ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀಮತಿ ಎಂ.ಶೋಭಾ ಅಧ್ಯಕ್ಷರು,
2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
ಆದೇಶ
ಸಿ.ಸಿ.ಸಂಖ್ಯೆ:04/2022
ಆದೇಶ ದಿನಾಂಕ 14ನೇ ನವೆಂಬರ್ 2022
ಶ್ರೀಮತಿ ಸ್ವಾತಿ ಗೋವಿಂದರಾಜ್,
ಕೋಂ. ಕೆ.ಗೋವಿಂದರಾಜು ಗುಪ್ತ,
59 ವರ್ಷ,
ನಂ1/1, ಕೌಸ್ತುಭಂ, ನಂಜಮರಿ ಲೇಔಟ್, ಜಾಲಹಳ್ಳಿ, ಬೆಂಗಳೂರು 560 013.
(ಶ್ರೀ ಬಿ.ಎಸ್.ಅನಿಲ್‍ಕುಮಾರ್, ವಕೀಲರು)
-ಪಿರ್ಯಾದುದಾರರು
ವಿರುದ್ಧ
ಕರ್ನಾಟಕ ಟೆಲಿಕಾಂ ಡಿಪಾರ್ಟ್‍ಮೆಂಟ್ ಎಂಪ್ಲಾಯಿಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್,
ನಂ.706, 1ನೇ ಮಹಡಿ, ಸಿಬಿಐ ರಸ್ತೆ,
ಹೆಚ್‍ಎಂಟಿ ಲೇಔಟ್, ಆರ್.ಟಿ.ನಗರ ಪೋಸ್ಟ್, ಸೆಂಟ್.ಜುಡೆ ಕ್ಯಾಥೊಲಿಕ್ ಚರ್ಚ್,
ಬೆಂಗಳೂರು 560 032.
… ಎದುರುದಾರರು
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ
ಮಹಿಳಾ ಸದಸ್ಯರು,
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಕಲಂ 35 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, ದೂರುದಾರರು ಎದುರುದಾರgರಿಂದ ನಿವೇಶನ ಹಂಚಿಕೆ ಮಾಡಲು ನಿರ್ದೇಶಿಸಬೇಕೆಂದು ಮತ್ತು ಸೇವಾ ನ್ಯೂನತೆಗಾಗಿ ಪರಿಹಾರ ರೂಪವಾಗಿ ಮತ್ತು ನ್ಯಾಯಲಯದ ಖರ್ಚು ಮತ್ತು ಇತರೆ ಸೌಲಭ್ಯಗಳು ಒಟ್ಟು ರೂ.3,00,000/- ಗಳನ್ನು ಕೊಡುವಂತೆ ನಿರ್ದೇಶಿಸಿ ಆದೇಶವನ್ನು ನೀಡುವಂತೆ ಆದೇಶಿಸಲು ಕೋರಿರುತ್ತಾರೆ;
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರು ಮತ್ತು ಅವರ ಸಹಚರರು ಸೇರಿ ವಸತಿ ನಿಲಯವನ್ನು ಹುಡುಕುತ್ತಿರುವಾಗ ಸದರ ಯೋಜನೆಯ ಲಾಭದ ಮೂಲಕ ಅಲ್ಪ ಹೂಡಿಕೆಯಲ್ಲಿ ವಸತಿ ನಿವೇಶನವನ್ನು ಹೊಂದಲು ಅವಕಾಶವಿದೆ ಎಂದು ಮತು ಅಲ್ಪ ಸಮಯದಲ್ಲಿ ನಿವೇಶನವನ್ನು ಹೊಂದಲು ಭರವಸೆಯನ್ನು ನೀಡಿದ ಕಾರಣ ಎದುರುದಾರರು ಯೋಜನೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಪಡೆದು ದೂರುದಾರರು ಅರ್ಜಿಯನ್ನು ಸಲ್ಲಿಸಿ 40 60 ನಿವೇಶನಕ್ಕೆ “ಆತ್ಮಾನಂದ ಸಾಗರ” ಮೈಸೂರಿನಲ್ಲಿರುವ ಬೆ|ಳವಾಡಿ ಮತ್ತು ನಾಗವಾಲ ಗ್ರಾಮದಲ್ಲಿ ವಸತಿ ಯೋಜನೆಯ ಹೆಸರು