Karnataka

Bangalore Urban

CC/405/2021

DHARANIPATHI - Complainant(s)

Versus

HOUSE JOY SARVALOKHA SERVICE ON CALL PVT.LTD - Opp.Party(s)

ANUPAMA M V

19 Sep 2022

ORDER

DISTRICT CONSUMER DISPUTES REDRESSAL COMMISSION,
8TH FLOOR, B.W.S.S.B BUILDING, K.G.ROAD,BANGALORE-09
 
Complaint Case No. CC/405/2021
( Date of Filing : 09 Aug 2021 )
 
1. DHARANIPATHI
AGED ABOUT 40 YEARS, S/O. P.V. DAMODHARAN, NO.300, MOUNT CASTLE, DOLLAR TOWN, SINGENA AGRAHARA ROAD, ELECTRONIC CITY PHASE - 2, BANGALORE 560100
BENGALURU URBAN
KARNATAKA
...........Complainant(s)
Versus
1. HOUSE JOY SARVALOKHA SERVICE ON CALL PVT.LTD
NO.L-371, 5TH MAIN, 6TH SECTOR, HSR LAYOUT, BANGALORE - 560102 REPRESENTED BY ITS CEO, SANCHIT GAURAV
BENGALURU URBAN
KARNATAKA
............Opp.Party(s)
 
BEFORE: 
 HON'BLE MR. K.S. BILAGI PRESIDENT
 HON'BLE MS. Renukadevi Deshpande MEMBER
 HON'BLE MR. H. Janardhan MEMBER
 
PRESENT:
 
Dated : 19 Sep 2022
Final Order / Judgement
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀ ಕೆ.ಎಸ್.ಬೀಳಗಿ,  ಅಧ್ಯಕ್ಷರು,
         2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
         3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
 
ಆದೇಶ 
 
ಸಿ.ಸಿ.ಸಂಖ್ಯೆ:405/2021
ಆದೇಶ ದಿನಾಂಕ 19ನೇ ಸೆಪ್ಟೆಂಬರ್ 2022
ಶ್ರೀ.ಧಾರಿಣಿಪತಿ,
ಬಿನ್. ಪಿ.ವಿ.ದಾಮೋದರನ್,
40 ವರ್ಷ,
ನಂ300, ಮೌಂಟ್ ಕ್ಯಾಸ್ಟಲ್, ಡಾಲರ್ ಟೌನ್,
ಸಿಂಗೆನ್ ಅಗ್ರಹಾರ ರಸ್ತೆ,
ಎಲೆಕ್ಟ್ರಾನಿಕ್ ಸಿಟಿ ಪೇಸ್ 2,
ಬೆಂಗಳೂರು 560 100.
 
(ಪ್ರತಿನಿಧಿಸುವವರು ಶ್ರೀ ಎಂ.ವಿ.ಅನುಪಮ, ವಕೀಲರು)                                   
 
 
 
 
-ಪಿರ್ಯಾದುದಾರರು
       ವಿರುದ್ಧ
ಹೌಸ್ ಜಾಯ್,
ಸರ್ವಲೋಕ ಸರ್ವೀಸ್ ಆನ್ ಕಾಲ್ ಪ್ರೈವೆಟ್ ಲಿಮಿಟೆಡ್,
ಎಲ್-371, 5ನೇ ಮೇನ್, 6ನೇ ಸೆಕ್ಟಾರ್, ಹೆಚ್.ಎಸ್.ಆರ್ ಲೇಔಟ್,
ಬೆಂಗಳೂರು 560 102.
ಪ್ರತಿನಿಧಿಸುವವರು ಸಿಇಓ ಶ್ರೀ ಸಂಚಿತ್ ಗೌರವ್.
(ಇxಠಿಚಿಡಿಣe)
 
… ಎದುರುದಾರರು
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ 
ಮಹಿಳಾ ಸದಸ್ಯರು,
 
