Karnataka

Bangalore Urban

CC/1706/1998

N Puttaswamy - Complainant(s)

Versus

Monica Electronics Ltd - Opp.Party(s)

20 Jul 1999

ORDER

DISTRICT CONSUMER DISPUTES REDRESSAL COMMISSION,
8TH FLOOR, B.W.S.S.B BUILDING, K.G.ROAD,BANGALORE-09
 
Complaint Case No. CC/1706/1998
( Date of Filing : 24 Oct 1998 )
 
1. N Puttaswamy
D No 1/1,2nd Main Road, Deepanjali Nagara,Bangalore-26
...........Complainant(s)
Versus
1. Monica Electronics Ltd
New Delhi-110001
............Opp.Party(s)
 
BEFORE: 
 
PRESENT:
 
Dated : 20 Jul 1999
Final Order / Judgement
 
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀ ಕೆ.ಎಸ್.ಬೀಳಗಿ,  ಅಧ್ಯಕ್ಷರು,
         2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
         3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
 
ಆದೇಶ 
 
ಸಿ.ಸಿ.ಸಂಖ್ಯೆ:1706/2018
ಆದೇಶ ದಿನಾಂಕ 16ನೇ ಸೆಪ್ಟೆಂಬರ್ 2022
1. ಉಸ್ನೀಶ್ ಕೃಷ್ಣದಾಸ್ ರ್ಮ,
     ಬಿನ್. ಡಾ: ಊಜ್ಜಲ್ ಕೃಷ್ಣದಾಸ್ ಶರ್ಮ,
2. ಚಾಂದಿನಿ ಕೆ.ವಿ.
ಕೋಂ.  ಉಸ್ನೀಶ್ ಕೃಷ್ಣದಾಸ್ ರ್ಮ,
ನಂ.304, ರಾಜ ಗೋಪಾಲ ಮಮತ ರೆಡ್ಡಿ ಅಪಾರ್ಟ್‍ಮೆಂಟ್,
ಬಸವನಗರ, ಮಾರತ್ತಹಳ್ಳಿ, ಬೆಂಗಳೂರು 560 037.
(ಪ್ರತಿನಿಧಿಸುವವರು ಶ್ರೀ ತುಷಾರ್, ವಕೀಲರು)                                   
 
-ಪಿರ್ಯಾದುದಾರರು
       ವಿರುದ್ಧ
1. ಪ್ರಭಾವತಿ ಬಿಲ್ಡರ್ಸ್ ಡೆವಲಪ್ಪರ್ ಪ್ರೈವೆಟ್ ಲಿಮಿಟೆಡ್,
ನಂ.80, 2ನೇ ಮಹಡಿ, 1ನೇ ಕ್ರಾಸ್, 2ನೇ ಮೇನ್,
ವೈಶ್ಯ ಬ್ಯಾಂಕ್ ಗೃಹ ನಿರ್ಮಾಣ ಸಂಘ ಲೇಔಟ್,
ರಿಲಯನ್ಸ್ ಪ್ರೆಶ್ ಹತ್ತಿರ ಬಿಟಿಎಂ 2ನೇ ಹಂತ,
ಬೆಂಗಳೂರು.
ಪ್ರಭಾವತಿ ಬಿಲ್ಡರ್ಸ್ ಡೆವಲಪ್ಪರ್ ಪ್ರೈವೆಟ್ ಲಿಮಿಟೆಡ್‍ನ
ಜನರಲ್ ಪವರ್ ಆಫ್ ಅಟಾರ್ನಿ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಬಿ.ಇ.ಪ್ರವೀಣ್ ಕುಮಾರ್
 
2. ಶ್ರೀ ಮುನಿರೆಡ್ಡಿ, (ಕನ್ವರ್‍ಟೆಡ್ ಲ್ಯಾಂಡ್‍ನ ಮಾಲೀಕರು)
ಸರ್ವೆ ನಂ.129/1, ಖಾತ ನಂ.57, ರಾಯಸಂದ್ರ ಹಳ್ಳಿ, ಸರ್ಜಪುರ ಹೋಬಳಿ,
ಅನೇಕಲ್ ತಾಲ್ಲೂಕು, ಹುಸ್ಕೂರು ಪೋಸ್ಟ್, ಬೆಂಗಳೂರು 560 035.
 
3. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,
ಬ್ರಾಂಚ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್,
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆರ್‍ಎಸಿಪಿಸಿ, ಮಲ್ಲೇಶ್ವರಂ, ಬೆಂಗಳೂರು 560 001.
 
… ಎದುರುದಾರರು
 
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ 
ಮಹಿಳಾ ಸದಸ್ಯರು,
 
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 1986ರ ಕಲಂ 12(2) ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, 1 ಮತ್ತು 2ನೇ ಎದುರುದಾರರಿಂದ ನಿವೇಶನ ಮುಂಗಡ ಮೊತ್ತವನ್ನು ಮರುಪಾವತಿಸುವಂತೆ ಕೋರಿರುತ್ತಾರೆ.
ಅ) ಪ್ಲಾಟ್ ಬುಕಿಂಗ್ ಅನ್ನು ರದ್ದುಗೊಳಿಸಲು ಮತ್ತು ಬುಕಿಂಗ್ ಹಣವನ್ನು ಮರುಪಾವತಿಸಲು ಮತ್ತು ಮಾನಸಿಕ ಹಿಂಸಿಗೆ ರೂ.10,00,000/- ಪಾವತಿಸಲು ಮತ್ತು
ಆ) 1 ಮತ್ತು 2ನೇ ಎದುರುದಾರರಿಂದ ಉಂಟಾದ ಆರ್ಥಿಕ ನಷ್ಟವನ್ನು ಉಂಟು ಮಾಡಿದ್ದು, ಈ ನಷ್ಟವನ್ನು ಪರಿಹರಿಸಲು ರೂ.3,00,000/- ಪಾವತಿಸಬೇಕೆಂದು
ಇ) 3ನೇ ಎದುರುದಾರರಿಂದ ದೂರುದಾರರಿಂದ ಬಾಕಿ ಇರುವ ಸಾಲದ ಮೊತ್ತವನ್ನು ವಸೂಲಿ ಪ್ರಕ್ರಿಯೆಯನ್ನು ಸಲ್ಲಿಸಲು ಮತ್ತು ಇದರಿಂದ ಉಂಟಾದ ಮಾನಸಿಕ ಹಿಂಸೆ, ಆರ್ಥಿಕ ನಷ್ಟದಿಂದ ಉಂಟಾದ ಹಾನಿಯನ್ನು ಪರಿಹರಿಸಲು ರೂ.1,00,000/- ಪಾವತಿಸುವಂತೆ ಮತ್ತು ದೂರುದಾರರ ಕ್ರೆಡಿಟ್ ಸ್ಕೋರ್ ಅನ್ನು ಸರಿಪಡಿಸಲು ಮತ್ತು ಅದನ್ನು ಶೂನ್ಯಕ್ಕೆ ಬದಲಾಯಿಲು ನಿರ್ದೆಶನ ನೀಡಬೇಕೆಂಉ ಹಾಗೂ
ಈ) ಇತರೆ ಪರಿಹಾರಗಳನ್ನು ಕೊಡುವಂತೆ ನಿರ್ದೇಶಿಸಿ ಆದೇಶವನ್ನು ನೀಡುವಂತೆ ಈ ಆಯೋಗಕ್ಕೆ ಕೋರಿರುತ್ತಾರೆ.
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರು 1 ಮತ್ತು 2 ಬೆಂಗಳೂರಿನಲ್ಲಿ ವಾಸಿಸಲು (ಮನೆಯನ್ನು) ನಿವೇಶನವನ್ನು ಖರೀದಿಸಲು ಯೋಚಿಸಿದ್ದು, ಅದರಂತೆ 1 ಮತ್ತು 2ನೇ ಎದುರುದಾರರನ್ನು ಸಂಪರ್ಕಿಸಿದಾಗ, ಸದರಿ ನಿರ್ಮಾಣದಲ್ಲಿ ಒಂದು ಪ್ಲಾಟ್ ಅನ್ನು ಇವರಿಗೆ ಮಂಜೂರು ಮಾಡಲು ಭರವಸೆ ನೀಡಿ, ಒಟ್ಟು ಖರೀದಿಯ ಬೆಲೆ ರೂ.32,13,000/- 1 ಮತ್ತು 2 ನೇ ಎದುರುದಾರರಿಂದ ತಿಳುವಳಿಕೆ ಪತ್ರ(ಎಂಓಯು) ದಿನಾಂಕ 11.02.2016ರಂದು ಒಪ್ಪಂದ ಮಾಡಿಕೊಂಡು, ಅದರಂತೆ ದೂರುದಾರರು ಮುಂಗಡ ಹಣವನ್ನು ರೂ.10,000/- ಮತ್ತು ರೂ.1,00,000/- ಒಟ್ಟು ರೂ.1,10,000/- ಗಳನ್ನು ಪಾವತಿಸಿದೆ. ತದನಂತರ, 1ನೇ`ಎದುರುದಾರರ ಜೊತೆ 3ನೇ ಎದುರುದಾರರದ ಎಸ್.