ಮತ್ತು ಶೈಲಿಯ ಕರಪತ್ರದ ಮೂಲಕ ಮುಂಗಡ ಮೊತ್ತ ರೂ.1,20,000/- ಗಳನ್ನು ನೀಡಿ ಮೊದಲನೆ ಕಂತಿನ ರೂ.1,36,800/- ದಿನಾಂಕ 15.02.2007 ರಲ್ಲಿ ಅಧಿಕಾರಿಗಳ ಅನುಮೋದನೆಯ ಯೋಜನೆಯ ಸಂಬಂಧಿಸಿದ ದಾಖಲೆಗಳನ್ನು ಪಡೆದು ನಿವೇಶನ ಹಂಚಿಕೆ ಪತ್ರವನ್ನು ನೀಡಿರುತ್ತಾರೆ. ತದನಂತರ ಎದುರುದಾರರು 2ನೇ ಕಂತಿನ ಹಣವನ್ನು ನೀಡಲು ಪತ್ರದ ಮೂಲಕ ಒತ್ತಾಯಿಸಿ ರೂ.1,36,800/- ಗಳನ್ನು ಪಾವತಿಸಿದ್ದು, ಎದುರುದಾರರಿಂದ, ನಿವೇಶನ ಮಂಜೂರಾತಿ ಮತ್ತು ಮೂಡಾ ಪ್ರಗತಿಯ ಹಾದಿಯಲ್ಲಿದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಂದ ನಿರಪೇಕ್ಷಣಾ ಪತ್ರವನ್ನು ಪಡೆವ ವಿಷಯ ತಿಳಿಸಿದಾಗ ಮತ್ತು 2017ರಲ್ಲಿ ಯೋಜನೆಯು ಪೂರ್ಣಗೊಳ್ಳುವುದಾಗಿ ಎದುರುದಾರರು ಭರವಸೆಯನ್ನು ನೀಡಿದ್ದು, ಮತ್ತು ಅದಕ್ಕೆ ಪ್ರತಿಯಾಗಿ ಎದುರುದಾರರು 07.09.2007ರಂದು ರಶೀದಿಯನ್ನು ಪಾವತಿಸಿದ್ದು ಅಲ್ಲದೇ ಕೊನೆಯ ಕಂತನ್ನು ನಿವೇಶನ ಹಂಚಿಕೆ ಸಮಯದಲ್ಲಿ ಮತ್ತು ನೊಂದಾವಣೆ ಖರ್ಚು ದೂರುದಾರರು ಭರಿಸುವಂತೆ ತಿಳಿಸಿ ಇದುವರೆಗೆ ಯಾವುದೇ ರೀತಿಯ ಪ್ರಗತಿಯನ್ನು ಕಾಣದೆ ಸದರಿ ಯೋಜನೆಯ ಬಗ್ಗೆ ವಿಚಾರಿಸಿದಾಗ ಏಪ್ರಿಲ್ 2018ರೊಳಗೆ ಮುಗಿಸುವುದಾಗಿ ತಿಳಿಸಿದ್ದು, ಈ ಭರವಸೆಯಲ್ಲಿ ಪೂರ್ಣಗೊಳಿಸದೆ 2019ರ ಕೋವಿಡ್ ಇರುವುದರಿಂದ ಸದರಿ ಯೋಜನೆಯ ಭರವಸೆಯ ಪ್ರಕಾರ ಪೂರ್ಣಗೊಳ್ಳದೇ ಮತ್ತು ದೂರುದಾರರ ಪರವಾಗಿ ನಿವೇಶನ ಹಂಚಿಕೆಯ ಯಾವುದೇ ಪ್ರಗತಿಯಲ್ಲಿ ಇಲ್ಲ. ದೂರುದಾರರು ಯೋಜನೆ ಒಪ್ಪಿಗೆಯ ನಿಯಮವನ್ನು ಪಾಲಿಸಲು ಸಿದ್ದರಿದ್ದಾರೆ ಆದರೆ ಎದುರುದಾರರಿಂದ ಯಾವುದೇ ರೀತಿಯ ಸಹಕಾರ ಇರುವುದಿಲ್ಲ. ಅಕ್ಟೋಬರ್ 2021ರಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿ ಯಾವುದೇ ಪ್ರಗತಿಯನ್ನು ತೋರಿಸದೇ ದೂರುದಾರರಿಗೆ ಕರಾರಿನಂತೆ ನಿವೇಶನ ನೀಡದೆ ಕೊನೆಯ ಕಂತಿನ ಹಣವನ್ನು ನೀಡಲು ಸಿಕ್ಕಿದ್ದರಿಂದ್ದರೂ ಎದುರುದಾರರು ಯಾವುದೇ ಪ್ರಗತಿಯನ್ನು ತೋರಿಸದೇ ಸೇವಾ ನ್ಯೂನತೆಯನ್ನು ಎಸಗಿದ್ದಾರೆಂದು ದಿನಾಂಕ 31.12.2021ರಂದು ಎದುರುದಾರರನ್ನು ಸಂಪರ್ಕಿಸಿದಾಗ ಯಾವುದೇ ಜವಾಬು ನೀಡದೆ ಮಾನಸಿಕವಾಗಿ ನೊಂದು ಈ ಆಯೋಗಕ್ಕೆ ದೂರು ದಾಖಲಿಸಿ ಪರಿಹಾರವನ್ನು ನೀಡುವಂತೆ ಕೋರಿರುತ್ತಾರೆ.
