Karnataka

Bangalore Urban

CC/458/2021

Smt.B.Lakshmi - Complainant(s)

Versus

Neem Holiday Pvt. Ltd. - Opp.Party(s)

M.K.Bhaskaraiah

29 Oct 2022

ORDER

DISTRICT CONSUMER DISPUTES REDRESSAL COMMISSION,
8TH FLOOR, B.W.S.S.B BUILDING, K.G.ROAD,BANGALORE-09
 
Complaint Case No. CC/458/2021
( Date of Filing : 18 Sep 2021 )
 
1. Smt.B.Lakshmi
W/o C.R.Prashanth, Aged about 39 years, R/a No.105/9, 1st main, Sri Raghavendra Nilaya, Mallathahalli, Bengaluru-560056
Karnataka
...........Complainant(s)
Versus
1. Neem Holiday Pvt. Ltd.
No.501, Synergy Business Park, Behind Pravasi Industrial Estate, Sahakarwadi, Off. Aarey road, Goregaon East, Mumbai-400063
Maharastra
2. Neem Travel Like you Desire
Neem Holiday pvt. ltd., No.SG 07, Ground floor,South block, Manipal Centre, No.47, Dickenson road, Off. M.G.road, Bengaluru-42. Rep. by Managing Director
Karnataka
............Opp.Party(s)
 
BEFORE: 
 HON'BLE MRS. M. SHOBHA PRESIDENT
 HON'BLE MS. Renukadevi Deshpande MEMBER
 HON'BLE MR. H. Janardhan MEMBER
 
PRESENT:
 
Dated : 29 Oct 2022
Final Order / Judgement
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ:   1. ಶ್ರೀಮತಿ ಎಂ.ಶೋಬಾ,  ಅಧ್ಯಕ್ಷರು,
         2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
         3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
 
ಆದೇಶ 
 
ಸಿ.ಸಿ.ಸಂಖ್ಯೆ:458/2021
ಆದೇಶ ದಿನಾಂಕ 29ನೇ ಅಕ್ಟೋಬರ್ 2022
ಶ್ರೀಮತಿ. ಬಿ.ಲಕ್ಷ್ಮಿ
ಕೋಂ. ಶ್ರೀ ಸಿ.ಆರ್.ಪ್ರಶಾಂತ್
39 ವರ್ಷ, ನಂ.105/9, 1ನೇ ಮೇನ್, ಶ್ರೀ ರಾಘವೇಂದ್ರ ನಿಲಯ, ಮಲ್ಲತ್ತಹಳ್ಳಿ, ಬೆಂಗಳೂರು 560 056.
 
(ಶ್ರೀ ಎಂ.ಕೆ.ಭಾಸ್ಕರನ್ ವಕೀಲರು)                                   
 
 
-ಪಿರ್ಯಾದುದಾರರು
       ವಿರುದ್ಧ
1. ನೀಮ್ ಹಾಲಿಡೇಸ್ ಪ್ರೈ.ಲಿ.
501, ಸೈನರ್ಜಿ ಬಿಸಿನೆಸ್ ಪಾರ್ಕ್,
ಪ್ರವಾಸಿ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಬಾಗ, ಸಹಕಾರವಾಡಿ, ಆಪ್.ಆರೇ ರಸ್ತೆ, ಗೊರೆಗಾವ್ ಈಸ್ಟ್, ಮುಂಬಯಿ 400 063.
 
2. ನೀಮ್ ಟ್ರಾವೆಲ್ ಲೈಕ್ ಯು ಡಿಸೈರ್, ನೀಮ್ ಹಾಲಿಡೇಸ್ ಪ್ರೈ.ಲಿ.
ನಂ.ಎಸ್‍ಜಿ 07, ನೆಲಮಹಡಿ, ಸೌತ್ ಬ್ಲಾಕ್, ಮನಿಪಾಲ್ ಸೆಂಟರ್, ನಂ47, ಡಿಕನ್ಸ್‍ನ್ ರಸ್ತೆ,
ಎಂ.ಜಿ.ರಸ್ತೆ, ಬೆಂಗಳೂರು 560 042.
ಪ್ರತಿನಿಧಿಸುವವರು ಮ್ಯಾನೇಜಿಂಗ್ ಡೈರೆಕ್ಟರ್/ಮ್ಯಾನೇಜರ್.
 
