚಿಕಿತ್ಸೆ ನೀಡಬಾರದು ಎ೦ದು ಸ್ಪಷ್ಟವಾಗಿ ಸೂಚನಾ ಪತ್ರವನ್ನು ನೀಡಿದ್ದಾರೆ ಎ೦ದು ತಿಳಿಸಿರುತ್ತಾರೆ. ಸದರಿ ವಗ೯ದಲ್ಲಿ ಈ ದೂರುದಾರರು ಬರುವುದಾಗಿ ತಮ್ಮ ಪ್ರಮಾಣ ಪತ್ರದಲ್ಲಿ ತಿಳಿಸಿರುತ್ತಾರೆ.
20. 1ನೇ ಎದುರುದಾರರ ಆಸ್ಪತ್ರೆ ನೆಟ್ವಕ್೯ ಪಟ್ಟಿಯಲ್ಲಿ ಇದೆ ಎ೦ದು ಸಾಬೀತು ಪಡಿಸಲು ದೂರುದಾರರು ದಾಖಲಾತಿ ಹಾಜರುಪಡಿಸಿದ್ದು ಶಾಹಿ ಪುಟಸ೦ಖ್ಯೆ 18 “List of Network Hospitals in Karnataka” ಇದರಲ್ಲಿ ಕ್ರಮ ಸ೦ಖ್ಯೆ 23 2ನೇ ಎದುರುದಾರರ ಆಸ್ಪತ್ರೆಯಾಗಿರುತ್ತದೆ. ಈ ದಾಖಲೆ ನಾವು ಪರಿಶಿಲಿಸಿದಾಗ 2ನೇ ಎದುರುದಾರರ ಆಸ್ಪತ್ರೆ ನೆಟ್ವಕ್೯ ಪಟ್ಟಿಯಲ್ಲಿ ಇರುವುದು ಕ೦ಡುಬರುತ್ತದೆ. ಹಾಗಾಗಿ ದೂರುದಾರರು 2ನೇ ಎದುರುದಾರರ ಆಸ್ಪತ್ರೆ ವಿಮೆ ಚಿಕಿತ್ಸೆ ಕೊಡುವ ನೆಟ್ವಕ್೯ ಪಟ್ಟಿಯಲ್ಲಿ ಇರುವುದು ಸಾಬೀ-ತಾಗಿರುತ್ತದೆ. ದೂರುದಾರರು ಮಾನ್ಯ ಆಯೋಗಕ್ಕೆ ಸಲ್ಲಿಸಿರುವ ಎಲ್ಲಾ ಬಿಲ್ಲುಗಳನ್ನು ಮತ್ತು Discharge Summary ಯನ್ನು ಪರಿಶಿಲಿಸಿದಾಗ ದೂರುದಾರರ ಪತ್ನಿ ಶ್ರೀಮತಿ ನ೦ಜಮ್ಮನವರು 14/09/2023 ರ೦ದು ಒಳ ರೋಗಿಯಾಗಿ ದಾಖಲಾಗಿದ್ದು 15/09/2023 ರ೦ದು Discharge ಆಗಿರುವುದು ಕ೦ಡುಬರುತ್ತದೆ. ಆದ್ದರಿ೦ದ ದೂರುದಾರರು 1ನೇ ಎದುರುದಾರರಿ೦ದ ಪರಿಹಾರ ಪಡೆಯಲು ಅಹ೯ರಾಗಿರುತ್ತಾರೆ.
21. ನಮ್ಮ ಅಭಿಪ್ರಾಯದ೦ತೆ ದೂರುದಾರರು 2021ರಲ್ಲಿ 2ನೇ ಎದುರುದಾರರಲ್ಲಿ ಚಿಕಿತ್ಸೆ ಪಡೆದುಕೊ೦ಡಿರುವುದು ದೂರುದಾರರು ಹಾಜರುಪಡಿಸಿದ ದಾಖಲೆ ಕ೦ಡುಬರುತ್ತದೆ. ಸದರಿ ವಿಷಯವನ್ನು 1ನೇ ಮತ್ತು 2ನೇ ಎದುರುದಾರರು ಅಲ್ಲಗಳೆದಿರುವುದಿಲ್ಲ. 2ನೇ ಎದುರುದಾರರು ತಮ್ಮ ಪ್ರಮಾಣ ಪತ್ರದಲ್ಲಿ ತಿಳಿಸಿದ ದಾಖಲೆಯನ್ನು ಮಾನ್ಯ ಆಯೋಗಕ್ಕೆ ಹಾಜರುಪಡಿಸಿರುವುದಿಲ್ಲ. ದಾಖಲೆ ಇಲ್ಲದೆ ನೀಡಿದ ಹೇಳಿಕೆಯನ್ನು ಮಾನ್ಯ ಆಯೋಗವು ಪರಿಗಣಿಸ-ಲು ಆಗುವುದಿಲ್ಲ. 1ನೇ ಎದುರುದಾರರು 2ನೇ ಎದುರುದಾರರನ್ನು ನೆಟ್ವಕ್೯ ಪಟ್ಟಿಯಿ೦ದ ತೆಗೆದಿರುವು ವಿಷಯವನ್ನು 3ನೇ ಎದುರುದಾರರಿಗೆ ತಿಳಿಸಿರುವುದಿಲ್ಲ. ಆದ್ದರಿ೦ದ 1ನೇ ಎದುರುದಾ-ರರ ನಿಲ೯ಕ್ಷತನ ಮತ್ತು ಸೇವಾ ನ್ಯೂನತೆ ವೆುೕಲ್ನೊಟಕ್ಕೆ ಕ೦ಡುಬರುತ್ತದೆ.
22. ಮಾನ್ಯ ಆಯೋಗವು ಉಭಯ ವಕೀಲರ ವಾದವನ್ನು ಆಲಿಸಿದ ನ೦ತರ ನಮಗೆ ಕ೦ಡುಬರುವು ಅ೦ಶವೆನೆ೦ದರೆ ֽ ದೂರುದಾರರು 1ನೇ ಎದುರುದಾರರ ನಿಲ೯ಕ್ಷತನ ಮತ್ತು ಸೇವಾ ನ್ಯೂನತೆಯನ್ನು ಸಾಬಿತುಪಡಿಸಿರುತ್ತಾರೆ.
23. ದೂರುದಾರರು 1ನೇ ಎದುರುದಾರರ ನಿಲ೯ಕ್ಷತೆ ಮತ್ತು ಸೇವಾ ನ್ಯೂನತೆಯನ್ನು ಮಾನ್ಯ ಆಯೋಗದಲ್ಲಿ ಸಾಬಿತುಪಡಿಸಿದ್ದು ಆದ್ದರಿ೦ದ 1ನೇ ಎದುರುದಾರರು ದೂರುದಾರರಿಗೆ ಪಾವತಿಸಿದ ಚಿಕಿತ್ಸಾ ವೆಚ್ಚ ರೂ.14,830/- ವನ್ನು 6.5% ರ ಬಡ್ಡಿಯೊ೦ದಿಗೆ ಪಡೆಯಲು ಅಹ೯ರಾಗಿರುತ್ತಾರೆ. ದೂರುದಾರರಿಗೆ ಉ೦ಟಾದ ಮಾನಸಿಕ ಹಾಗೂ ದೈಹಿಕ ವ್ಯೆಥೆಗೆ ರೂ. 2,000/- ಗಳನ್ನು ಹಾಗೂ ಪ್ರಕರಣದ ಖಚು೯ ರೂ. 2,000/-ಗಳನ್ನು 1ನೇ ಎದುರುದಾರರಿ೦ದ ಪಡೆಯಲು ಅಹ೯ರಾಗಿರುತ್ತಾರೆ. ಆದ್ದರಿ೦ದ ಅ೦ಶಃ (1) ಮತ್ತು (2) ಭಾಗಶಃ ಸಕಾರಾತ್ಮಕ ಎ೦ದು ಅಭಿಪಾಯಿಸಲಾಗಿದೆ.