3. ದೂರನ್ನು ಸ್ವೀಕರಿಸಿದ ನಂತರ ಎದುರುದಾರನಿಗೆ ನೋಟೀಸ್ ಜಾರಿಯಾಗಿ ಎದುರುದಾರರು ಆಯೋಗದ ಮುಂದೆ ಹಾಜರಾಗಿ ತಕರಾರನ್ನು ಸಲ್ಲಿಸಿರುತ್ತಾರೆ. ದೂರುದಾರರು ಎದುರುದಾರರ ವಿರುದ್ದ ಮಾಡಿದ ಆಪಾದನೆ ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿರುತ್ತದೆ. ದೂರುದಾರರು ದಿ.07.09.2007ರಂದು ಕೊನೆಯ ಪಾವತಿಯನ್ನು ಮಾಡಿದ್ದು, ಯಾವ ದಿನಾಂಕದಿ|ಂದ ದೂರುದಾರರು ಎರಡು ವರ್ಷದ ಒಳಗೆ ಈ ಆಯೋಗಕ್ಕೆ ಸಂಪರ್ಕಿಸಬೇಕಾಗಿತ್ತು. ಹೊಸ ಕಾಯ್ದೆ 2019ರ ಅನ್ವಯ ದೂರುದಾರರು ನಿಗದಿಪಡಿಸಿದ ಸಮಯದಲ್ಲಿ ದೂರು ದಾಖಲಿಸಿರುವುದಿಲ್ಲ ಹಾಗೂ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲವಾದ್ದರಿಂದ ದೂರನ್ನು ಕಾಲಪರಿಮಿತಿಯಲ್ಲಿ ಇಲ್ಲವೆಂದು ವಜಾಗೊಳಿಸಬೇಕೆಂದು ಮತ್ತು ದೂರುದಾರರು ಎದುರುದಾರರಿಗೆ ಸದಸ್ಯರಾಗಿರುತ್ತಾರೆ. ದೂರುದಾರರಿಗೆ ನಿವೇಶನ ಮಂಜೂರು ಮಾಡಲು ಸಿದ್ದರಿದ್ದಾರೆ ಆದರೆ ಅವರು ಬಾಕಿ ಮೊತ್ತವನ್ನು ಪಾವತಿಸಿದರೆ ಕಡಿಮೆ ಅವಧಿಯಲ್ಲಿ ದೂರುದಾರರಿಗೆ ಮಾರಾಟ ಪತ್ರವನ್ನು ಕಾರ್ಯಗತಗೊಳಿಸಲು ಸಿದ್ದರಿರುವುದರಿಂದ ಸದರಿ ನಿವೇಶನದ ಒಟ್ಟು ಮೊತ್ತ ರೂ.8,28,000/- ಆದರೆ ದೂರುದಾರರು ರೂ.1,36,800/- ಮಾತ್ರ ಪಾವತಿಸಿದ್ದು, ಉಳಿದ ಬಾಕಿ ಮೊತ್ತ ರೂ.6,91,200/- ಪಾವತಿಸಿದರೆ ನಿವೇಶನ ಹಂಚಲು ಯಾವುದೇ ತಕರಾರು ಇಲ್ಲವೆಂದು ಆದರೆ ಸರ್ಕಾರ ಮತ್ತು ವಿವಿಧ ಮಂಜೂರಾತಿ ಪ್ರಾಧಿಕಾರಗಳಿಂದ ಹಲವಾರು ಕಾನೂನು