ಬಿ.ಐ ಬ್ಯಾಂಕಿನೊಂದಿಗೆ ದೂರುದಾರರು ಗೃಹ ಸಾಲದ ತ್ರಿಪಾರ್ಟಿ ಒಪ್ಪಂದ ಮಾಡಿಕೊಂಉ ದಿನಾಂಕ 16.03.2016ರಂದು ಗೃಹ ಸಾಲಕ್ಕೆ ಮನವಿಯನ್ನು ಸಲ್ಲಿಸಿದ್ದು, ವಿವಿಧ ಹಂತಗಳನ್ನು ಗೃಹ ನಿರ್ಮಾಣ ಕಾರ್ಯದಲ್ಲಿಯ ಪ್ರಗತಿಯನ್ನು ಗಮನಿಸಿ 1ನೇ ಎದುರುದಾರರಿಗೆ ಸಾಲವನ್ನು ಮಂಜುಊರು ಮಾಡಲು ಒಪ್ಪಕೊಂಡರೂ ಸಹ, 3ನೇ ಎದುರುದಾರರ ಷರತ್ತನ್ನು ಮಾನ್ಯ ಮಾಡದೆ ಮಾರಾಟದ ಒಪ್ಪಂದದ ಮೇರೆಗೆ ಪೂರ್ಣ ಸಾಲದ ಮೊತ್ತವನ್ನು ಮಂಜೂರು ಮಾಡಿದೆ. ದೂರುದಾರರು 1ನೇ ಎದುರುದಾರರ ಆಫೀಸಿಗೆ ದಿನಾಂಕ 24.09.2016ರ ಭೇಟಿ ನೀಡಲು ಹೊದಾಗ ಅಲ್ಲಿ 1ನೇ ಎದುರುದಾರರು ಆಫೀಸ್ ಖಾಲಿ ಮಾಡಿಕೊಂಡು, ತಲೆಮರೆಸಿಕೊಂಡು ಹೋಗಿದ್ದು ತಿಳಿದು ಮಾನಸಿಕವಾಗಿ ನೊಂದು 3ನೇ ಎದುರುದಾರರು 1ನೇ ಎದುರುದಾರರೊಡನೆ ಶಾಮೀಲಾಗಿ ಗೃಹನಿರ್ಮಾಣ ಮಾಡದೆ ಸಾಲದ ಹಣವನ್ನು ತೆಗೆದುಕೊಂಡು ಮೋಸಮಾಡಿದ್ದಾರೆಂದು ಪರಪ್ಪನ ಅಗ್ರಹಾರದ ಪೋಲೀರಿಗೆ ದೂರು ನೀಡಿದರು ಪ್ರಯೋಜನವಾಗದೆ ಸೇವಾ ನ್ಯೂನತೆ ಎಸಗಿದ್ದಾರೆಂದು ದಿನಾಂಕ 26.12.2017ರಂದು ಕಾನೂನು ನೋಟೀಸು ಜಾರಿಮಾಡಿದ್ದು, ಯಾವುದೇ ಪ್ರತಿಕ್ರಯಿಸದೆ, ಅಲ್ಲದೇ 3ನೇ ಎದುರುದಾರರು ಸಾಲದ ಮರುಪಾವತಿಗೆ ಒತ್ತಾಯಿಸಿ ಓಎ:707/2018ರಲ್ಲಿ ಸಾಲ ವಸೂಲಾತಿಯ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದು, ರೂ.3,48,563/- ಗಳಿಗೆ ಶೇ.18 ರಂತೆ ಬಡ್ಡಿಯನ್ನು, 1, 2, 3ನೇ ಎದುರುದಾರರಿಂದ ದುರ್ನಡತೆ, ಅನುಚಿತ ವ್ಯಾಪಾರ ಸೇವಾ ನ್ಯೂನತೆಯಿಂದ ಉಂಟಾದ ಮಾನಸಿಕ, ದೈಹಿಕ ನಷ್ಟದ ಪರಿಹಾರವನ್ನು ಕೊಡಿಸಬೇಕೆಂದು ಈ ಆಯೋಗಕ್ಕೆ ಕೋರಿದ ದೂರನ್ನು ಸಲ್ಲಿಸಿರುತ್ತಾರೆ.
3. ದೂರನ್ನು ಅಂಗೀಕರಿಸಿದ ಬಳಿಕೆ ಎದುರುದಾರರಾದ 1, 2 ಮತ್ತು 3 ರವರಿಗೆ ನೋಟೀಸ್ ಜಾರಿಯಾದರೂ ಸಹ ಎದುರುದಾರರು ಆಯೋಗದ ಮುಂದೆ ಹಾಜರಾಗಲಿಲ್ಲ.  ಅದರಿಂದ ಏಕಪಕ್ಷೀಯವಾಗಿ ಎಂದು ಪರಿಗಣಿಸಲಾಯಿತು.  
4. ದೂರುದಾರರು ಸಹ ಪ್ರಮಾಣ ಪತ್ರ ಸಾಕ್ಷ್ಯವನ್ನು ಸಲ್ಲಿಸಿರುರುವುದಿಲ್ಲ ಆದರೆ ದಾಖಲಾತಿಗಳನ್ನು ಪುಟ 11 ರಿಂದ 80 ರವರೆಗೆ ಸಲ್ಲಿಸಿರುತ್ತಾರೆ ಮತ್ತು ಲಿಖಿತವಾದವನ್ನು ಸಹ ಹಾಜರುಪಡಿಸಿರುವುದಿಲ್ಲ, ಈ ದೂರನ್ನು ದಾಖಲಾತಿಗಳು ಮತ್ತು ಅರ್ಹತೆ ಮೇರೆಗೆ ತೀರ್ಪಿಗಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ? 
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
 
