Karnataka

Bangalore Urban

CC/212/2022

A Martin Anthony Isaac - Complainant(s)

Versus

ITI Employees Housing Co-op Society Ltd - Opp.Party(s)

Sri. Balasubrahmanya K M

29 Dec 2022

ORDER

DISTRICT CONSUMER DISPUTES REDRESSAL COMMISSION,
8TH FLOOR, B.W.S.S.B BUILDING, K.G.ROAD,BANGALORE-09
 
Complaint Case No. CC/212/2022
( Date of Filing : 06 Sep 2022 )
 
1. A Martin Anthony Isaac
Aged about 69 Years, S/o Late A Anthony, Residing at No.125,1st Main,7th Street Bank Avenue, Babusapalya,Banaswadi,Bengaluru-560113.
...........Complainant(s)
Versus
1. ITI Employees Housing Co-op Society Ltd
Dooravani Nagar,Bengaluru-5600016, Represented by President
2. ITI Employees Housing Co-op Society Ltd
Dooravani Nagar, Bengaluru-560016, Represented by Secretary, Cum Chief Executive Officer
............Opp.Party(s)
 
BEFORE: 
 HON'BLE MRS. M. SHOBHA PRESIDENT
 HON'BLE MS. Renukadevi Deshpande MEMBER
 
PRESENT:
 
Dated : 29 Dec 2022
Final Order / Judgement
ಉಪಸ್ಥಿತಿ: 1. ಶ್ರೀಮತಿ ಎಂ.ಶೋಭಾ  ಅಧ್ಯಕ್ಷರು,
         2. ಶ್ರೀಮತಿ ರೇಣುಕಾದೇವಿ ದೇಶಪಾಂಡೆ, ಮಹಿಳಾ ಸದಸ್ಯರು,
ಆದೇಶ 
 
ಸಿ.ಸಿ.ಸಂಖ್ಯೆ:212/2022
ಆದೇಶ ದಿನಾಂಕ 29ನೇ ಡಿಸೆಂಬರ್ 2022
ಶ್ರೀ ಎ ಮಾರ್ಟಿನ್ ಆಂತೋನಿ ಐಸಾಕ್,
ಬಿನ್.ಲೇಟ್ ಎ.ಆಂತೋನಿ,
69 ವರ್ಷ,
ನಂ.125, 1ನೇ ಮೇನ್, 7ನೇ ಬೀದಿ, ಬ್ಯಾಂಕ್ ಅವೆನ್ಯೂ, ಬಾಬುಸಪಾಳ್ಯ, ಬಾಣಸವಾಡಿ, ಬೆಂಗಳೂರು 560 113.
 
(ಶ್ರೀ ಬಾಲಸುಬ್ರಮಣ್ಯ ಕೆ.ಎಂ. ವಕೀಲರು)                                   
 
-ಪಿರ್ಯಾದುದಾರರು
       ವಿರುದ್ಧ
1. ಐಟಿಐ ಎಂಪ್ಲಾಯಿಸ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ.
ದೂರವಾಣಿ ನಗರ,
ಬೆಂಗಳೂರು 560 016.
ಪ್ರತಿನಿಧಿಸುವವರು ಅಧ್ಯಕ್ಷರು
 
2. ಐಟಿಐ ಎಂಪ್ಲಾಯಿಸ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ.
ದೂರವಾಣಿ ನಗರ,
ಬೆಂಗಳೂರು 560 016.
ಪ್ರತಿನಿಧಿಸುವವರು ಕಾರ್ಯದರ್ಶಿ
 