ಅಡಚಣೆಗಳ ಹಿನ್ನಲೆಯಲ್ಲಿ ಸದರಿ ಲೇಔಟ್‍ನ ಕಾಮಗಾರಿಯನ್ನು ಪೂರ್ಣಗೊಳಿಸಲು ಆಗಿಲ್ಲ ಹಾಗೂ ವಿಳಂಬವಾಗಿದೆ. ಆದ್ದರಿಂದ ಸರ್ಕಾರ ಹಾಗೂ ವಿವಧ ಅಧಿಕಾರಿಗಳೊಂದಿಗೆ ಕಾಗದದ ಕೆಲಸಗಳು ಪ್ರಗತಿಯಲ್ಲಿವೆ ಆದ್ದರಿಂದ ನಿವೇಶನ ಹಂಚಿಕೆಯಲ್ಲಿ ಇನ್ನು ಒಂದು ವರ್ಷ ತೆಗೆದುಕೊಳ್ಳುತ್ತದೆ. ವಸತಿ ಬಡವಾಣೆಯ ರಚನೆಯ ನಂತರ ನಿವೇಶನಗಳನ್ನು ಸದಸ್ಯರ ಮೊದಲ ಅದ್ಯತೆ ಮೇರೆಗೆ ಹಾಗೂ ಹಿರಿತನದ ಆದ್ಯತೆ ಮೇರೆಗೆ ಹಂಚಲಾಗುವುದು. ಎದುರುದಾರರು ನಿವೇಶನ ಹಂಚಿಕೆ ನೀಡಲು ಆರು ತಿಂಗಳ ಒಳಗೆ ದೂರುದಾರರ ಪರವಾಗಿ ಮಾರಾಟ ಪತ್ರವನ್ನು ಕಾರ್ಯಗತಗೊ|ಳಿಸಲು ಹಾಗೂ ಬಾಕಿ ಮೊತ್ತ ರೂ.6,91,200/- ಗಳನ್ನು ಪಾವತಿಸಲು ದೂರುದಾರರಿಗೆ ನಿರ್ದೇಶಿಸಬೇಕೆಂದು ಮತ್ತು ಎದುರುದಾರರಿಂದ ಯಾವುದೇ ಸೇವಾ ನ್ಯೂನತೆ ಎಸಗಿರುವುದಿಲ್ಲ ಮತ್ತು ವಿಳಂಬವನ್ನು ಮಾಡಿರುವುದಿಲ್ಲ ಆದ್ದರಿಂದ ದೂರನ್ನು ವೆಚ್ಚ ರಹಿತ ವಜಾಗೊಳಿಸಬೇಕೆಂದು ಪ್ರಾರ್ಥಿಸಿರುತ್ತಾರೆ.
4. ದೂರುದಾರರು ಆಯೋಗಕ್ಕೆ ಹಾಜರಾಗಿ ಪ್ರಮಾಣ ಪತ್ರದ ಮೂಲಕ ಸಾಕ್ಷ್ಯವನ್ನು ಸಲ್ಲಿಸಿ ನಿಶಾನೆ ಪಿ.1 ರಿಂದ ಪಿ8 ಎಂದು ಗುರುತಿಸಲಾಗಿದೆ ಎದುರುದಾರರು ಲಿಖಿತ ತಕರಾರನ್ನು ಸಲ್ಲಿಸಿರುತ್ತಾರೆ ವಿನ: ತಮ್ಮ ಪರವಾಗಿ ಯಾವುದೇ ಸಾಕ್ಷ್ಯವನ್ನು ಹಾಗೂ ದಾಖಲೆಯನ್ನು ಹಾಜರುಪಡಿಸಿರುವುದಿಲ್ಲ. ದೂರುದಾರರು ಸಲ್ಲಿಸಿದ ದಾಖಲೆಗಳ ಅರ್ಹತೆಯ ಮೇರೆಗೆ ತೀರ್ಪಿಗಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ?