(ಹಾಜರಾಗಿರುವುದಿಲ್ಲ)
 
… ಎದುರುದಾರರು
 
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ 
ಮಹಿಳಾ ಸದಸ್ಯರು,
 
1. ದೂರುದಾರರು ಎದುರುದಾರರ ಮೇಲೆ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಕಲಂ 35 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, ಈ ಕೆಳಗಿನಂತೆ ಆದೇಶಿಸಲು ಕೋರಿರುತ್ತಾರೆ. 
ಎದುರುದಾರರು ದೂರುದಾರರಿಗೆ ರೂ.1,44,750/- ಗಳನ್ನು ಶೇಕಡ 18ರ ಬಡ್ಡಿಯಂತೆ ಪಾವತಿಯಾದ ದಿನಾಂಕದಿಂದ ಮರುಪಾವತಿಯಾಗುವವರೆಗೆ ಆದೇಶಿಸಬೇಕೆಂದು ಮತ್ತು ಮಾನಸಿಕ ಹಿಂಸೆ ಸಂಕಟಗಳಿಗಾಗಿ ರೂ.50,000/- ಗಳನ್ನು ಮತ್ತು ನ್ಯಾಯಾಲಯದ ಖರ್ಚು ರೂ.10,000/- ಗಳನ್ನು ಎದುರುದಾರರಿಂದ ಕೊಡಿಸುವಂತೆ ನಿರ್ದೇಶಿಸಬೇಕೆಂದು ಕೋರಿರುತ್ತಾರೆ. 
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ಎದುರುದಾರರು ವಿದೇಶದಲ್ಲಿ ವಿವಿಧ ದೇಶಗಳಿಗೆ ಪ್ರವಾಸವನ್ನು ನಡೆಸುತ್ತಿರುವ ಟ್ರಾವಲ್ ಏಜೆಂಟರಾಗಿದ್ದು, ವಿವಿಧ ದೇಶಗಳಿಗೆ ಪ್ರಯಾಣವನ್ನು ಬೆಳೆಸಲು ಗ್ರಾಹರನ್ನು ಆಹ್ವಾನಿಸುತ್ತಿರುತ್ತಾರೆ. ದೂರುದಾರರು ಜುಯಲ್ಸ್ ಆಫ್ ಯೂರೋಪ್ ಮತ್ತು ಇತರೆ ಸ್ಥಳಗಳಿಗೆ ಹೋಗುವ ಉದ್ದೇಶದಿಂದ ದಿನಾಂಕ 18.01.2020ರಂದು ರೂ.25,000/- ಗಳನ್ನು ಹಾಗೂ ದಿನಾಂಕ 25.02.2022ರಂದು ರೂ.75,000/- ಗಳನ್ನು ಮತ್ತು ದಿನಾಂಕ 03.03.2020ರಂದು ರೂ.44,750/-ಗಳನ್ನು ಎದುರುದಾರರಿಗೆ ಪಾವತಿಸಿರುತ್ತಾರೆ. ಇದೇ ವೇಳೆಗೆ ದೇಶದಲ್ಲಿ ಕೋವಿಡ್ 2019 ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸಗಳನ್ನು ನಡೆಸಲು ಅನುಮತಿ  ಸಿಗುತ್ತಿಲ್ಲವೆಂದು ಎದುರುದಾರರು ತಿಳಿಸಿದ್ದು, ಇದರಿಂದ ಎದುರುದಾರರು ಪ್ರವಾಸವನ್ನು ಮುಂದುವರೆಸಲು ಸಾದ್ಯವಿಲ್ಲ ಅದ್ದರಿಂದ ದೂರುದಾರರು ನೀಡಿರುವ ಮುಂಗಡ ಹಣವನ್ನು ಮರುಪಾವತಿಸುವಂತೆ ದೂರವಾಣಿ ಮುಖಾಂತರ ಹಾಗೂ ಈಮೇಲ್ ಮುಖಾಂತರ ಎದುರುದಾರರನ್ನು ಕೋರಲಾಗಿ, ಸದರಿಯವರು ಮುಂಗಡ ಹಣವನ್ನು ನೀಡಲು ನಿರಾಕರಿಸಿರುತ್ತಾರೆ. ಅದ್ದರಿಂದ ದೂರುದಾರರು ದಿನಾಂಕ 23.08.2021ರಂದು ಕಾನೂನು ನೋಟೀಸ್ ಅನ್ನು ನೀಡಿದ್ದು, ಎದುರುದಾರರು ಯಾವುದೇ ಜವಾಬನ್ನು ಕೊಡದೇ ಸೇವಾ ನ್ಯೂನತೆ ಎಸಗಿದ್ದರೆಂದು ಈ ಆಯೋಗದ ಮುಂದೆ ದೂರು ಸಲ್ಲಿಸಿರುತ್ತಾರೆ. 
3. ದೂರುದಾರರು ಕೊಟ್ಟ ದೂರನ್ನು ನೊಂದಾಯಿಸಿಕೊಂಡು ಎದುರುದಾರನಿಗೆ ನೋಟೀಸು ನೀಡಲಾಗಿ ಎದುರುದದಾರರು ಆಯೋಗಕ್ಕೆ ಹಾಜರಾಗಿರುವುದಿಲ್ಲ, ಆದ್ದರಿಂದ ಈ ಇವರನ್ನು ಏಕಪಕ್ಷೀಯವಾಗಿ ಇಡಲಾಗಿದೆ. ಎರಡನೇ ಎದುರುದಾರರಿಗೆ ಹೊಸ ದಿಗಂತ ಕನ್ನಡ ದಿನಪತ್ರಿಕೆಯಲ್ಲಿ ಪತ್ರಿಕಾ ಪ್ರಟಣೆ ಮೂಲಕ ನೋಟೀಸ್ ಪ್ರಕಟಿಸಿದ್ದು, ಆದರೂ ಎರಡನೇ ಎದುರುದಾರರು ಗೈರು ಹಾಜರಾಗಿರುತ್ತಾರೆ. ಇವರನ್ನು ಸಹ ಏಕಪಕ್ಷೀಯವಾಗಿ ಇಡಲಾಗಿದೆ.
4.   ದೂರುದಾರರು ಪ್ರಕರಣ ಸಾಬೀತು ಪಡಿಸಲು ನುಡಿ ಸಾಕ್ಷ್ಯವನ್ನು ಮತ್ತು ದಾಖಲೆಗಳನ್ನು ಹಾಜರುಪಡಿಸಿರುತ್ತಾರೆ. ದಾಖಲಾತಿಗಳನ್ನು ನಿಶಾನೆ ಪಿ1 ರಿಂದ ಪಿ5 ಎಂದು ಗುರುತಿಸಲಾಗಿದೆ. ದೂರನ್ನು ತೀರ್ಪಿಗಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ? 
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
2ನೇ ಅಂ± À - ಅಂತಿಮ ತೀರ್ಪಿನ ಪ್ರಕಾರ
 