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರರು ತನ್ನ ದೂರಿನಲ್ಲಿ ವಿವರಿಸಿದ ಸಂಗತಿಗಳನ್ನು ನಾವೂ ಈಗಾಗಲೇ ಸುಧೀರ್ಘವಾಗಿ ಪ್ಯಾರಾ 2ರಲ್ಲಿ ವಿವರಿಸಿದ್ದೇವೆ ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು 1, 2 ಮತ್ತು 3 ಇವರಿಗೆ ಈ ಆಯೋಗದಿಂದ ಕಳಿಸಿದ ನೋಟೀಸ್ ಜಾರಿಯಾಗಿದ್ದರೂ ಕೂಡಾ ಈ ಆಯೋಗದ ಮುಂದೆ ಹಾಜರಾಗದೆ ಗೈರು ಹಾಜರಾಗಿರುತ್ತಾರೆ. ಈ ಕಾರಣಕ್ಕಾಗಿ ಅವರನ್ನು ಏಕಪಕ್ಷೀಯ ಎಂದು ನಿರ್ಣಯಿಸಿ ದೂರುದಾರರು ತನ್ನ ಅಹವಾಲನ್ನು ಸಾಬೀತು ಪಡಿಸಲು ನುಡಿ ಸಾಕ್ಷ್ಯವನ್ನು ಸಲ್ಲಿಸಿರುವುದಿಲ್ಲ. ದಾಖಲೆಗಳ ಪುಟ 1 ರಿಂದ 80ರವರೆಗೆ ಹಾಜರುಪಡಿಸಿರುತ್ತಾರೆ. 
8. ದೂರುದಾರರು ನಿವೇಶನ ಖರೀದಿಯ ಸಲುವಾಗಿ ಮುಂಗಡ ಹಣವನ್ನು ದಿನಾಂಕ 27.01.2016ರಂದು ರೂ.10,000/- ಗಳನ್ನು ಮತ್ತು ರೂ.1,00,000/- ಗಳನ್ನು ದಿನಾಂಕ 03.02.2016ರಂದು ಪಾವತಿಸಿದ್ದು, ಖರೀದಿಯ ಕರಾರು ಒಪ್ಪಂದ ಪತ್ರವನ್ನು ಹಾಜರುಪಡಿಸಿದ್ದು, ಪುಟ 28ರಲ್ಲಿ ಮುಂಗಡ ಹಣ ಪಾವತಿಯ ವಿವರಗಳನ್ನು ಸಲ್ಲಿಸಿರುತ್ತಾರೆ.
9. ದೂರುದಾರರು ಮತ್ತು 1 ಹಾಗೂ 3ನೇ ಎದುರುದಾರರ ತ್ರಿಪಾರ್ಟಿ ಕರಾರು ಒಪ್ಪಂದ ಮಾಡಿಕೊಂಡು 3ನೇ ಎದುರುದಾರರಿಂದ ಸಾಲ ಪಡೆದುಕೊಂಡು ಗೃಹ ನಿರ್ಮಾಣ ಮಾಡಲು ಒಪ್ಪಿ, 1ನೇ ಎದುರುದಾರರು ತಲೆಮರೆಇಕೊಂಡು ಹೋಗಿ ಗೃಹ ನಿರ್ಮಾಣ ಪೂರ್ಣಗೊಳಿಸದೆ ಸೇವಾ ನ್ಯೂನತೆ ಎಸಗಿರುತ್ತಾರೆಂದು ನೊಂದು ದಿನಾಂಕ 01.01.2018ರಂದು ಸ್ಪೀಡ್ ಪೋಸ್ಟ್ ಮಾಡಿದ್ದು, ಆದರೆ 1ನೇ ಎದುರುದಾರರು ತಲೆಮರಿಸಿಕೊಂಡಿರುತ್ತಾರೆಂದು ಪೋಸ್ಟ್ ಜಾರಿಯಾಗಿಲ್ಲವೆಂದು ತಿಳಿಸಿರುತ್ತಾರೆ. 