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
• 1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
• 2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರನು ತನ್ನ ದೂರಿನಲ್ಲಿ ಕೊಟ್ಟ ಸಂಗತಿಗಳನ್ನು ನಾವು ಈಗಾಗಲೇ ಸಂಕ್ಷೀಪ್ತವಾಗಿ ಪ್ಯಾರಾ 2 ರಲ್ಲಿ ವಿವರಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿ ತಕರಾರನ್ನು ಸಲ್ಲಿಸಿರುತ್ತಾರೆ. ಎದುರುದಾರರು ತಮ್ಮ ತಕರಾರಿನಲ್ಲಿ ದೂರುದಾರರು ತಮ್ಮ ಸೊಸೈಟಿಯ ಸದಸ್ಯರಾಗಿ ನಿವೇಶನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದು, ಈ ಸಂಬಂಧ ಮುಂಗಡ ಹಣವನ್ನು ದಿನಾಂಕ 07.09.2007ರಲ್ಲಿ ಕೊನೆಯ ಕಂತನ್ನು ಪಾವತಿಸಿದ್ದು, ಹೊಸ ಕಾಯ್ದೆ 2019ರಂತೆ ಎರಡು ವರ್ಷದ ಅವಧಿಯೊಳಗೆ ದೂರು ದಾಖಲಿಸಲು ಕಾಲ ಪರಿಮಿತಿ ಇರುವುದರಿಂದ |ಈ ಆಯೋಗ ಈ ದೂರನ್ನು ಸ್ವೀಕರಿಸಲು ಅಧಿಕಾರ ಇರುವುದಿಲ್ಲವೆಂದು ಮತ್ತು ರೂ.1,36,800/- ಗಳನ್ನು ಪಾವತಿಸಿದ್ದು, ಬಾಕಿ ಮೊತ್ತ ರೂ.6,91,200/- ಪಾವತಿಸಿದಲ್ಲಿ ನಿವೇಶನದ ಹಿರಿತನದ ಆದಾರದ ಮೇಲೆ ನಿವೇಶನ ಹಂಚಲಾಗುವುದೆಂದು ಮತ್ತು ಸರ್ಕಾರದ ಆಡಳಿತಾಧಿಕಾರಿಗಳಿಂದ ವಿಳಂಬವಾಗಿದ್ದು, ಎದುರುದಾರರ ಕೈಯಲ್ಲಿ ಇರುವುದಿಲ್ಲ. ಯಾವುದೇ ಸೇವಾ ನ್ಯೂನತೆ ಹಾಗೂ ಮಾನಸಿಕ ಹಿ|ಂಸೆ ಎದುರುದಾರರಿಂದ ಉಂಟಾಗಿರುವುದಿಲ್ಲ. ಖರ್ಚು ರಹಿತ ದೂರನ್ನು ವಜಾ ಮಾಡಬೇಕೆಂದು ಕೋರಿರುತ್ತಾರೆ. ಅದಕ್ಕೆ ದೂರುದಾರರು ರೂ.1,36,800/- ಪಾವತಿಸಿರುವುದಕ್ಕೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ ಅಲ್ಲದೆ ಬಾಕಿ ಮೊತ್ತಕ್ಕೆ ರೂ.6,91,200/- ಗಳಿಗೆ ಮೇಲಿನ ಹೇಳಿಕೆಯನ್ನು ಸಾಬೀತು ಪಡಿಸಲು ಎದುರುದಾರರು ಯಾವುದೇ ನುಡಿಸಾಕ್ಷಿಯನ್ನು ದಾಖಲಾತಿಯನ್ನು ಹಾಜರುಪಡಿಸಿರುವುದಿಲ್ಲ.