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಕಲಂ 35 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, ಈ ಕೆಳಗಿನಂತೆ ಆದೇಶಿಸಲು ಕೋರಿರುತ್ತಾರೆ. 
ಅ) ರೂ.3,00,000/- ರೂಪಾಯಿಗಳನ್ನು ಇಂಟಿಯರಿಯರ್ ಅಗ್ರಿಮೆಂಟ್ ದಿನಾಂಕದಿಂದ 06.03.2021ರಲ್ಲಿ ಅವದಿಯ ಮರುಪಾವತಿಸುವ ದಿನಾಂಕದವರೆಗೆ 24% ರಷ್ಟು ಬಡ್ಡಿಯನ್ನು ಪಾವತಿಸಲು ಎದುರುದಾರರಿಗೆ ನಿರ್ದೇಶಿಬೇಕೆಂದು.
ಆ) ರೂ.10,000/- ಗಳನ್ನು ಸೇವೆಯ ನ್ಯೂನತೆಯ ಪರಿಹಾರವಾಗಿ ಮತ್ತು ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವರಿಂದ ದೂರುದಾರರ ಆದಾಯ ನಷ್ಟಕ್ಕೆ ನಿರ್ಮಾಣ ಕಾರ್ಯವನ್ನು ಪ್ರಾರಂಬಿಸುವ ದಿನಾಂಕದವರೆಗೆ ಮತ್ತು ದೂರುದಾರರು ಮತ್ತು ಕುಟುಂಬದ ಸದಸ್ಯರಿಗೆ ಮಾನಸಿಕ ಮತ್ತು ದೈಹಿಕ ನಷ್ಟ ಪರಿಹಾರ ರೂಪವಾಗಿ ಮತ್ತು ಇತರೆ ಪರಿಹಾರಗಳನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶಿಸಿ ಆದೇಶವನ್ನು ನೀಡುವಂತೆ ಈ ಆಯೋಗಕ್ಕೆ ಕೋರಿರುತ್ತಾರೆ.
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರು ಆನ್‍ಲೈನ್ ಮೂಲಕ ತನ್ನ ಮನೆಯ ಸುಂದರ ನಿರ್ಮಾಣಕ್ಕಾಗಿ ಎದುರುದಾರರನ್ನು ಸಂಪರ್ಕಿಸಿದಾಗ, ಎದುರುದಾರರು ತಮಗೆ ಅನುಕೂಲಕರವಾದ ಷರತ್ತುಗಳೊಂದಿಗೆ ಒಪ್ಪಂದವನ್ನು ದಿನಾಂಕ 06.06.2020 ದೂರುದಾರರಿಗೆ ಸಾಪ್ಟ್ ಕಾಫಿಯನ್ನು ಕಳುಹಿಸಿದ್ದಾರೆ.  ದೂರುದಾರರು ಹೇಳಿರುವ ಒಪ್ಪಂದದ ಪ್ರಕಾರ ಒಪ್ಪಿಸಲಾದ ಕೆಲಸವನ್ನು ಪೂರ್ಣಗೊಳಿಸುವ ಪರಿಗಣನೆಯನ್ನು ಪರಸ್ಪರ ಒಪ್ಪಿಗೆ ಮೂಲಕ ಒಟ್ಟು ಮೊತ್ತದ ರೂ.19,75,930/- ಶೇಕಡ 15% ರಷ್ಟನ್ನು ದೂರುದಾರರು ಒಪ್ಪಿ ರೂ.3,00,000/- ಗಳನ್ನು, ದಿನಾಂಕ 05.06.2020 ರಂದು ರೂ.2,00,000/- ಡಿಡಿ ಮೂಲಕ  ಮತ್ತು ರೂ.1,00,000/- 06.062020 ರಿಂದ ಆನ್‍ಲೈನ್ ವರ್ಗಾವಣೆಯ ಮೂಲಕ ಮುಂಗಡ ಹಣ ಪಾವತಿಸಿದ ದಿನಾಂಕದಿಂದ 15 ದಿನದೊಳಗೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದೆಂದು ಎದುರುದಾರರು ದೂರುದಾರರಿಗೆ ಭರವಸೆ ನೀಡಿದ್ದಾರೆ. ಸೆಪ್ಟೆಂಬರ್ 24.09.2020 ಒಳಗೆ (100 ದಿನಗಳಲ್ಲಿ) ನಿಗದಿತ ಸಮಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿ ಐದು ತಿಂಗಳು ಪೂರ್ಣಗೊಂಡ ನಂತರವೂ ನಿರ್ಮಾಣಕ್ಕೆ ಯಾವುದೇ ಅಡಿಪಾಯ ಹಾಕಲಿಲ್ಲ ಇದರಿಂದ ಮಾನಸಿಕವಾಗಿ ನೊಂದು ಕೊನೆಗೆ ದಿನಾಂಕ 11.02.2021 ರಂದು ಎದುರುದಾರರಿಗೆ ಕಾನೂನು ನೋಟೀಸ್ ನೀಡಿದ್ದು, ಎದುರುದಾರರು ನೋಟೀಸ್ ಸ್ವೀಕರಿಸಿ ಜವಾಬು ಕೊಡದೆ ಸೇವೆಯಲ್ಲಿನ ಕೊರತೆಯಿಂದ ವೃತ್ತಿಪರ ಸೇವೆಯನ್ನು ನಿರ್ಲಕ್ಷ್ಯದ ಕೃತ್ಯಗಳಿಂದಾಗಿ ದೂರುದಾರರು ಆರ್ಥಿಕ ನಷ್ಟವನ್ನು ಮತ್ತು ಮಾನಸಿಕ ಸಂಕಷ್ಟ ಮತ್ತು ಒತ್ತಡಕ್ಕೆ ಒಳಗಾಗಿ ಅನಿವಾರ್ಯವಾಗಿ ತನ್ನ ತಪ್ಪಲ್ಲದೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ವಿಳಂಬ ಮಾಡಿದ್ದಾರೆಂದು ಆಪಾದಿಸಿ ಈ ಆಯೋಗಕ್ಕೆ ದೂರನ್ನು ಸಲ್ಲಿಸಿ ನ್ಯಾಯ ಕೊಡಬೇಕೆಂದು ಕೋರಿರುತ್ತಾರೆ.
3. ಎದುರುದಾರರಿಗೆ ನೋಟೀಸು ಜಾರಿಯಾದರೂ ಎದುರುದಾರರು ಆಯೋಗದ ಮುಂದೆ ಹಾಜರಾಗಲಿಲ್ಲ. ಆದ್ದರಿಂದ ಅವರನ್ನು ಏಕಪಕ್ಷೀಯವಾಗಿ ಇಡಲಾಯಿತು.
4. ದೂರುದಾರರು ಹಾಜರಾಗಿ ಪ್ರಮಾಣ ಪತ್ರದ ಮೂಲಕ ಸಾಕ್ಷ್ಯವನ್ನು ನೀಡಿ ನಿಶಾನೆ ಪಿ1 ರಿಂದ ಪಿ7 ಎಂದು ಗುರುತಿಸಿ ಸೆಕ್ಷನ್ 65(ಬಿ) ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ. ಸಲ್ಲಿಸಿರುವ ಸಾಕ್ಷಧಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ? 
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
1ನೇ ಅಂಶ - ಸಕಾರಾತ್ಮಕವಾಗಿ
2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
 
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರರು ತನ್ನ ದೂರಿನಲ್ಲಿ ಕೊಟ್ಟ ಸಂಗತಿಗಳನ್ನು ನಾವೂ ಈಗಾಗಲೇ ಸುಧೀರ್ಘವಾಗಿ ಪ್ಯಾರಾ 2ರಲ್ಲಿ ವಿವರಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಆಯೋಗದಿಂದ ಕಳಿಸಿದ ನೋಟೀಸು ಜಾರಿಯಾಗಿದ್ದರೂ ಕೂಡಾ ಈ ಆಯೋಗದ ಮುಂದೆ ಹಾಜರಾಗದೆ ಗೈರು ಹಾಜರಾಗಿರುತ್ತಾರೆ.  ಈ ಕಾರಣಕ್ಕಾಗಿ ಅವರನ್ನು ಏಕಪಕ್ಷೀಯ ಎಂದು ನಿರ್ಣಯಿಸಿ, ದೂರುದಾರರು ತನ್ನ ಅಹವಾಲನ್ನು ಸಾಬೀತುಪಡಿಸುವ ಕುರಿತು ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತಾರೆ ಮತ್ತು ಕುಲಂಕುಷವಾಗಿ ಪರಿಶೀಲನೆ ಮಾಡಿದ್ದು, ಅವುಗಳನ್ನು ಪುನ: ವಿಮರ್ಶಿಸುವ ಪ್ರಮೇಯ ಉದ್ಬವವಾಗುವುದಿಲ್ಲ ದೂರುದಾರರು ತಿಳಿಸಿರುವ ಅಂಶಗಳನ್ನು ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿ ಅಲ್ಲಗಳೆಯದೆ ಇರುವುದರಿಂದ ಆತ ದೂರಿನಲ್ಲಿ ವಿವರಿಸಿದ ಸಂಗತಿಗಳು ನಿಜವೆಂದು ಅಭಿಪ್ರಾಯಕ್ಕೆ ಬರಬಹುದು ಎಂದು ಮಾನ್ಯ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ 2018(1) ಸಿಪಿಆರ್ 314(ಎನ್‍ಸಿ) In thie case of M/s Singla Builders & Promoters Ltd., -vs- Aman Kumar Garg  ಪ್ರಕರಣದಲ್ಲಿ ಉಲ್ಲೇಖಿಸಿರುತ್ತಾರೆ.
8. ದೂರುದಾರನು ನಿಶಾನೆ 3ರಂತೆ ಒಟ್ಟು 3,00,000/- ಹಣ ಪಾವತಿ ಮಾಡಿರುವಂತೆ ಸಿದ್ದಗೊಂಡಿರುತ್ತದೆ. ಅಲ್ಲದೆ ದೂರುದಾರರು ಪ್ರಾರಂಭಿಕ ಹಂತದಲ್ಲಿ ಎದುರುದಾರರ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮೇಲ್ ಮೂಲಕ ಸಂದೇಶ ರವಾನಿಸಿದ್ದು, ನಿಶಾನೆ 2 ಇದರಲ್ಲಿ ದೂರುದಾರರು ಸಂದೇಶದ ಸಾರಾಂಶ ಈ ರೀತಿ ಇರುತ್ತದೆ.
.....