- ಎದುರುದಾರರು
 
ಶ್ರೀಮತಿ ರೇಣುಕಾದೇವಿ ದೇಶಪಾಂಡೆ 
ಮಹಿಳಾ ಸದಸ್ಯರು,
 
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಕಲಂ 35ರ ಅಡಿಯಲ್ಲಿ ದೂರು ಸಲ್ಲಿಸಿದ್ದು, 
1. ಎದುರುದಾರರಿಂದ ರಚಿಸಿದ ನಗರೂರು ಲೇಔಟ್‍ನಲ್ಲಿ 30ಘಿ40 ಅಡಿಗಳ ನಿವೇಶನವನ್ನು ತಕ್ಷಣವೇ ಮಂಜೂರು ಮಾಡಲು ನಿರ್ದೇಶಿಸಬೇಕೆಂದು ಅಥವಾ
2. ಪರ್ಯಾಯವಾಗಿ ಐಟಿಐ ನೌಕರರ ಹೌಸಿಂಗ್ ಕೋ ಆಪರೇಟೀವ್ ಸೊಸೈಟಿ ಲಿಮಿಟೆಡ್‍ಗೆ ಮಾಡಿದ ಪ್ರತಿ ಪಾವತಿಯ ಸ್ವೀಕೃತಿಯ ದಿನಾಂಕದಿಂದ ವರ್ಷಕ್ಕೆ ಚಕ್ರಬಡ್ಡಿ ಸಹಿತ 21% ಜೊತೆಗೆ ರೂ.4,50,000/- ಮರುಪಾವತಿಸುವಂತೆ ನಿರ್ದೇಶಿಸಬೇಕೆಂದು
3. ದೂರುದಾರರಿಗೆ ಅನಗತ್ಯ ತೊಂದರೆ ಕಿರುಕುಳ ಮಾನಸಿಕ ಹಿಂಸೆ ಮತ್ತು ಸೇವಾ ನ್ಯೂನತೆ ಕೊರತೆಯಿಂದ ಉಂಟಾದ ಹಾನಿಗಾಗಿ ಪರಿಹಾರ ರೂಪವಾಗಿ ರೂ.10,00,000/- ಗಳನ್ನು ಪಾವತಿಸುವಂತೆ
4. ವ್ಯಾಜ್ಯದ ಖರ್ಚು ರೂ.50,000/- ಗಳನ್ನು ಮತ್ತು 
5. ಸೂಕ್ತವೆಂದು ಪರಿಗಣಿಸಬಹುದಾದ ಇತರೆ ಪರಿಹಾರವನ್ನು ನೀಡಿದ ಸಂಧರ್ಬಗಳನ್ನು ನ್ಯಾಯಕೊಡಿಸಿ ನಿರ್ದೆಶಿಸಬೇಕೆಂದು ಕೋರಿರುತ್ತಾರೆ. 
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ಪ್ರಸ್ತುತ ದೂರನ್ನು 69ರ ಕಾಯ್ದೆಯಡಿಯಲ್ಲಿ ಸೂಚಿಸಲಾದ ಅವಧಿಯೊಳಗೆ ಸಲ್ಲಿಸಲಾಗಿದೆ. ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ಯಮವಾದ ಐಟಿಐ ಲಿಮಿಟೆಡ್‍ನ ಉದ್ಯೋಗಿ ಮತ್ತು ಈ ಸಂಸ್ಥೆಯಲ್ಲಿ ವಿವಿಧ ಸಾಮಥ್ರ್ಯಗಳಲ್ಲಿ 33 ವರ್ಷಗಳಿಂದ ದೂರುದಾರರು ಸೇವೆ ಸಲ್ಲಿಸಿದ್ದು, ಬೆಂಗಳೂರು ಸುತ್ತ ಮುತ್ತ ಲೇಔಟ್‍ಗಳ ರಚನೆ ಮತ್ತು ಅದರ ಸದಸ್ಯರಿಗೆ ವಸತಿ ನಿವೇಶನಗಳನ್ನು ಹಂಚಿಕೆ ಮಾಡುವ ಮುಖ್ಯ ಉದ್ದೇಶದಿಂದ ಎದುರುದಾರರು ಸೊಸೈಟಿಯನ್ನು ರಚಿಸಿದ್ದಾರೆಂದು ಇದಕ್ಕೆ ದೂರುದಾರರು ಅಗತ್ಯ ಶುಲ್ಕವನ್ನು ಪಾವತಿಸಿ ಇದಕ್ಕೆ ಸದಸ್ಯರಾಗಿದ್ದು, ರಶೀದಿ ಸಂಖ್ಯೆ 3414 ದಿನಾಂಕ 27.06.1981ರಂದು ದೂರುದಾರರು ಇದರ ಸದಸ್ಯರಿಗೆ ದಿನಾಂಕ 28.11.2004ರಂದು ಬೆಂಗಳೂರಿನ ದಾಸನಪುರ ಹೋಬಳಿಯ ನಗರೂರು ಗ್ರಾಮದಲ್ಲಿರುವ ಹೊಸದಾಗಿ ರೂಪಗೊಂಡಿರುವ ಬಡಾವಣೆಗಳಲ್ಲಿಯ ವಿವಿಧ ಆಯಾಮಗಳಲ್ಲಿ ನಿವೇಶನಗಳ ಹಂಚಿಕೆಗಾಗಿ ಅರ್ಜಿಯನ್ನು ಆಹ್ವಾನಿಸಿದ್ದು, ದೂರುದಾರರು ತಾನು ಕಂಪನಿಯಲ್ಲಿ ಸೇವೆಯಲ್ಲಿದ್ದಾಗಲೇ   30ಘಿ40 ಅಡಿ ಅಳತೆಯ ವಸತಿ ನಿವೇಶನ ಮಂಜೂರು ಮಾಡಲು ದಿನಾಂಕ 11.06.2012ರಲ್ಲಿ ಅರ್ಜಿ ಸಲ್ಲಿಸಿದ್ದು, ದೂರುದಾರರು ವಿವಿಧ ದಿನಾಂಕಗಳಲ್ಲಿ ಎದುರುದಾರರ ಸುತ್ತೋಲೆಗಳ ಅನುಸಾರ ಒಟ್ಟು ರೂ.4,50,000/- ಗಳನ್ನು ಪಾವತಿಸಿದ್ದು, ಈ ಪಾವತಿಗಳ ಆದಾರದ ಮೇಲೆ ಸೊಸೈಟಿಯಿಂದ ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಮತ್ತು ದೂರುದಾರರು ಮಾಡಿದ ಪಾವತಿಗಳ ಸರಿಯಾದ ಪರಿಶೀಲನೆಯ ನಂತರ ಸಹಕಾರ ಸಂಘಗಳ ರಿಜಿಸ್ಟ್ರಾರ್‍ರವರಿಂದ ಅನುಮೋದಿಸಲಾಗುವುದೆಂದು ತಿಳಿಸಿದ್ದು, ದಿನಾಂಕ 11.06.2012ರ ರಶೀದಿಯ ಸಂಖ್ಯೆ 7623 ರ ಸೊಸೈಟಿಯ ಸುತ್ತೋಲೆಯಂತೆ ಐಟಿಐ ಇಹೆಚ್‍ಸಿಎಸ್/06/2010-11ರ ದಿನಾಂಕ 01.10.2010ರ ಪ್ರಕಾರ ಆರು ತಿಂಗಳೊಳಗೆ ನಿವೇಶನವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದು, 19.12.2011ರಂದು ಐಟಿಐ ಇಹೆಚ್‍ಸಿಎಸ್/14/2011-12ರ ಸುತ್ತೋಲೆಯಂತೆ 248 ನಿವೇಶನವನ್ನು ಹಂಚಿಕೆ ಮಾಡಿದೆ ಎಂದು ಮತ್ತೊಮ್ಮೆ ನಿವೇಶನವನ್ನು ಮಂಜೂರು ಮಾಡಲು ಅರ್ಹತೆಗಳಿದ್ದರೂ ಯಾವುದೇ ಮಾನ್ಯ ಕಾರಣವಿಲ್ಲದೆ ಹಂಚಿಕೆಯನ್ನು ನಿರಾಕರಿಸಲಾಗಿದೆ. ಅಲ್ಲದೆ ಎದುರುದಾರರು ಮುಂದಿನ ಎರಡು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.  ದೂರುದಾರರು ಪಾವತಿಸಿದ ಮತ್ತು ಪಾವತಿಸಬೇಕಾದ ವಿವರಗಳನ್ನು ಎದುರುದಾರರು ನೋಟೀಸ್ ನೀಡಿದ್ದು, ಈ ಸೂಚನೆಯಂತೆ ಯಾವುದೇ ಸಂವಹನವನ್ನು ಸ್ವೀಕರಿಸಲಿಲ್ಲ. ಮೊದಲನೆಯ ಎಜಿಎಂ ವಾರ್ಷಿಕ ಸಾಮಾನ್ಯ ಸಭೆಯ ಅನುಮೋದಿಸಲಾದ ನಗರೂರು ಲೇಔಟ್‍ನ ಮಂಜೂರಾತಿ ಜೇಷ್ಠತಾ ಪಟ್ಟಿಗಳು ಸಿದ್ದಪಡಿಸುವುದಾಗಿ ತಿಳಿಸಿದ್ದು, ಇದುವರೆಗೆ ಅಂದರೆ 10 ವರ್ಷದಿಂದ ಎದುರುದಾರರು ತಮ್ಮ ಬದ್ದತೆಗಳನ್ನು ಉಳಿಸಿಕೊಳ್ಳಲು ಸಂಪೂರ್ಣ ವಿಫಲರಾಗಿದ್ದಾರೆಂದು ಜೇಷ್ಠತಾ ಪಟ್ಟಿ ಪ್ರಕಟಿಸಿಲ್ಲವೆಂದು ಎರಡನೇ ವಾರ್ಷಿಕ ಸಭೆ ದಿನಾಂಕ 24.12.2021ರಂದು ನಡೆದಿದ್ದು, ಬಡಾವಣೆ ರಚನೆ ಪ್ರಗತಿಯಲ್ಲಿದೆ ಎಂದು ಸದಸ್ಯರಿಗೆ ಸೂಕ್ತ ಸಮಯದಲ್ಲಿ ನಿವೇಶನ ಹಂಚಲಾಗುವುದೆಂದು ಸದಸ್ಯರಿಗೆ ಭರವಸೆ ನೀಡುತ್ತಾ ಬಂದಿದೆ. ಅಲ್ಲದೇ ದೂರುದಾರರು ಕಂಪನಿಯ ಸೇವೆಯಿಂದ ನಿವೃತ್ತನಾಗಿದ್ದರೂ ಎದುರುದಾರರು ತಮ್ಮ ಕರ್ತವ್ಯಗಳನ್ನು ಮಾಡುವಲ್ಲಿ ವಿಫಲವಾಗಿವೆ ಎಂದು  ದೂರುದಾರರು ಸೊಸೈಟಿ ಕಛೇರಿಗೆ ಪ್ರತಿ ವಾರ ಭೇಟಿ ನೀಡಿ ಪ್ರಯಾಣದ ಮೊತ್ತವನ್ನು ವ್ಯಯಿಸಿದ್ದರೂ ಯಾವುದೇ ಪ್ರಯೋಜನವಾಗದೇ ಕೊನೆಯದಾಗಿ ಕಾನೂನು ನೋಟೀಸು ದಿನಾಂಕ 10.08.2022ರಂದು ನೀಡಿದ್ದು, ಇದರಲ್ಲಿ ಪಾವತಿಸಿದ ಮೊತ್ತವನ್ನು ಹಿಂದಿರುಗಿಸುವಂತೆ ಕೋರಿರುತ್ತಾರೆ.  10 ವರ್ಷದಿಂದ ಕುತೂಹಲದಿಂದ ಕಾಯುತ್ತಿದ್ದರೂ ಸೊಸೈಟಿಯ ಆನಿಯಂತ್ರಿತ ಮತ್ತು ಬೇಜವಾಬ್ದಾರಿತನದಿಂದ ಅಸಮಾದಾನಗೊಂಡಿದ್ದಾರೆಂದು ಅಲ್ಲದೇ ಎದುರುದಾರರು ತಮ್ಮ ಸುತ್ತೋಲೆ ಐಟಿಐಬಿಹೆಚ್‍ಸಿಎಸ್/4/2004-05 ದಿನಾಂಕ 28.12.2004ರಲ್ಲಿ ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಒಪ್ಪಿಕೊಂಡಿದ್ದು ಮತ್ತು ಜೇಷ್ಠತಾ ಪಟ್ಟಿ ಸಿದ್ದಪಡಿಸಿ ಸೊಸೈಟಿಗಳ ರಿಜಿಸ್ಟ್ರಾರ್‍ಗೆ ಸಲ್ಲಿಸಿದೆ. ಆದರೆ ಸದಸ್ಯರ ಮಾಹಿತಿಗಾಗಿ ಅದನ್ನು ಪ್ರಕಟಿಸಲು ವಿಫಲವಾಗಿದೆ ಎಂದು ಅಲ್ಲದೇ ಸದಸ್ಯರ ಹಿರಿಯತನವನ್ನು ಕಡೆಗಾಣಿಸಿ ಎದುರುದಾರರು ನಿವೇಶನ ಹಂಚಿಕೆ ಮಾಡಿದ್ದಾರೆ.  ಇದರ ವಿವರಗಳನ್ನು ಹಾಜರುಪಡಿಸುವಂತೆ ಕೋರಿರುತ್ತಾರೆ.  
ಹಲವಾರು ಮೌಕಿಕ ಮನವಿಗಳು, ವಿವಿಧ ಸಭೆಗಳು ಮತ್ತು ಕಾನೂನು ಸೂಚನೆ ನಂತರವೂ ಸಹ ಎದುರುದಾರರು ವಸತಿ ನಿವೇಶನಗಳ ಮಂಜೂರು ಮಾಡುವಲ್ಲಿ ತಮ್ಮ ಕರ್ತವ್ಯಗಳಲ್ಲಿ ವಿಫಲವಾಗಿದೆ ಎಂದು ಅಲ್ಲದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಮಾನಸಿಕ ಹಿಂಸೆ ತಾಳಲಾರದೇ ದೂರುದಾರರು ಈ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.  ಮತ್ತು ಎದುರುದಾರರಿಂದ ಪರಿಹಾರ ಕೊಡಿಸಬೇಕೆಂದು ಕೋರಿರುತ್ತಾರೆ.