8. ದೂರುದಾರರು ತಮ್ಮ ದೂರನ್ನು ಸಾಬೀತುಪಡಿಸಲು ನಿಶಾನೆ 1 ರಿಂದ ನಿಶಾನೆ 8ರವರೆಗೆ ಹಾಜರುಪಡಿಸಿರುತ್ತಾರೆ. ದೂರುದಾರರು ಎದುರುದಾರರ ಸೊಸೈಟಿಯ ಸದಸ್ಯರಾಗಿ ಮೈಸೂರಿನಲ್ಲಿರುವ “ಆತ್ಮಾನಂದ ಸಾಗರ” ಬೆಳವಾಡಿ ಮತ್ತು ನಾಗವಾಲ ಗ್ರಾಮದಲ್ಲಿ ವಸತಿ ಯೋಜನೆಯ ಹೆಸರು ಮತ್ತು ಶೈಲಿಯ ಕರಪತ್ರದ ಮೂಲಕ ಮುಂಗಡ ಮೊತ್ತ ರೂ.1,20,000/- ಗಳನ್ನು ನೀಡಿ ಮೊದಲನೆ ಕಂತಿನ ರೂ.1,36,800/- ದಿನಾಂಕ 15.02.2007 ರಲ್ಲಿ ಅಧಿಕಾರಿಗಳ ಅನುಮೋದನೆಯ ಯೋಜನೆಯ ಸಂಬಂಧಿಸಿದ ದಾಖಲೆಗಳನ್ನು ಪಡೆದು ನಿವೇಶನ ಹಂಚಿಕೆ ಪತ್ರವನ್ನು ನೀಡಿರುತ್ತಾರೆ. ತದನಂತರ ಎದುರುದಾರರು 2ನೇ ಕಂತಿನ ಹಣವನ್ನು ನೀಡಲು ಪತ್ರದ ಮೂಲಕ ಒತ್ತಾಯಿಸಿ ರೂ.1,36,800/- ಗಳನ್ನು ಪಾವತಿಸಿದ್ದು, ಕ್ರಮವಾಗಿ ನಿಶಾನೆ 1 ರಿಂದ 4 ಹಾಜರುಪಡಿಸಿರುತ್ತಾರೆ. ಮತ್ತು ಹಂಚಿಕೆ ನಿವೇಶನ ಪತ್ರ ನಿಶಾನೆ 5 ಅಲ್ಲದೆ ಮತ್ತು 1 ಮತ್ತು 2ನೇ ಕಂತಿನ ನೋಟೀಸನ್ನು ಸಹ ನಿಶಾನೆ 6 ಮತ್ತು 7ರಲ್ಲಿ ಹಾಜರುಪಡಿಸಿರುತ್ತಾರೆ. ಹೆಚ್ಚಿನ ದರದ ಬಗ್ಗೆ ಮನವಿಯನ್ನು ಎದುರುದಾರರು ನಿಶಾನೆ 8ರಲ್ಲಿ ನೀಡಿರುತ್ತಾರೆ. ನಿವೇಶನ ಹಂಚಿಕೆಯನ್ನು 2017ರಲ್ಲಿ ಯೋಜನೆಯ ಪ್ರಗತಿಯನ್ನು ಪೂರ್ಣಗೊಳಿಸುವುದಾಗಿ ಮತ್ತು ಕೊನೆಯ ಕಂತು ನೊಂದಣಿ ಸಮಯದಲ್ಲಿ ಕೊಡಬೇಕೆಂದು ನಿಶಾನೆ 5ರಲ್ಲಿ ತಿ|ಳಿಸಿರುತ್ತಾರೆ. ಆದರೆ ಯೋಜನೆ ಪ್ರಗತಿಯನ್ನು ಪೂರ್ಣಗೊ|ಳಿಸಲು ಎದುರುದಾರರು ವಿಫಲರಾಗಿರುತ್ತಾರೆ ಹಾಗೂ ನೀಡಿದ ಭರವಸೆಯನ್ನು ಪೂ|ರ್ಣಗೊಳಿಸದೆ ಮಾನಸಿಕ ಹಿಂಸೆ ಸೇವಾನ್ಯೂನತೆ ಎಸಗಿದ್ದಾರೆಂದು ದೂರುದಾರರಿಗೆ ಯಾವುದೇ ನಿವೇಶನ ಹಂಚಿಕೆ ಮಾಡದೇ ಇದ್ದುದರಿಂದ ಕೊನೆಯದಾಗಿ ದಿನಾ|ಂಕ 31.12.2021ರಂದು ಸಂಪರ್ಕಿಸಿದಾಗ ಜವಾಬು ಕೊಡದೇ ಮನನೊಂದು ಈ ಆಯೋಗಕ್ಕೆ ದೂರನ್ನು ನೀಡಿ ಪರಿಹಾರವನ್ನು ಕೊಡಿಸಬೇಕಾಗಿ ಕೋರಿರುತ್ತಾರೆ.
9. ದೂರುದಾರರು ಒಟ್ಟು ಮೊತ್ತ ರಊ.8,28,000/- ಗಳಲ್ಲಿ ಈಗಾಗಲೇ ರೂ.3,93,600/- ಗಳನ್ನು ಪಾವತಿಮಾಡಿರುತ್ತಾರೆ ಮತ್ತು ಬಾಕಿ ಮೊತ್ತವನ್ನು ಕೊಡಲು ಸಿದ್ದರಿರುತ್ತಾರೆ ಆದರೂ ಸಹ ಎದುರುದಾರರು 2007ರಿಂದ ನಿವೇಶನವನ್ನು ಹಂಚಿಕೆ ಮಾಡದೆ ಆರು ತಿಂಗಳ ಕಾಲಾವಕಾಶವನ್ನು ಯೋಜನೆ ಪೂರ್ಣಗೊಳ್ಳಲು ಕೇಳಿದ್ದು, ಆದಕಾರಣ ಕಾಲ ಪರಿಮಿತಿಯು ಸಂಭವಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮಾನ್ಯ ರಾಷ್ಟ್ರೀಯ ಆಯೋಗದ ತೀರ್ಪು ಈ ಕೆಳಕಂಡಂತೆ ಇರುತ್ತದೆ.