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರರು ನೀಡಿರುವ ದೂರನ್ನು ಸುಧೀರ್ಘವಾಗಿ 2ರಲ್ಲಿ ವಿವರಿಸಲಾಗಿದೆ. ಎದುರುದಾರರಿಗೆ ಈ ಆಯೋಗದಿಂದ ನೋಟೀಸ್ ಜಾರಿಯಾಗಿದ್ದರೂ ಒಂದನೇ ಎದುರುದಾರರು ಗೈರು ಹಾಜರಾಗಿರುತ್ತಾರೆ. ಎರಡನೇ ಎದುರುದಾರರಿಗೆ ಪತ್ರಿಕಾ ಪಕಟಣೆಯ ಮೂಲಕ ನೋಟೀಸ್ ಜಾರಿ ಮಾಡಿದ್ದರೂ ಸದರಿಯವರು ಗೈರು ಹಾಜರಾಗಿರುತ್ತಾರೆ. ಆದ್ದರಿಂದ 1 ಮತ್ತು 2ನೇ ಎದುರುದಾರರನ್ನು ಏಕಪಕ್ಷೀಯವಾಗಿ ಇಡಲಾಗಿದೆ.  ದೂರುದಾರರು ಸಲ್ಲಿಸಿರುವ ದೂರು ಮತ್ತು ಪ್ರಮಾಣ ಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿದ್ದು, ಅವುಗಳ ಪುನರ್ ವಿಮರ್ಷೆಯ ಪ್ರಮೇಯ ಉದ್ಬವಿಸುವುದಿಲ್ಲ. ದೂರಿನಲ್ಲಿನ ಅಂಶಗಳನ್ನು ಎದುರುದಾರರು ಆಯೋಗದ ಮುಂದೆ ಹಾಜರಾಗಿ ಅಲ್ಲಗಳೆಯದೇ ಇರುವುದರಿಂದ ದೂರಿನಲ್ಲಿ ಹೇಳಿದ ಸಂಗತಿಗಳು ನಿಜವೆಂದು ಅಭಿಪ್ರಾಯಕ್ಕೆ ಬರಬಹುದೆಂದು ಮಾನ್ಯ ರಾಷ್ಟ್ರೀಯ ಗ್ರಾಹಕರ ಆಯೋಗವು 2018(1) ಸಿಪಿಆರ್ 314 ಎನ್‍ಸಿ ರಲ್ಲಿ ಸಿಂಗನಾಳ್ ಬಿಲ್ಡರ್ಸ್ ಮತ್ತು ಪ್ರಮೋಟರ್ಸ್ ಲಿಮಿಟೆಡ್ – ಅಮನ್ ಕುಮಾರ್ ಜಾರ್ಜ್ ಪ್ರಕರಣದಲ್ಲಿ ಉಲ್ಲೇಖಿಸಿರುತ್ತಾರೆ. 
8. ಎದುರುದಾರರಿಂದ ನಿಶಾನೆ ಪಿ1ರ ಬುಕಿಂಗ್ ಫಾರಂ ಪಡೆದ ನಂತರ ದೂರುದಾರರು ವಿವಿಧ ಹಂತಗಳಲ್ಲಿ ಎದುರುದಾರರಿಗೆ ರೂ.1,44,750/- ಗಳನ್ನು ಪಾವತಿಸಿದ್ದು, ನಿಶಾನೆ ಪಿ2ರ ಎದುರುದಾರರಿಂದ ಪಡೆದ ರಶೀದಿ ಬ್ಯಾಂಕ್ ಸ್ಟೇಟ್‍ಮೆಂಟ್ ಮೂಲಕ ತಿಳಿದುಬಂದಿರುತ್ತದೆ. ಇದೇ ವೇಳೆಗೆ ದೇಶದಲ್ಲಿ ಕೋವಿಡ್ 2019 ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸಗಳನ್ನು ನಡೆಸಲು ಅನುಮತಿ  ಸಿಗುತ್ತಿಲ್ಲವೆಂದು