4. ದೂರನ್ನು ಅಂಗಿಕರಿಸದ ಬಳಿಕ 1 ಮತ್ತು 2ನೇ ಎದುರುದಾರರು ನೋಟೀಸ್ ನೀಡಲಾಗಿತ್ತು ಈ ನೋಟೀಸನ್ನು ಸ್ವೀಕರಿಸಿದ ಬಳಿಕವೂ 1 ಮತ್ತು 2ನೇ ಎದುರುದಾರರು ಗೈರು ಹಾಜರಾಗಿರುತ್ತಾರೆ. ಆದ್ದರಿಂದ ಅವರನ್ನು ಏಕಪಕ್ಷೀಯವಾಗಿ ಇಡಲಾಗಿದೆ.  
5. ದೂರುದಾರರು ಈ ಆಯೋಗಕ್ಕೆ ಹಾಜರಾಗಿ ಪ್ರಮಾಣ ಪತ್ರದ ಮೂಲಕ ನುಡಿ ಸಾಕ್ಷ್ಯವನ್ನು ಸಲ್ಲಿಸಿ ದಾಖಲೆಗಳನ್ನು ಸಲ್ಲಿಸಿದ್ದು, ನಿಶಾನೆ 1ರಿಂದ 10 ಎಂದು ಗುರುತಿಸಲಾಗಿದೆ. ವಾದವನ್ನು ಮಂಡಿಸಿರುತ್ತಾರೆ. ತೀರ್ಪಿಗಾಗಿ ಇಡಲಾಗಿದೆ.
6. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರರು, ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ, ದುರ್ನಡತೆಯನ್ನು, ನಿರ್ಲಕ್ಷತೆಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ? 
(2) ಆದೇಶ ಏನು?
7. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
8. 1ನೇ ಅಂಶದ ಮೇಲೆ:- ದೂರುದಾರರು ತನ್ನ ದೂರಿನಲ್ಲಿ ಕೊಟ್ಟ ಸಂಗತಿಗಳನ್ನು ನಾವು ಈಗಾಗಲೇ ಸುದೀರ್ಘವಾಗಿ ಪ್ಯಾರಾ-2ರಲ್ಲಿ ವಿವರಿಸಿದ್ದೇವೆ.  ಪ್ರಸ್ತುತ ಪ್ರಕರಣದಲ್ಲಿ 1 ಮತ್ತು 2ನೇ ಎದುರುದಾರರು ಈ ಆಯೋಗದಿಂದ ಕಳುಹಿಸಿದ ನೋಟೀಸ್ ಜಾರಿಯಾಗಿದ್ದರೂ ಕೂಡ ಈ ಆಯೋಗಕ್ಕೆ ಮುಂದೆ ಹಾಜರಾಗದೆ, ಗೈರು ಹಾಜರಾಗಿದ್ದು, ಆ ಕಾರಣಕ್ಕಾಗಿ ಅವರನ್ನು ಏಕಪಕ್ಷೀಯವಾಗಿ ಇಡಲಾಗಿದೆ. 
9. ದೂರಿನಲ್ಲಿನ ಅಂಶಗಳನ್ನು ಎದುರುದಾರರು ಆಯೋಗದ ಮುಂದೆ ಹಾಜರಾಗಿ ಅಲ್ಲಗಳೆಯದೇ ಇರುವುದರಿಂದ ದೂರಿನಲ್ಲಿ ಹೇಳಿದ ಸಂಗತಿಗಳು ನಿಜವೆಂದು ಅಭಿಪ್ರಾಯಕ್ಕೆ ಬರಬಹುದೆಂದು ಮಾನ್ಯ ರಾಷ್ಟ್ರೀಯ ಗ್ರಾಹಕರ ಆಯೋಗವು 2018(1) ಸಿಪಿಆರ್ 314 ಎನ್‍ಸಿ ರಲ್ಲಿ ಸಿಂಗನಾಳ್ ಬಿಲ್ಡರ್ಸ್ ಮತ್ತು ಪ್ರಮೋಟರ್ಸ್ ಲಿಮಿಟೆಡ್ – ಅಮನ್ ಕುಮಾರ್ ಜಾರ್ಜ್ ಪ್ರಕರಣದಲ್ಲಿ ಉಲ್ಲೇಖಿಸಿರುತ್ತಾರೆ. 
ದೂರುದಾರರು ತಮ್ಮ ಪ್ರಕರಣವನ್ನು ಸಾಬೀತುಪಡಿಸಲು ನುಡಿಸಾಕ್ಷ್ಯವನ್ನು ಮತ್ತು ದಾಖಲೆಗಳು ನಿಶಾನೆ ಪಿ1 ರಇಂದ ಪಿ10 ಹಾಜರುಪಡಿಸಿರುತ್ತಾರೆ. ದೂರುದಾರರು ಎದುರುದಾರರು ಸುತ್ತೋಲೆ ದಿನಾಂಕ 28.11.2004 ನಿಶಾನೆ 2ರಂತೆ ಮುಂಗಡ ಹಣವನ್ನು 11.06.2012ರಂದು ಒಟ್ಟು ಮೊತ್ತ ರೂ.4,50,000/-ಗಳನ್ನು ನಿಶಾನೆ ಪಿ4ರಂತೆ ಪಾವತಿಸಿದ್ದು, ನಿಶಾನೆ ಪಿ2 ದಿನಾಂಕ 28.11.2004ರ ಸುತ್ತೋಲೆ ಈ ಕೆಳಗಿನಂತೆ ಇರುತ್ತದೆ. ಪುಟ 14
ಸದರಿ ಬಡಾವಣೆಯಲ್ಲಿ 30ಘಿ40, 30ಘಿ50, 40ಘಿ60 ಮತ್ತು 50ಘಿ80 ಅಳತೆಯ ನಿವೇಶನಗಳನ್ನು ನಿರ್ಮಾಣ ಮಾಡಲಾಗುವುದು. ಮೇಲೆ ತಿಳಿಸಿದಂತೆ ಎಲ್ಲಾ ಮೂಲ ಸೌಲಭ್ಯಗಳು ಸೇರಿದಂತೆ ಪ್ರತಿ ಚದರ ಅಡಿಗೆ ರೂ.130/- ರಂತೆ ದರ ನಿಗಧಿಗೊಳಿಸಲಾಗಿರುತ್ತದೆ. ನಿಗಧಿತ ಅವಧಿಯೊಳಗೆ ನಿವೇಶನ ಹಂಚಿಕೆ ಮಾರ್ಪಾಡು ಮಾಡಲಾಗುವುದು. ಸದರಿ ಹಂಚಿಕೆಯನ್ನು ಸದಸ್ಯರು ಹಣ ಠೇವಣಿ ಮಾಡುವ ದಿನಾಂಕದ ಜೇಷ್ಠತೆಯ ಆಧಾರದ ಮೇಲೆ ಲಾಟರಿ ಮೂಲಕ ಹಂಚಲಾಗುವುದು.
30ಘಿ40 ಅಳತೆಗೆ ರೂ.30,000/-   30ಘಿ50 ಅಳತೆಗೆ ರೂ.40,000/-
  40ಘಿ60 ಅಳತೆಗೆ ರೂ.60,000/-    50ಘಿ80 ಅಳತೆಗೆ ರೂ.1,00,000/-
 