30.07.2020-11.14 pm. No positive move from house joy on my construction for 55 days. Please pay my advance back. I afraid my constructions would be success with their kind of poor show by house joy representative. Show in part 55 days of my experience.

Please take steps to refund my advance amount of 3,00,000/- ASAP to my account. We cannot wait any further by wasting time and paying interest to bank/loan without any progress in construction. So we are taking steps to start construction on our own with immediate effect.

9. ದೂರುದಾರರು ಈಮೇಲ್ ಮೂಲಕ ಮತ್ತು ಕಾನೂನು ನೋಟೀಸ್ ಜಾರಿ ಮಾಡಿದ್ದರೂ ಸಹ ನಿಶಾನೆ 2ರಂತೆ ಮುಂಗಡ ಹಣ ರೂ.3,00,000/- ಗಳನ್ನು ಮರುಪಾವತಿಸುವಂತೆ ಕೋರಿದ್ದರೂ, ಆದರೆ ದೂರುದಾರರಿಗೆ ಪಾವತಿಸದೆ ನಿಶಾನೆ 4 ಇದರಲ್ಲಿ 3ನೇ ಷರತ್ತು ಮುಂಗಡ ಹಣವನ್ನು ಯಾವ ಕಾರಣಕ್ಕೂ ಹಿಂದಿರುಗಿಸಲು ಅವಕಾಶಗಳು ಇಲ್ಲ ಎನ್ನುವುದು ಸತ್ಯವಾದರು ಆದರೆ ನಿಶಾನೆ 4ರಲ್ಲಿ ಉಭಯತ್ರರು ಮಾಡಿಕೊಂಡ ಕಾನೂನು ಒಪ್ಪಂದವನ್ನು ಸಹಿ ಹಾಕಬೇಕು ಆದರೆ ಎದುರುದಾರರು ಸಹಿ ಮಾಡಿಲ್ಲ ದೂರುದಾರರಷ್ಟೆ ದಾಖಲೆಗಳ ಮೇಲೆ ಸಹಿ ಮಾಡಿದ್ದು, ಈ ದಾಖಲೆ ಕಾನೂನು ಚೌಕಟ್ಟಿನ್ನಲ್ಲಿ ಊರ್ಜಿತವಾಗುವುದಿಲ್ಲ. ಆದಕಾರಣ ಎದುರುದಾರರು ಈ ಹೇಳಿಕೆಯನ್ನು ಅಲ್ಲಗಳೆಯದ ಅಂಶಗಳು ಕಂಡುಬಂದಿಲ್ಲ. ಆದಕಾರಣ ಎದುರುದಾರರು ರೂ.3,00,000/- ಗಳನ್ನು ದೂರುದಾರರಿಗೆ ಪಾವತಿಸಬೇಕಾಗುತ್ತದೆ. ದೂರುದಾರನು ನಿಶಾನೆ 2 ಮತ್ತು ನಿಶಾನೆ 5, 6 ನೋಟೀಸ್  ಮತ್ತು ದೃಢೀಕರಣದಂತೆ ಪತ್ರ ವ್ಯವಹಾರ ಮಾಡಿದರೂ ಕೂಡ ಎದುರುದಾರರನು ಈ ಮುಂಗಡ ಹಣವನ್ನು ಪಾವತಿಸಿರುವುದಿಲ್ಲ. ಆದಕಾರಣ ದೂರುದಾರನಿಗೆ ರೂ.3,00,000/- ಪರಿಹಾರ ಧನದೊಂದಿಗೆ ಶೇಕಡ 9ರ ಬಡ್ಡಿಯಂತೆ ಮತ್ತು ನ್ಯಾಯಾಲಯ ಖರ್ಚು ರೂ.3,000/- ಗಳನ್ನು ಕೊಡಬೇಕಾಗುತ್ತದೆ ಎಂದು ತೀರ್ಮಾನಿಸಿದ್ದು,  ಸಮಂಜಸವಾಗಿದೆ ಎಂದು ಭಾವಿಸಿ ಈ ದೂರಿಗೆ ಎದುರುದಾರರು ಯಾವುದೇ ಪುರಾವೆ ಮತ್ತು ಸಾಕ್ಷ್ಯವನ್ನು ವ್ಯಕ್ತಪಡಿಸದೇ ಇರುವುದರಿಂದ ದೂರುದಾರರು ಹೇಳಿದ ಸಂಗತಿಗಳು ಸತ್ಯವೆಂದು ಅಭಿಪ್ರಾಯಕ್ಕೆ ಬಂದಿದ್ದು, ಎದುರುದಾರರು ರೂ.3,00,000/- ಗಳನ್ನು ಕೊಡುವಂತೆ ನಿರ್ದೇಶಿಸಿ ಪರಿಹಾರ ರೂಪವಾಗಿ ಶೇಕಡ 9ರ ಬಡ್ಡಿಯಂತೆ ಮುಂಗಡ ಪಾವತಿಸಿದ ದಿನಾಂಕದಿಂದ ಮರುಪಾವತಿಯಾಗುವವರೆಗೆ ಪಾವತಿಸತಕ್ಕದ್ದು ಮತ್ತು ನ್ಯಾಯಾಲಯದ ಖರ್ಚು ರೂ.3,000/- ಕೊಡುವಂತೆ ನಿರ್ದೇಶಿಸಿ ಅದರಂತೆ 1ನೇ ಅಂಶವನ್ನು ಭಾಗಶ: ಸಕಾರಾತ್ಮಕವಾಗಿ ಉತ್ತರಿಸಲಾಗಿದೆ. 
10. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ಕೊಟ್ಟಿರುವ ನಿರ್ಣಯಕ್ಕೆ ಅನುಗುಣವಾಗಿ ಫಲಿತಾಂಶದಲ್ಲಿ ನಾವು ಈ ಕೆಳಗೆಕಂಡಂತೆ ಆದೇಶವನ್ನು ಮಾಡಿದ್ದೇವೆ.
 