ಎದುರುದಾರರು ತಿಳಿಸಿದ್ದು, ಇದರಿಂದ ಎದುರುದಾರರು ಪ್ರವಾಸವನ್ನು ಮುಂದುವರೆಸಲು ಸಾದ್ಯವಿಲ್ಲ ಅದ್ದರಿಂದ ದೂರುದಾರರು ನೀಡಿರುವ ಮುಂಗಡ ಹಣವನ್ನು ಮರುಪಾವತಿಸುವಂತೆ ದೂರವಾಣಿ ಮುಖಾಂತರ ಹಾಗೂ ಈಮೇಲ್ ಮುಖಾಂತರ ಎದುರುದಾರರನ್ನು ಕೋರಲಾಗಿ, ಸದರಿಯವರು ಮುಂಗಡ ಹಣವನ್ನು ನೀಡಲು ನಿರಾಕರಿಸಿರುತ್ತಾರೆ.    ಎದುರುದಾರರು ಪಾವತಿಸಿರುವ ಮೊತ್ತವನ್ನು ಮರುಪಾವತಿಸದೇ ಇದ್ದ ಕಾರಣ ಪೋಲೀಸ್ ಠಾಣೆಗೆ ನಿಶಾನೆ ಪಿ5ರಲ್ಲಿ ದೂರು ದಾಖಲಿಸಿರುತ್ತಾರೆ. ಇದರಿಂದ ಫಲಕಾರಿಯಾಗದೆ ಪಿರ್ಯಾದುದಾರರು ದಿನಾಂಕ 23.08.2021ರಂದು ನಿಶಾನೆ ಪಿ3ರಲ್ಲಿ ಕಾನೂನು ನೋಟೀಸ್ ಅನ್ನು ನೀಡಿದ್ದು, ಎದುರುದಾರರು ಸದರಿ ನೋಟೀಸಿಗೆ ಯಾವುದೇ ಉತ್ತರವನ್ನು ನೀಡದ ಕಾರಣ ಈ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ. 
9. ದೂರುದಾರರು ತಾವು ಪಾವತಿಸಿದ ಹಣವನ್ನು ಮರುಪಾವತಿಸುವಂತೆ ಕೇಳಿಕೊಂಡರು ಎದುರುದಾರರು ಮರುಪಾವತಿಸದೇ, ಮತ್ತು ನೋಟೀಸಿಗೆ ಯಾವುದೇ ಉತ್ತರವನ್ನು  ನೀಡದೇ ಹಾಗೂ ಎದುರುದಾರರು ದೂರುದಾರರ ನುಡಿಸಾಕ್ಷ್ಯವನ್ನು ಮತ್ತು ದಾಖಲೆಗಳನ್ನು ಆಯೋಗಕ್ಕೆ ಹಾಜರಾಗಿ ಅಲ್ಲಗಳೆಯದೇ ಇರುವುದರಿಂದ ದೂರುದಾರರು ನೀಡಿರುವ ಸಂಗತಿಗಳು ಸತ್ಯವೆಂದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಆದ್ದರಿಂದ ದೂರುದಾರರು ಹೇಳಿಕೆಯನ್ನು ಅಲ್ಲಗಳೆಯುವ ಯಾವುದೇ ಅಂಶಗಳು ಕಂಡುಬಂದಿರುವುದಿಲ್ಲ ಆದ್ದದರಿಂದ ದೂರುದಾರರು ಹೇಳಿರುವ ಸಂಗತಿಗಳು ನಿಜವೆಂದು ಅಭಿಪ್ರಾಯಕ್ಕೆ ಬಂದಿದು, ದೂರುದಾರರು ಮೊತ್ತವನ್ನು ಹಿಂದಿರುಗಿಸದೇ ಸೇವಾ ನ್ಯೂನತೆ ಎಸಗಿದ್ದಾರೆಂದು, ಅಲ್ಲದೆ ಮಾನಸಿಕ ಹಿಂಸೆ ಅನುಭವಿಸಿದ್ದಾರೆಂದು ಇದುವರೆಗೂ ಮುಂಗಡ ಹಣ ಪಾವತಿಸದೇ ಇದ್ದ ಕಾರಣ ಮಾನಸಿಕ ಹಿಂಸೆಗಾಗಿ ರೂ.10,000/- ಗಳನ್ನು ಕೊಡಲು ನಿರ್ಣಯಿಸಿದ್ದೇವೆ ಮತ್ತು ದೂರುದಾರರು ಪಾವತಿಸಿರುವ ಒಟ್ಟು ಮೊತ್ತ ರೂ.1,44,750/- ಗಳನ್ನು ಶೇಕಡ 6ರ ಬಡ್ಡಿಯಂತೆ ಪರಿಹಾರ ರೂಪವಾಗಿ ದೂರು ದಾಖಲಿಸಿದ ದಿನಾಂಕದಿಂದ ಮರುಪಾವತಿಯಾಗುವವರೆಗೆ ಕೊಡುವಂತೆ ಆದೇಶಿಸಲು ಮತ್ತು ನ್ಯಾಯಾಲಯದ ಖರ್ಚು ರೂ.5,000/- ಗಳನ್ನು ಕೊಡಲು ನಿರ್ಣಯಿಸಿದ್ದು, ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕವಾಗಿ ಉತ್ತರಿಸಲಾಗಿದೆ. 
10. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ತಿಳಿಸಿರುವ ಕಾರಣಕ್ಕಾಗಿ ನಾವು ಈ ಕೆಳಗಿನಂತೆ ಆದೇಶವನ್ನು ಮಾಡುತ್ತೇವೆ.
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 35ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರನು ದೂರುದಾರರಿಗೆ ರೂ.1,44,750/- ಗಳನ್ನು ಶೇಕಡ 6ರ ಬಡ್ಡಿಯಂತೆ ಪರಿಹಾರ ರೂಪವಾಗಿ ಈ ದೂರನ್ನು ಸಲ್ಲಿಸಿದ ದಿನಾಂಕದಿಂದ ಮೂಲ ಹಣವನ್ನು ಪಾವತಿಯಾಗುವವರೆಗೆ ಕೊಡಬೇಕೆಂದು ಮತ್ತು ಮಾನಸಿಕ ಹಿಂಸೆಗಾಗಿ ರೂ.10,000/- ಗಳನ್ನು ಹಾಗೂ ನ್ಯಾಯಾಲಯದ ಖರ್ಚು ರೂ.5,000/- ಗಳನ್ನು ಹಾಗೂ ಮೇಲೆ ಕಾಣಿಸಿದ ಹಣವನ್ನು ಈ ಆದೇಶದ ದಿನಾಂಕದಿಂದ 45 ದಿನಗಳೊಳಗೆ ಪಾವತಿಸತಕ್ಕದ್ದು, ತಪ್ಪಿದಲ್ಲಿ ದೂರು ಸಲ್ಲಿಸಿದ ದಿನಾಂಕದಿಂದ ರೂ.1,44,750/- ಗಳಿಗೆ  ಮರುಪಾವತಿಯಾಗುವವರೆಗೆ ಶೇಕಡ 9 ರಂತೆ ವಾರ್ಷಿಕ ಬಡ್ಡಿ ಸಹಿತ ಪಾವತಿಸತಕ್ಕದ್ದು.
3. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
 