ಮತ್ತು ನಿಶಾನೆ 5 ಈ ಕೆಳಗಿನಂತೆ ಇರುತ್ತದೆ. ಪುಟ 17, ದಿನಾಂಕ 16.08.2012

The Registrar of Co-operative Societies has accorded permission and certified the list vide order No.HSG-1/74/HHS/2011-12 dated 10.08.2012 to abide by certain conditions:

  1. The Members/Associate members who have been issued allotment letter as per the draw held on 19.12.2011 are hereby informed to remit their dues as per correct dimension report.
  2. The registration of sites need to be done within 90 days.
  3. If they fail to register the sites within the stipulated date, their allotment will be cancelled and will be allotted to next senior member as per the list.
  4. The members who have already paid the sital value of the their sites and who have not submitted the documents as per 30(b) direction are hereby informed to submit the documents immediately. Then only the sites will be registered.
ನಿಶಾನೆ 6 ದಿನಾಂಕ 17.04.2019 ಪುಟ 19ರಲ್ಲಿ ನಗರೂರು ನಿವೇಶನಗಳನ್ನು ಹಿರಿಯತನದ ಆಧಾರದ ಮೇಲೆ ನಿವೇಶನ ಮಂಜೂರು ಮಾಡಲು ಕಾರ್ಯಕಾರಿ ಸಮಿತಿಯು ಪ್ರಯತ್ನ ಮಾಡುತ್ತಿದ್ದು, ಬಡವಾಣೆಯ ಗುತ್ತಿಗೆ ದಾರರಾದ ಶ್ರೀ ಬಾಲಾಜಿ ಲ್ಯಾಂಡ್ ಡೆವಲಪರ್ಸ್ ಜೊತೆ ಮಾತುಕತೆ ನಡೆಸಿದ್ದು, ದಿನಾಂಕ 19.03.2019 ರಂದು ನಗರೂರು ಬಡಾವಣೆಯ ನಿವೇಶನಕ್ಕೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸಿ ಕಾಯುತ್ತಿರುವ ಸದಸ್ಯರ ಸಭೆಯಲ್ಲಿ ಸದಸ್ಯರಿಗೆ ನೀಡಿದ ಭರವಸೆಯಂತೆ 1 ಎಕರೆ 0.26 ಜಮೀನು ನೊಂದಣೆ ಮಾಡಿಕೊಂಡಿರುತ್ತಾರೆ.  ಪೂರ್ಣ ಹಣ ಪಾವತಿಸಿದವರಿಗೆ ಮಂಜೂರು ಮಾಡಲು ಒಪ್ಪಿರುತ್ತಾರೆ. ಹತ್ತು ವರ್ಷಗಳಿಂದ ಕಾಯುತ್ತಾ ಬಂದಿದ್ದೂ ದುರದೃಷ್ಟಕರ, 40ಘಿ60 ನಿವೇಶನವಾದರೂ ಅವಕಾಶ ಮಾಡಿಕೊಡಬಹುದಿತ್ತು. ಆದರೆ ಯಾವುದಕ್ಕೂ ಮಾಹಿತಿ ಕೊಡದೇ ದೂರುದಾರರಿಗೆ ಈಗ 69 ವಯಸ್ಸಾಗಿದ್ದು, ಅವರ ಕನಸಿನ ಮನೆ ಕನಸಾಗೆ ಉಳಿಯುವಂತೆ ಆಗಿದೆ. ಎಷ್ಟೇ ಹಣ ಬಡ್ಡಿಯೊಂದಿಗೆ ಹಿಂದಿರುಗಿಸಿದರೂ ಮನಸ್ಸಿಗೆ ಆದ ಗಾಯವನ್ನು ಮರೆಯುವಂತಿಲ್ಲ ಮತ್ತು ಮನಸ್ಸಿನ ನೋವಿಗೆ ಬೆಲೆಕಟ್ಟುವಂತಿಲ್ಲ. ಈ ವಯಸ್ಸಿನಲ್ಲಿ, ಎದುರುದಾರರಿಗೆ ದಿನಾಂಕ 10.08.2022ರಂದು ಕಾನೂನು ನೋಟೀಸು ನೀಡಿದ್ದು, ಅಲ್ಲದೆ ಎದುರುದಾರರು ಒಂದರಮೇಲೊಂದರಂತೆ ಸುತ್ತೋಲೆಗಳನ್ನು ಕಳುಹಿಸುತ್ತ, ಹಿರಿಯತನ ಮತ್ತು ವಯಸ್ಸಿನ ಹಿರಿಯರಿಗೆ ಯಾವುದೇ ರೀತಿಯಲ್ಲಿ ನೌಕರರಿಗೆ ಸೈಟ್ ಬಗ್ಗೆ ಕಳಕಳಿ ಹೊಂದದೆ, ಇದರಿಂದ ದೂರುದಾರರು ಮಾನಸಿಗೆ ಆಘಾತವನ್ನು ಉಂಟು ಮಾಡಿದ್ದಾರೆ. 
ನಿಶಾನೆ 10 ಪೇಜ್ 29 ದಿನಾಂಕ 05.04.2011

We have already sent notice and intimated through circulars to the applicant members in those who are applied for the site to pay I and II instalment amount in full before 31st March 2011 without fail.  Applicant who fails to remit instalments on time will be charged interest at the rate of 16% on the balance instalment amount. W.e.f. 1/4/2011.

That the most important thing to bring the kind notice of the members is that, those who have already paid the notified sital deposit within the stipulated time and those who are ready and willing to pay the full sital amount, we be allotted sites on the basis of their seniority during May 2011 and the arrangements will also be made for registering the sites in their favour.  In connection with release of sites, correspondence was made with BMRDA and we are shortly expecting sites release order from the concerned authority.

ಇದಕ್ಕೆ ಪ್ರತಿಕೂಲವಾಗಿ ರಾಷ್ಟ್ರೀಯ ಆಯೋಗವು 
 
Decision of Hon’ble National Commission, wherein it is held that “Self made rules for own firm have no legal significance if proved contrary to law.”We cited the said decision for the simple reasons that, the rules and regulations made by the Ops are subjected to the Judicial scrutiny as to know whether they are fare or contrary to the law. In the instant case,
 