 
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 35ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರನು ದೂರುದಾರರಿಗೆ ರೂ.3,00,000/- ಗಳನ್ನು ನೀಡಲು ನಿರ್ದೇಶಿಸಲಾಗಿದೆ. ಮತ್ತು ಪರಿಹಾರ ರೂಪದಲ್ಲಿ ಶೇಕಡ 6ರ ಬಡ್ಡಿಯಂತೆ ಮುಂಗಡ ಹಣವನ್ನು ಪಾವತಿಸಿದ ದಿನಾಂಕದಿಂದ ಮರುಪಾವತಿಯಾಗುವವರೆಗೆ ಪಾವತಿಸತಕ್ಕದ್ದು. ನ್ಯಾಯಾಲಯದ ಖರ್ಚು ರೂ.3,000/- ಗಳನ್ನು ಹಾಗೂ ಮೇಲೆ ಕಾಣಿಸಿದ ಹಣವನ್ನು ಈ ಆದೇಶದ ದಿನಾಂಕದಿಂದ 60 ದಿನಗಳೊಳಗೆ ಪಾವತಿಸತಕ್ಕದ್ದು, ತಪ್ಪಿದಲ್ಲಿ ದೂರು ಸಲ್ಲಿಸಿದ ದಿನಾಂಕದಿಂದ ರೂ.3,00,000/- ಗಳಿಗೆ  ಮರುಪಾವತಿಯಾಗುವವರೆಗೆ ಶೇಕಡ 9 ರಂತೆ ವಾರ್ಷಿಕ ಬಡ್ಡಿ ಸಹಿತ ಪಾವತಿಸತಕ್ಕದ್ದು.
3. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
 
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 19ನೇ ಸೆಪ್ಟೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
 
 
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಕೆ.ಎಸ್.ಬೀಳಗಿ)ಅಧ್ಯಕ್ಷರು
 

Documents produced by the Complainant-P.W.1 are as follows:

1.

Ex.P1 : Certificate u/s 65(B) of Evidence Act

2.

Ex.P2: Bunch of print outs of emails

3.

Ex.P3: Copy of statement of account

4.

Ex.P4: Copy of online agreement

5.

Ex.P5: Copy of the legal notice dated 10.02.2021

6.

Ex.P6: Postal receipt

7.

Ex.P7: Postal track

Documents produced by the representative of opposite party :  NIL

(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಕೆ.ಎಸ್.ಬೀಳಗಿ)ಅಧ್ಯಕ್ಷರು
 

HAV*

 
 
 
 
 
 
 
 
[HON'BLE MR. K.S. BILAGI]
PRESIDENT
 
 
[HON'BLE MS. Renukadevi Deshpande]
MEMBER
 
 
[HON'BLE MR. H. Janardhan]
MEMBER
 

Consumer Court Lawyer

Best Law Firm for all your Consumer Court related cases.

Bhanu Pratap

Featured Recomended
Highly recommended!
5.0 (615)

Bhanu Pratap

Featured Recomended
Highly recommended!

Experties

Consumer Court | Cheque Bounce | Civil Cases | Criminal Cases | Matrimonial Disputes

Phone Number

7982270319

Dedicated team of best lawyers for all your legal queries. Our lawyers can help you for you Consumer Court related cases at very affordable fee.