IV (2017) CPJ 229 (NC), wherein it is held that “Sec.24A, 21(a)(i) – limitation – continues cause of action – failure delivery possession of bungalow gives raise to current cause of action to the complainant.
10. ಮೇಲೇ ಉದಾರಿಕರಿಸಿದ ತಿರ್ಪಿನನ್ವಯ ದೂರುದಾರರು ಸಲ್ಲಿಸಿದ ದೂರು ಸಿ.ಪಿ ಕಾಯ್ದೆಯ ಮಿತಿ 24(ಎ) ಪ್ರಕಾರ ಉತ್ತಮವಾಗಿದೆ ಎಂದು ತೀರ್ಮಾನಕ್ಕೆ ಬಂದಿರುತ್ತೇವೆ.
11. ದೂರುದಾರರು ನಿಶಾನೆ 1 ರಿಂದ 4ರಲ್ಲಿ ಅನುಸಾರ ಎದುರುದಾರರಿಗೆ ರೂ.3,93,600/- ಪಾವತಿಸಿರುವುದು ಸಾಬೀತಾಗಿರುತ್ತದೆ. ಇದನ್ನು ಎದುರುದಾರರು ತಮ್ಮ ತಕರಾರಿನಲ್ಲಿ, ನುಡಿಸಾಕ್ಷ್ಯ ಹಾಗೂ ದಾಖಲೆಗಳಿಂದ ಅಲ್ಲಗಳೆಯದೇ ಇರುವುದರಿಂದ, ದೂರುದಾರರ ಪ್ರಾರ್ಥನೆಯಂತೆ ಬಾಕಿ ಮೊತ್ತವನ್ನು ನಿವೇಶನ ಹಂಚಿಕೆ ಸಮಯದಲ್ಲಿ ಕೊಡಲು ಸಿದ್ದರಿರುವುದರಿಂದ ಎದುರುದಾರರಿಂದ ನಿವೇಶನ ಹಂಚಿಕೆಯನ್ನು ಕಾನೂನು ತೊಡಕುಗಳಿವೆ ಎಂದು ಎದುರುದಾರರೆ ತಮ್ಮ ತಕರಾರಿನಲ್ಲಿ ಆರು ತಿಂಗಳ ಸಮಯಾವಕಾಶ ಕೇಳಿಕೊಂಡಿರುವುದರಿಂದ ದೂರುದಾರರಿಗೆ ನಿವೇಶನ ಹಂಚಿಕೆಯನ್ನು ಮಾಡುವಂತೆಯೂ ಅಥವಾ ಮುಂಗಡ ಹಣವನ್ನು ಮರುಪಾವತಿಸುವಂತೆ ನಿರ್ದೇಶಿಸಲು ಅರ್ಹರಾಗಿರುತ್ತಾರೆಂದು ಇದರಿಂದ ದೂರುದಾರರು ಬಾಕಿ ಮೊತ್ತ ರೂ.4,34,400/- ಗಳನ್ನು ಪಾವತಿಸಿದ ನಂತರ 40 60 ನಿವೇಶನವನ್ನು ಹಂಚಿಕೆ ಮಾಡುವಂತೆ ನಿರ್ದೇಶಿಸಲು ತೀರ್ಮಾನಿಸಿದ್ದು, ಎದುರುದಾರರು ನಿವೇಶನವನ್ನು ಹಂಚಿಕೆ ಮಾಡಲು ವಿಫಲರಾದಲ್ಲಿ ಈಗಾಗಲೇ ದೂರುದಾರರು ನೀಡಿರುವ ಮೊತ್ತ ರೂ.3,94,800/- ಗಳನ್ನು ಶೇಕಡ 9ರ ಬಡ್ಡಿಯಂತೆ ಪಾವತಿಸಿದ ದಿನಾಂಕದಿಂದ ಮರುಪಾವತಿಸುವವರೆಗೆ ಪಾವತಿಸಲು ಆದೇಶಿಸುತ್ತೇವೆ. ಮಾನಸಿಕ ಹಿಂಸೆ ಮತ್ತು ಸೇವಾ ನ್ಯೂನತೆಗಾಗಿ ರೂ.10,000/- ಗಳನ್ನು ಮತ್ತು ನ್ಯಾಯಾಲಯದ ಖರ್ಚು ರೂ.5,000/- ಗಳನ್ನು ನೀಡಲು ಆದೇಶಿಸುತ್ತೇವೆ. ಈ ಸಂಬಂಧ ಮಾನ್ಯ ರಾಷ್ಟ್ರೀಯ ಆಯೋಗದ ತೀರ್ಪು ಈ ಕೆಳಕಂಡಂತೆ ಇರುತ್ತದೆ.