12. ಎದುರುದಾರರು ತೆಗೆದುಕೊಳ್ಳುವ ಏಕೈಕ ರಕ್ಷಣೆ ಎಂದರೆ ದೂರುದಾರರು ಮಾರಾಟ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಅದರಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ತಿಳಿದುಕೊಂಡು ಅದರ ಮೇಲೆ ಅವರ ಸಹಿಯನ್ನು ಹಾಕಿ ಒಪ್ಪಿಕೊಂಡಿರುತ್ತಾರೆ. ಆದ್ದರಿಂದ ಅವರು ಅದರ ಮೇಲೆ ಷರತ್ತುಗಳನ್ನು ಬದ್ದಗೊಳಿಸುವುದು ಅಥವಾ ಎದುರುದಾರರು ತೆಗೆದುಕೊಂಡ ವಿವಾದವು ಮೇಲೆ ಉಲ್ಲೇಖಿಸಲಾದ ನಿರ್ಧಾರಗಳ ಬೆಳಕಿನಲ್ಲಿ ನಿಲ್ಲಲು ಯಾವುದೇ ಹಕ್ಕನ್ನು ಹೊಂದಿಲ್ಲ. ದಿನಾಂಕ 16.08.2012ರ ಸುತ್ತೋಲೆಯಲ್ಲಿ ನಿಶಾನೆ ಪಿ5ರಂತೆ ತೊಂಭತ್ತು ದಿನಗಳೊಳಗಾಗಿ ನಗರೂರು ಲೇಔಟ್‍ನ ಪ್ರಾಜೆಕ್ಟ್ ಪೂರ್ಣಗೊಳಿಸಿ ನಿವೇಶನವನ್ನು ಮಂಜೂರು ಮಾಡಲು ಒಪ್ಪಿರುತ್ತಾರೆ.  ದೂರುದಾರರಿಂದ ರೂ.4,50,000/- ಎದುರುದಾರರು ಸ್ವೀಕರಿಸಿ ನಿಶಾನೆ ಪಿ4 ಪ್ಯಾರ 16 ಮೊದಲ ನಿವೇಶನದಲ್ಲಿ 16.08.2012ರ ಸುತ್ತೋಲೆಯಂತೆ 90 ದಿನಗಳೊಳಗೆ ಬಾಕಿ ಇರುವ ಹಂಚಿಕೆಗಳನ್ನು ತೆರವುಗೊಳಿಸುವಲ್ಲಿ ಪುನರುಚ್ಚರಿಸಿರುತ್ತಾರೆ. ಆದರೆ ಎಲ್ಲಾ ಸಾಮಾನ್ಯ ಸಭೆಗಳಲ್ಲಿ ಅದರ ಸದಸ್ಯರಿಗೆ ನಿವೇಶನಗಳನ್ನು ಹಂಚುವುದಾಗಿ ಭರವಸೆ ನೀಡುವುದನ್ನು ಮುಂದುವರೆಸಿದೆ ಕೊನೆಯದಾಗಿ 24.12.2021ರಂದು ನಿಶಾನೆ ಪಿ8 ರಂತೆ ಎದುರುದಾರರು ಅವರ ಸ್ವಂತ ಇಚ್ಚೆಯಂತೆ ನಿವೇಶನಗಳ ಹಂಚಿಕೆಯಲ್ಲಿ ತಮ್ಮದೇ ಆದ ಕ್ಷುಲ್ಲಕ ಕಾರಣ, ಈ ಅಸಮರ್ಥ ಕಾರಣಗಳನ್ನು ಉಲ್ಲೇಖಿಸಿ ನಿವೇಶನಗಳ ಹಂಚಿಕೆಯನ್ನು ನಿರಾಕರಿಸಿದೆ. ಆದರೂ ಸಹ 10 ವರ್ಷಗಳ ಹಿಂದೆ ದೂರುದಾರರಿಂದ ರೂ.4,50,000/- ಗಳನ್ನು ಪಡೆದು ಅದರಿಂದ ಸೊಸೈಟಿಯಿಂದ ಬದ್ದವಾಗಿರುವ ಗ್ರಾಹಕ ಸಂರಕ್ಷಣಾ ಕಾಯ್ದೆಯಂತೆ ಸೇವಾ ನ್ಯೂನತೆ ಎಸಗಿದ್ದಾರೆಂದು ದೂರುದಾರರು ಆಯ್ಕೆ ಮಾಡಿದ ನಿವೇಶನ ಹಂಚಿಕೆಯ ಕಾನೂನು ಪದ್ದತಿಯನ್ನು ಎದುರುದಾರರು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಅದರಿಂದ ನಿವೇಶನ ಹಂಚಿಕೆಯಾಗಿ ದೂರುದಾರರ ಪ್ರಕಾರ ನ್ಯಾಯದಂತೆ ಸಮಂಜಸವಾಗಿದೆ ಎಂದು ಅದರಂತೆ ದೂರುದಾರರು ಪ್ರಾರ್ಥಿಸಿದಂತೆ ನಿವೇಶನ ಹಂಚಿಕೆಗಾಗಿ ಈ ಆಯೋಗಕ್ಕೆ ನಿರ್ದೇಶನಕ್ಕಾಗಿ ಪ್ರಾರ್ಥಿಸಿರುತ್ತಾರೆ ಅಥವಾ ಪರ್ಯಾಯವಾಗಿ ಬಡ್ಡಿಯೊಂದಿಗೆ ಪೂರ್ಣಮೊತ್ತವನ್ನು ಮರುಪಾವತಿಸಿರುವಂತೆ ಪ್ರಾರ್ಥಿಸಿರುತ್ತಾರೆ.  ದೂರುದಾರರು ರೂ.4,50,000/- ಗಳನ್ನು ಒಂದೇ ಕಂತುಗಳನ್ನು ಎದುರುದಾರರಿಗೆ ನಿವೇಶನ ಹಂಚಿಕೆಗಾಗಿ ನೀಡಿರುತ್ತಾರೆ.  ಇದರಿಂದ ದೂರುದಾರರಿಗೆ ನಿವೇಶನ ಹಂಚಿಕೆಯಲ್ಲಿ ಅಪಾರ ವಿಳಂಬ ಮತ್ತು ಅಸಮಂಜಸ ನಿರಾಕರಣೆ ಮತ್ತು ಸುಳ್ಳು ದಾರಿ ತಪ್ಪಿಸುವ ಭರವಸೆಗಳನ್ನು ಹಲವು ಸಂಧರ್ಭಗಳಲ್ಲಿ ನೀಡಿರುತ್ತಾರೆ. ಗುರುತಿಸಲಾದ ವಾರ್ಷಿಕ ಸಾಮಾನ್ಯ ಸಭೆಗಳ ಸುತ್ತೋಲೆಗಳಲ್ಲಿ ಸ್ಪಷ್ಟವಾಗಿದೆ ಮತ್ತು ಎದುರುದಾರರು ನಿಜವಾದ ಮತ್ತು ಮುಗ್ದ ಸದಸ್ಯರನ್ನು ವಂಚನೆಗೊಳಿಸಿದ್ದು, ಮತ್ತು ಸೊಸೈಟಿಯ ಪದಾದಿಕಾರಿಗಳಾದ ಸಿಇಓ ರವರು ತಿಳಿಸಿರುವ ಕಾರಣಗಳಿಗಾಗಿ ಕೆಲವು ಅನರ್ಹ ಸದಸ್ಯರುಗಳಿಗೆ ಸೈಟುಗಳನ್ನು ಹಂಚಿಕೆ ಮಾಡುವುದು, ಲೇಔಟ್ ಅನ್ನು ಸರ್ಕಾರವು ನಿಗದಿಪಡಿಸಿದ ಮಾರ್ಗದರ್ಶಿ ಮೌಲ್ಯವು ಚದುರಡಿಗೆ ರೂ.1,138/- ನಮೂದಿಸಿರುವುದು ಬಹಳ ಪ್ರಸ್ತುತವಾಗಿದೆ. ಇದು ಮಾರ್ಚ್ 2022ರಲ್ಲಿ ಎದುರುದಾರರು ಸೊಸೈಟಿಯ ಕಾರ್ಯಗತಗೊಳಿಸಿದೆ ಮತ್ತು ಉಲ್ಲೇಖಿಸಲಾದ ನೊಂದಾಯಿತ ಮಾರಾಟ ಪತ್ರ ಪ್ರತಿಗಳ ಪ್ರಕಾರ ಸ್ಪಷ್ಟವಾಗಿದೆ. ಆದ್ದರಿಂದ ಈ ಆಯೋಗವು ಮಾರುಕಟ್ಟೆ ಮೌಲ್ಯ ಪ್ರತಿ ಚದುರಡಿಗೆ ರೂ.3,000/- ಮಾರ್ಗದರ್ಶಕ ಮೌಲ್ಯದಂತೆ ಕನಿಷ್ಥ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂದು ಪ್ರಾರ್ಥಿಸಿರುತ್ತಾರೆ. ದೂರುದಾರರು ಕೆಳ ಮಾಧ್ಯಮದ ವರ್ಗದ ಹಿನ್ನಲೆ ಬಂದಿರುವಂತೆ ಐಟಿಐ ಲಿಮಿಟೆಡ್ ನಿವೃತ್ತ ಹುದ್ದೆ, 69 ವಯಸ್ಸು.  ಆದ್ದರಿಂದ ಉದ್ದೇಶಿಸಿದ ಲೇಔಟ್ ಅನ್ನು ಪಡೆದುಕೊಂಡು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಅವರು ತಮ್ಮ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಬಯಸಿದ್ದಾರೆ. ನಿಶಾನೆ ಪಿ2ರಲ್ಲಿ ಸೊಸೈಟಿಯ ಸುತ್ತೋಲೆ ಪ್ರಕಾರ ನಗರೂರು ಲೇಔಟ್ ಬೆಂಗಳೂರು ಹೃದಯ ಭಾಗದಿಂದ ಕೇವಲ 21 ಕಿ.ಮೀ ದೂರದಲ್ಲಿ ಇದೆ. ಇದು ಈಗ ಸಂಪೂರ್ಣ ಅಬಿವೃದ್ದಿ ಹೊಂದಿದ ಪ್ರದೇಶವಾಗಿದೆ. ಸೊಸೈಟಿಯ ಮೌಲ್ಯವು ಬಿಡುಗಡೆಯಾದ ದಿನಾಂಕದಿಂದ 18 ವರ್ಷಗಳ ನಂತರ ಹಲವಾರು ಬಾರಿ ಹೆಚ್ಚಿಸಿದೆ ಎಂದು ತೀರ್ಮಾನಿಸಬೇಕೆಂದು 2004ರಲ್ಲಿ ಎದುರುದಾರರ ಸುತ್ತೊಲೆ ನಿಶಾನೆ ಪಿ2 ಸಮಾಜದ ಕಡೆಯಿಂದ ಆಗಿರುವ ಲೋಪದೋಷಗಳಿಂದ ದೂರುದಾರರು ಈ ಸಮಯದಲ್ಲಿ ಗಣನೀಯ ಮೌಲ್ಯದ ನಿವೇಶನ ಹೊಂದಲು ದೂರುದಾರರು ಕಾನೂನು ಬದ್ದವಾದ ಹಕ್ಕನ್ನು ಕಸಿದುಕೊಂಡಿವೆ, ಸಂಬಂಧಿತ ಅಭಿವೃದ್ದಿಯನ್ನು ಮತ್ತು ದೂರುದಾರರು ಆದಾಯಕ್ಕೆ ಹೋಲಿಸಿದರೆ ರೂ.4,50,000/- ದೊಡ್ಡ ಮೊತ್ತವೇ ಆಗಿದೆ. ಎದುರುದಾರರು ತನ್ನ ಬದ್ದತೆಗೆ ಅಂಟಿಕೊಂಡಿರದೆ ಮತ್ತು ನಿವೇಶನವನ್ನು ಮಂಜೂರು ಮಾಡುತ್ತದೆ ಎಂಬ ದೃಡವಾದ ಭರವಸೆಯೊಂದಿಗೆ ದೂರುದಾರರು ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಿದ್ದರೂ ದೂರುದಾರರು 11.06.2012ರಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಠೇವಣೆ ಇಟ್ಟಿರುವ ಅಂಶವನ್ನು ಪರಿಗಣಿಸದೇ ಇದೇ ರೀತಿ ನಿವೇಶನಗಳನ್ನು/ಪ್ರಾಜೆಕ್ಟ್‍ಗಳನ್ನು ಹೆಚ್ಚುಗೊಳಿಸಬಹುದು ಅಥವಾ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಅವರ ಕನಸಿನ ಲೇಔಟ್ ಅನ್ನು ಖರೀದಿಸಬಹುದು.  ದೂರುದಾರರ ಪ್ರಾರ್ಥನೆಯೆಂತೆ ನಿವೇಶನ 30ಘಿ40, ನಿವೇಶನದ ಮಂಜೂರು ಮಾಡುವಂತೆ ಕೋರಿರುತ್ತಾರೆ.  ಅಥವಾ ಮುಂಗಡ ಹಣವನ್ನು ಶೇಕಡ 21ರ ಬಡ್ಡಿಯಂತೆ ಪಾವತಿಸಿದ ದಿನಾಂಕದಿಂದ ಮರುಪಾವತಿಸುವಂತೆ ಕೋರಿರುತ್ತಾರೆ.  ಇದನ್ನು ಎದುರುದಾರರು ಈ ಆಯೋಗಕ್ಕೆ ಬಂದು ನುಡಿಸಾಕ್ಷ್ಯ ಮೂಲಕ ಮತ್ತು ದಾಖಲೆಗಳ ಮೂಲಕ ಅಲ್ಲಗಳೆಯದೇ ಇರುವುದರಿಂದ ದೂರುದಾರರು ಪ್ರಾರ್ಥಿಸಿದಂತೆ 30ಘಿ40 ಅಡಿಗಳ ನಿವೇಶನವನ್ನು ಮಂಜೂರು ಮಾಡುವಂತೆ 60 ದಿನಗಳೊಳಗೆ ವಿಫಲವಾದಲ್ಲಿ ರೂ.4,50,000/- ಗಳನ್ನು ಶೇಕಡ 21 ರ ಬಡ್ಡಿಯಂತೆ ದೂರು ದಾಖಲಿಸಿದ ದಿನಾಂಕದಿಂದ ಮರುಪಾವತಿಸತಕ್ಕದ್ದು.  ಮತ್ತು ಮಾನಸಿಕ ದೈಹಿಕ ಮತ್ತು 69 ನೇ ದೂರುದಾರನಿಗೆ ಮಾನಸಿಕ ಆಘಾತಕ್ಕೆ ಆಗಿರುವ ನೋವಿಗೆ ಪರಿಹಾರ ರೂಪವಾಗಿ ರೂ.3,00,000/- ಗಳನ್ನು ನೀಡತಕ್ಕದ್ದು, ಅಲ್ಲದೆ ನ್ಯಾಯಾಲಯದ ಖರ್ಚು ರೂ.10,000/- ಗಳನ್ನು ನೀಡತಕ್ಕದ್ದು. 
ಇದಕ್ಕೆ ಪೂರಕವಾಗಿ ದೂರುದಾರರು ಮೂರು ಸೈಟೇಷನ್‍ಗಳನ್ನು ರಾಷ್ಟ್ರೀಯ ಆಯೋಗವು ನೀಡಿದ ತೀರ್ಪಿನ ಅನ್ವಯ (ಎನ್‍ಸಿಡಿಆರ್‍ಸಿ)