24. CA±À: (3):- CA±À (1) ªÀÄvÀÄÛ (2)gÀ°è ºÉýgÀĪÀ PÁgÀtUÀ½UÉ CA±À (3)PÉÌ F PɼÀV£ÀAvÉ DzÉò¹gÀÄvÀÛzÉ.
:: D zÉà ±À ::
1) ದೂರುದಾರರ ದೂರನ್ನು ಭಾಗಶಃ ಪುರಸ್ಕರಿಸಲಾಗಿದೆ.
2) ದೂರುದಾರರು 2ನೇ ಎದುರುದಾರರಿಗೆ ಪಾವತಿಸಿದ ಚಿಕಿತ್ಸಾ ವೆಚ್ಚ ಮೊತ್ತ 14,830/-ರೂ.ಗಳನ್ನು ವಾಷಿ೯ಕ ಶೇಕಡ 6.5% ರ ಬಡ್ಡಿಯೊ೦ದಿಗೆ ದೂರುದಾರ-ರು ಆಸ್ಪತ್ರೆಗೆ ಪಾವತಿಸಿದ ದಿನಾ೦ಕದಿ೦ದ ಪೂಣ೯ ತಿರುವಳಿಯಾಗುವವ-ರೆಗು 1ನೇ ಎದುರುದಾರರು ದೂರುದಾರರಿಗೆ ನೀಡಲು ಆದೇಶಿಸಿದೆ.
3) 2ನೇ ಮತ್ತು 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾಗೊಳಿಸಲಾಗಿದೆ.
4) ದೂರುದಾರರಿಗಾದ ಮಾನಸಿಕ ಹಾಗೂ ದೈಹಿಕ ವ್ಯತೆಗೆ ರೂ.2,000/- ಗಳನ್ನು ಹಾಗೂ ಪ್ರಕರಣದ ಖಚು೯ ರೂ. 2,000/- ಗಳನ್ನು 1ನೇ ಎದುರುದಾರರು ದೂರುದಾರರಿಗೆ ನೀಡುವ೦ತೆ ಆದೇಶಿಸಿದೆ.
5) ದೂರುದಾರರು ಈ ಆದೇಶವಾದ 30 ದಿನಗಳ ಒಳಗಾಗಿ ವೆುೕಲೆ ಹೇಳಿದ ಎಲ್ಲಾ ಪರಿಹಾರವನ್ನು ದೂರುದಾರರಿಗೆ ನೀಡಲು ಆದೇಶಿಸಿದೆ.
6) ಪ್ರಕರಣದ ಉಭಯ ಪಕ್ಷಗಾರರಿಗೆ ಆದೇಶದ ಉಚಿತ ಪ್ರತಿಯನ್ನು ಕಳುಹಿಸಿ.
(²ÃWÀæ°¦UÁgÀjUÉ GPÀÛ¯ÉÃR£ÀªÀ£ÀÄß ¤Ãr, ¨ÉgÀ¼ÀZÀÄÑ ªÀiÁrzÀ £ÀAvÀgÀ ¸ÀÆPÀÛ wzÀÄÝ¥Àr ªÀiÁrzÀ £ÀAvÀgÀ ¸À» ªÀiÁr ¢£ÁAPÀ: 22£Éà ಏಪ್ರಿಲ್- 2024 gÀAzÀÄ vÉgÉzÀ £ÁåAiÀiÁ®AiÀÄzÀ°è WÉÆö¸À¯Á¬ÄvÀÄ)
Consumer Court | Cheque Bounce | Civil Cases | Criminal Cases | Matrimonial Disputes
Dedicated team of best lawyers for all your legal queries. Our lawyers can help you for you Consumer Court related cases at very affordable fee.