EMAAR MGF Land Ltd., and another –vs- Amit Puri, II(2015 CPJ 568 (NC) wherein it is held that, after the promised date of delivery of possession, if the project is not completed, the discretion lies with the complainant whether he wants to take delivery of possession or seeks refund of earnest money.
ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕ ಎಂದು ತೀರ್ಮಾನಿಲಾಗಿದೆ. ಈ ಹಿಂದೆ ಇದೇ ರೀತಿಯ ಪ್ರಕರಣಗಳು ಈ ಗ್ರಾಹಕರ ಆಯೋಗದಲ್ಲಿ ತೀರ್ಪುಗಳನ್ನು ನೀಡಲಾಗಿದೆ.
12. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ಕೊಟ್ಟಿರುವ ನಿರ್ಣಯಕ್ಕೆ ಅನುಗುಣವಾಗಿ ಈ ಕೆಳಕಂಡ ಆದೇಶವನ್ನು ಮಾಡಿದ್ದೇವೆ.
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯಿದೆ 2019ರ ಕಲಂ 35ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರರು ದೂರುದಾರರಿಗೆ ನಿವೇಶನದ ಬಾಕಿ ಮೊತ್ತ ರಊ.4,34,400/- ಗಳನ್ನು ಪಾವತಿಸಿದ ನಂತರ 40 60 ಅಡಿಗಳ ನಿವೇಶನವನ್ನು ಹಂಚಿಕೆ ಮಾಡುವುದು ಅಥವಾ ಎದುರುದಾರರು ನಿವೇಶನವನ್ನು ಹಂಚಿಕೆ ಮಾಡಲು ವಿಫಲರಾದಲ್ಲಿ ಈಗಾಗಲೇ ದೂರುದಾರರು ನೀಡಿರುವ ಮೊತ್ತ ರೂ.3,94,800/- ಗಳನ್ನು ಶೇಕಡ 9ರ ಬಡ್ಡಿಯಂತೆ ಪಾವತಿಸಿದ ದಿನಾಂಕದಿಂದ ಮರುಪಾವತಿಸುವವರೆಗೆ ಪಾವತಿಸಲು ಆದೇಶಿಸುತ್ತೇವೆ.
3. ಎದುರುದಾರರು ಮಾನಸಿಕ ಹಿಂಸೆ ಮತ್ತು ಸೇವಾ ನ್ಯೂನತೆಗಾಗಿ ರೂ.10,000/- ಗಳನ್ನು ಮತ್ತು ನ್ಯಾಯಾಲಯದ ಖರ್ಚು ರೂ.5,000/- ಗಳ ಖರ್ಚುಗಳನ್ನು ಈ ಆದೇಶದ ದಿನಾಂಕದಿಂದ 60 ದಿನಗಳೊಳಗಾಗಿ ಪಾವತಿಸತಕ್ಕದ್ದು. ತಪ್ಪದಲ್ಲಿ ಆದೇಶ ದಿನಾಂಕದಿಂದ ಶೇಕಡ 12%ರಂತೆ ವಾರ್ಷಿಕ ಬಡ್ಡಿಯ ಸಹಿತ ವಸೂಲಿ ಮಾಡಿಕೊಳ್ಳಲು ಆದೇಶಿಸಿದೆ.
4. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯ ಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 14ನೇ ನವೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಎಂ.ಶೋಭಾ)ಅಧ್ಯಕ್ಷರು
ಅನುಬಂಧ
ಪಿರ್ಯಾದುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ
ಕ್ರ.ಸಂ ವಿವರ
- 1.
| Ex.P.1 to P4 – 04 payment receipts issued by OP |
- 2.
| Ex.P.5 – Letter of OP dated 21.08.2007 |
- 3.
| Ex.P.6- Notice for payment of 1st instalment dated 25.01.2007 |
- 4.
| Ex.P.7- Notice for payment of 2nd instalment dated 16.07.2007 |
- 5.
| Ex.P.8- Letter of OP dated 30.05.2009 for payment of difference price escalation |
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಎಂ.ಶೋಭಾ)ಅಧ್ಯಕ್ಷರು