The complainant most respectfully relies on para 14 of the decision of the Hon’ble National Consumer Disputes Redressal Commission rendered in Swarn Talwar and others vs Unitech on this count. A copy of the decision is annexed in support of a claim for the higher rate of interest.  The complainant also relies on the decision of the Hon’ble Karnataka State Consumer Disputes Redressal Commission rendered in the cases of R Nataraj Vs Coffee Board Employees Co-op Housing society and Dr.Poornima Vs Telecom and Govt Employees Housing Society. Copies of these two decisions of Hon’ble State Commissions are annexed in support of the complainant for the award of an interest rate of 21% pa. In the said case the amount was deposited  by the complainant with the said society in the year 2014. In the case on hand, the amount was deposited in the year 2010/2011

OP is left open to complainant to sought relief refund Emaar MGF Ltd., -vs- Amith Puri II (2015) CPJ 568 NC, wherein it was held that after the promised date of delivery of possession if the project is not completed the discretions lies with the complainant whether he wants to take delivery of possession or seeks refund.

ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕವಾಗಿ ಉತ್ತರಿಸಲಾಗಿದೆ. 
 
14. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ತಿಳಿಸಿರುವ ಕಾರಣಕ್ಕಾಗಿ ನಾವು ಈ ಕೆಳಗಿನಂತೆ ಆದೇಶವನ್ನು ಮಾಡುತ್ತೇವೆ.
 
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 35ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರರಿಗೆ ದೂರುದಾರರಿಂದ ಬಾಕಿ ಮೊತ್ತ ಇದ್ದಲ್ಲಿ ಅವುಗಳನ್ನು ಪಾವತಿಸಿದ ನಂತರ 30 ಘಿ 40 ಅಡಿಗಳ ನಿವೇಶನವನ್ನು ಹಂಚಿಕೆ ಮಾಡತಕ್ಕದ್ದು. ಅಥವಾ 
ಎದುರುದಾರರು ನಿವೇಶನವನ್ನು ಹಂಚಿಕೆ ಮಾಡಲು 60 ದಿನಗಳಲ್ಲಿ ವಿಫಲವಾದಲ್ಲಿ ಈಗಾಗಲೇ ದೂರುದಾರರು ನೀಡಿರುವ ರೂ.4,50,000/- ಶೇಕಡ 21ರ ಬಡ್ಡಿಯಂತೆ ದೂರು ದಾಖಲಾದ ದಿನಾಂಕದಿಂದ ಮರುಪಾವತಿಯಾಗುವವರೆಗೆ ಪಾವತಿಸಲು ಆದೇಶಿಸಿದೆ. 
3. ಎದುರುದಾರರು ಮಾನಸಿಕ ಹಿಂಸೆ ಹಾಗೂ ಸೇವಾ ನ್ಯೂನತೆಗಾಗಿ, ಅನುಚಿತ ವ್ಯಾಪಾರ ಪದ್ದತಿಯಿಂದ ಮೋಸಹೋದ 69 ವಯಸ್ಸಿನ ದೂರುದಾರನಿಗೆ ಮಾನಸಿಕ ಹಿಂಸೆ ಮಾಡಿದ್ದಕ್ಕಾಗಿ ರೂ.3,00,000/- ಗಳನ್ನು ಹಾಗೂ ನ್ಯಾಯಾಲಯದ ಖರ್ಚು ರೂ.10,000/- ಗಳನ್ನು ಹಾಗೂ ಮೇಲೆ ಕಾಣಿಸಿದ ಹಣವನ್ನು ಈ ಆದೇಶದ ದಿನಾಂಕದಿಂದ 60 ದಿನಗಳೊಳಗೆ ಪಾವತಿಸತಕ್ಕದ್ದು, ತಪ್ಪಿದಲ್ಲಿ ದೂರು ಸಲ್ಲಿಸಿದ ದಿನಾಂಕದಿಂದ ರೂ.4,50,000/- ಗಳಿಗೆ  ಮರುಪಾವತಿಯಾಗುವವರೆಗೆ ಶೇಕಡ 22 ರಂತೆ ವಾರ್ಷಿಕ ಬಡ್ಡಿ ಸಹಿತ ಪಾವತಿಸತಕ್ಕದ್ದು.
4. ದೂರುದಾರರ ದೂರಿನ ಹೆಚ್ಚುವರಿ ಪ್ರತಿಗಳನ್ನು ಹಿಂದಿರುಗಿಸತಕ್ಕದ್ದು.
5. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
 
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 29ನೇ ಡಿಸೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
 
(ರೇಣುಕಾದೇವಿ ದೇಶಪಾಂಡೆ)
ಮಹಿಳಾ ಸದಸ್ಯರು
(ಎಂ.ಶೋಭಾ)
ಅಧ್ಯಕ್ಷರು
 
ಅನುಬಂಧ
 
  ಫಿರ್ಯಾದುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ; - 

1.

Ex.P.1

Copy of membership receipt No.3414 dated 27.06.1981

2.

Ex.P.2

Copy of the circular No.ITI EHCS/04/2004-05 dated 28.11.2004

3.

Ex.P.3

Copy of the receipt No.7622 dated 11.06.2012

4.

Ex.P.4

Copy of the receipt No.7623 dated 11.06.2012

5.

Ex.P.5

Copy of the circular No.ITIEHCS/17/2012-13 dated 16.08.2012

6.

Ex.P.6

Copy of the circular No.ITIEHCS/SU/02/2019-20 dated 17.04.2019

7.

Ex P.7

Extract of the annual report for the year 2013-14

8

Ex.P.8

Extract of the annual report for the year 2020-21

9.

Ex.P.9

Copy of the legal notice No.LN/ITIHBS/1 dated 10.08.2022

10.

Ex.P.10

Copy of the circular No.ITIEHCS/10/2010-11 dated 05.04.2011

ಎದುರುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ; - ಇಲ್ಲ -

 
(ರೇಣುಕಾದೇವಿ ದೇಶಪಾಂಡೆ)
ಮಹಿಳಾ ಸದಸ್ಯರು
(ಎಂ.ಶೋಭಾ)
ಅಧ್ಯಕ್ಷರು
 
 
 
[HON'BLE MRS. M. SHOBHA]
PRESIDENT
 
 
[HON'BLE MS. Renukadevi Deshpande]
MEMBER
 

Consumer Court Lawyer

Best Law Firm for all your Consumer Court related cases.

Bhanu Pratap

Featured Recomended
Highly recommended!
5.0 (615)

Bhanu Pratap

Featured Recomended
Highly recommended!

Experties

Consumer Court | Cheque Bounce | Civil Cases | Criminal Cases | Matrimonial Disputes

Phone Number

7982270319

Dedicated team of best lawyers for all your legal queries. Our lawyers can help you for you Consumer Court related cases at very affordable fee.