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 29ನೇ ಅಕ್ಟೋಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
 
(ರೇಣುಕಾದೇವಿ ದೇಶ್‍ಪಾಂಡೆ)
ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)
ಸದಸ್ಯರು
(ಎಂ.ಶೋಭಾ)
ಅಧ್ಯಕ್ಷರು
 
ಅನುಬಂಧ
 
 ಫಿರ್ಯಾದುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ;
 
1. ನಿಶಾನೆ ಪಿ1 ಬುಕಿಂಗ್ ಫಾರಂ
2. ನಿಶಾನೆ ಪಿ2 ಪಾವತಿಸಿದ ರಶೀದಿ
3. ನಿಶಾನೆ ಪಿ3 ಕಾನೂನಿನ ನೋಟೀಸ್‍ಪ್ರತಿ ದಿ.23.08.2021
4. ನಿಶಾನೆ ಪಿ4 2ನೇ ಎದುರುದಾರರಿಂದ ಅಂಚೆ ಕಛೇರಿಯಿಂದ ಹಿಂತಿರುಗಿಸಿದ ಸ್ವೀಕೃತಿ
5. ನಿಶಾನೆ ಪಿ5 ಪೋಲೀಸ್ ಠಾಣೆ ದೂರಿನ ಸ್ವೀಕೃತಿ ದಿನಾಂಕ 11.03.2020
 
ಎದುರುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ; ಇಲ್ಲ.
 
(ರೇಣುಕಾದೇವಿ ದೇಶ್‍ಪಾಂಡೆ)
ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)
ಸದಸ್ಯರು
(ಎಂ.ಶೋಭಾ)
ಅಧ್ಯಕ್ಷರು
 
 
 
 
[HON'BLE MRS. M. SHOBHA]
PRESIDENT
 
 
[HON'BLE MS. Renukadevi Deshpande]
MEMBER
 
 
[HON'BLE MR. H. Janardhan]
MEMBER
 

Consumer Court Lawyer

Best Law Firm for all your Consumer Court related cases.

Bhanu Pratap

Featured Recomended
Highly recommended!
5.0 (615)

Bhanu Pratap

Featured Recomended
Highly recommended!

Experties

Consumer Court | Cheque Bounce | Civil Cases | Criminal Cases | Matrimonial Disputes

Phone Number

7982270319

Dedicated team of best lawyers for all your legal queries. Our lawyers can help you for you Consumer Court related cases at very affordable fee.