10. ದೂರುದಾರರು ಒಟ್ಟು ರೂ.1,10,000/- ಗಳ ಮುಂಗಡವನ್ನು ಪಾವತಿಸಿದ್ದು, ದಾಖಲೆ ಪುಟ 28ರಲ್ಲಿ ಮುಂಗಡ ಹಣ ಸಂದಾಯ ಬಗ್ಗೆ ವಿವರಿಸಿದ್ದು, ದೂರುದಾರರು 1, 2 ಎದುರುದಾರರಿಂದ ಸೇವಾ ನ್ಯೂನತೆಯಿಂದ ಮನನೊಂದು, ಖರೀದಿಯ ಕರಾರು ಪತ್ರವನ್ನು ರದ್ದುಗೊಳಿಸಿ ಮುಂಗಡ ಹಣವನ್ನು ಮರುಪಾವತಿಸಲು ಕೋರಿರುತ್ತಾರೆ.  ಇದಕ್ಕೆ ಎದುರುದಾರರು ಈ ಹೇಳಿಕೆಯನ್ನು ಅಲ್ಲಗಳೆಯದೆ ಅಂಶಗಳು ಕಂಡುಬಂದಿಲ್ಲದ ಕಾರಣ ಎದುರುದಾರರು ಕರಾರನ್ನು ರದ್ದುಗೊಳಿಸಿ, ರೂ.1,10,000/- ಗಳನ್ನು ದೂರುದಾರನಿಗೆ ಪಾವತಿಸಬೇಕಾಗುತ್ತದೆ.
11. ಈ ದೂರಿಗೆ ಎದುರುದಾರನು ಯಾವುದೇ ಪುರಾವೆ, ಸಾಕ್ಷ್ಯ ವ್ಯಕ್ತಪಡಿಸದೇ ಇರುವುದರಿಂದ ದೂರುದಾರನು ಹೇಳಿದ ಸಂಗತಿಗಳು ಸತ್ಯವೆಂದು ಅಭಿಪ್ರಾಯಕ್ಕೆ ಬಂದಿದ್ದು, 1 ಮತ್ತು 2ನೇ ಎದುರುದಾರರು ರೂ.1,10,000/- ಗಳನ್ನು 9% ಬಡ್ಡಿಯಂತೆ ಪರಿಹಾರ ರೂಪವಾಗಿ ಮತ್ತು ರೂ.2,000/- ಗಳನ್ನು ವ್ಯಾಜ್ಯದ ಖರ್ಚುಗಳನ್ನು ಕೊಡಲು ನಿರ್ಣಯಿಸಿದ್ದು, ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕ ಎಂದು ತೀರ್ಮಾನಿಸಲಾಗಿದೆ.
12. 3ನೇ ಎದುರುದಾರನಿಂದ ದೂರುದಾರರಿಂದ ಬಾಕಿ ಉಳಿದಿರುವ ಸಾಲದ ಮೊತ್ತವನ್ನು ವಸೂಲಿ ಪ್ರಕ್ರಿಯೆಯನ್ನು ನಿಲ್ಲಿಸಲು ಮತ್ತು ಇದರಿಂದ ಉಂಟಾದ ಮಾನಸಿಕ ಹಿಂಸೆ, ಆರ್ಥಿಕ ನಷ್ಟ್ದಿಂದ ಉಂಟಾದ ಹಾನಿಯನ್ನು ಪರಿಹರಿಸಲು 3,00,000/- ಪಾವತಿಸುವಂತೆ ಮತ್ತು ದೂರುದಾರರ ಕ್ರೆಡಿಟ್ ಸ್ಕೋರ್ ಅನ್ನು ಸರಿಪಡಿಸಲು ಮತ್ತು ಅದನ್ನು ಶೂನ್ಯಕ್ಕೆ ಬದಲಾಯಿಸಲು ನಿರ್ದೇಶನ ನೀಡಬೇಕೆಂದು ಕೋರಿರುತ್ತಾರೆ. ಈ ವಿಷಯವಾಗಿ ಸಾಲದ ಹಣ ದೂರುದಾರರಿಗೆ ಸಂದಾಯವಾಗುವಂತೆ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ ಅದಕ್ಕಾಗಿ 3ನೇ ಎದುರುದಾರರ ಮೇಲೆ ಮಾಡಿದ ಆಪಾದನೆಯನ್ನು ಮತ್ತು ಪರಿಹಾರ ಹಣವನ್ನು ವಜಾಪಡಿಸಲಾಗಿದೆ.  ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕ ಎಂದು ತೀರ್ಮಾನಿಲಾಗಿದೆ.
13. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ಕೊಟ್ಟಿರುವ ನಿರ್ಣಯಕ್ಕೆ ಅನುಗುಣವಾಗಿ ಈ ಕೆಳಕಂಡಂತೆ ಆದೇಶವನ್ನು ಮಾಡಿದ್ದೇವೆ.
ಆದೇಶ
ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. 1 ಮತ್ತು 2ನೇ ಎದುರುದಾರರಿಂದ ದೂರುದಾರರಿಗೆ ರೂ.1,10,000/- ಗಳನ್ನು ಮತ್ತು ಶೇಕಡ 9 ರಷ್ಟು ಬಡ್ಡಿಯನ್ನು ಪರಿಹಾರ ರೂಪವಾಗಿ ಪಾವತಿ ಮಾಡಿದ ದಿನಾಂಕದಿಂದ ಮರುಪಾವತಿ ಮಾಡುವವರೆಗೆ ಹಾಗೂ ನ್ಯಾಯಾಲಯ ಖರ್ಚು ರೂ.2,000/- ಗಳನ್ನು ಈ ಆದೇಶದ ದಿನಾಂಕದಿಂದ 60 ದಿನದೊಳಗಾಗಿ ಪಾವತಿಸತಕ್ಕದ್ದು.  ತಪ್ಪಿದಲ್ಲಿ 60 ದಿನಗಳ ನಂತರ ರೂ.1,10,000/- ಗಳ ಮೇಲೆ ಶೇಕಡ 12%ರಂತೆ ವಾರ್ಷಿಕ ಬಡ್ಡಿಯನ್ನು ಮರುಪಾವತಿಸತಕ್ಕದ್ದು.
3. 3ನೇ ಎದುರುದಾರರ ಮೇಲಿನ ದೂರನ್ನು ವಜಾಗೊಳಿಸಲಾಗಿದೆ
4. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
 
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 16ನೇ ಸೆಪ್ಟೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
 
 
 
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಕೆ.ಎಸ್.ಬೀಳಗಿ)ಅಧ್ಯಕ್ಷರು
 

Consumer Court Lawyer

Best Law Firm for all your Consumer Court related cases.

Bhanu Pratap

Featured Recomended
Highly recommended!
5.0 (615)

Bhanu Pratap

Featured Recomended
Highly recommended!

Experties

Consumer Court | Cheque Bounce | Civil Cases | Criminal Cases | Matrimonial Disputes

Phone Number

7982270319

Dedicated team of best lawyers for all your legal queries. Our lawyers can help you for you Consumer Court related cases at very affordable fee.