ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀ ಕೆ.ಎಸ್.ಬೀಳಗಿ, ಅಧ್ಯಕ್ಷರು,
2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
ಆದೇಶ
ಸಿ.ಸಿ.ಸಂಖ್ಯೆ:341/2018
ಆದೇಶ ದಿನಾಂಕ 22ನೇ ಸೆಪ್ಟೆಂಬರ್ 2022
ಶ್ರೀ ಪೂಜಾರಿ ಭಾಸ್ಕರ್,
ಬಿನ್.ಪುಜಾರಿ ಕೃಷ್ಣಯ್ಯ,
57 ವರ್ಷ,
ಟೈಪ್ ಬಿ, 205, ಸೌತ್ ಬ್ಲಾಕ್,
ದೋನಿಮಲೈ ಟೌನ್‍ಶಿಪ್,
ಸಂದೂರ್,
ಬಳ್ಳಾರಿ 583 118.
-ಪಿರ್ಯಾದುದಾರರು
ವಿರುದ್ಧ
ಮೆ: ಡ್ರೀಮ್ಸ್ ಇನ್‍ಫ್ರಾ ಇಂಡಿಯಾ ಪ್ರೈವೆಟ್ ಲಿಮಿಟೆಡ್,
ಪ್ರತಿನಿಧಿಸುವವರು ಮ್ಯಾನೇಜಿಂಗ್ ಡೈರೆಕ್ಟರ್, ದಿಶಾ ಚೌದ್ರಿ, 40 ವರ್ಷ,
ನಮ>577/ಬಿ, 2ನೇ ಹಂತ, ಔಟರ್ ರಿಂಗ್ ರಸ್ತೆ, ಟೀಚರ್ಸ್ ಕಾಲೊನಿ,
ಕೋರಮಂಗಲ, ಸಿಲ್ಕ್ ಬೋರ್ಡ್ ಹತ್ತಿರ, ಬೆಂಗಳೂರು 560 034.
(ಹಾಜರಾಗಿರುವುದಿಲ್ಲ)
… ಎದುರುದಾರರು
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ
ಮಹಿಳಾ ಸದಸ್ಯರು,
ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 1986ರ ಕಲಂ 12 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು,
ಅ) ದೂರುದಾರರು ಎದುರುದಾರರಿಂದ ನಿವೇಶನದ ಮುಂಗಡ ಮೊತ್ತವನ್ನು ರೂ.1,00,000/- ಮುಂಗಡ ಹಣ ಪಾವತಿಸಿದ ದಿನಾಂಕದಿಂದ ಪರಿಹಾರ ಸಿಗುವವರೆಗೆ 18% ಬಡ್ಡಿಯೊಂದಿಗೆ ಪರಿಹಾರ ನೀಡುವಂತೆ
ಆ) ರೂ.20,000/- ಗಳನ್ನು ಎದುರುದಾರರಿಂದ ಉಂಟಾದ ಮಾನಸಿಕ ಹಿಂಸೆ ಮತ್ತು ಸೇವಾ ನ್ಯೂನತೆಗಾಗಿ ಪರಿಹಾರವನ್ನು ಮತ್ತು ದೂರಿನ ವ್ಯಾಜ್ಯದ ಖರ್ಚುನ್ನು ಭರಿಸುವಂತೆ
ಇ) ಇತರೆ ಯಾವುದಾದರೂ ಪರಿಹಾರ ಕೊಡುವಂತೆ ನಿರ್ದೇಶಿಸಿ ಆದೇಶವನ್ನು ನೀಡುವಂತೆ ಈ ಆಯೋಗಕ್ಕೆ ಕೋರಿರುತ್ತಾರೆ.
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ಎದುರುದಾರರು ಕಂಪನಿಗಳ ಕಾಯ್ದೆ 1956ರ ನಿಬಂಧನೆಗಳ ಅಡಿಯಲ್ಲಿ ನೊಂದಾಯಿಸಲಾದ ಕಂಪನಿಯಾಗಿದೆ. ದೂರುದಾರರು ಮಾರ್ಚ್ 2015ರಲ್ಲಿ ಮುಂಬರುವ ಪ್ರಾಜೆಕ್ಟ್ ನಲ್ಲಿ ಡ್ರೀಮ್ಸ್ ಸಾಕಾರ್ ಎಂಬ ಹೆಸರಿನಲ್ಲಿ ನಿವೇಶನದ ಪ್ಲಾಟ್ ಅನ್ನು ಖರೀದಿಸಲು ಎದುರುದಾರರನ್ನು ಸಂಪರ್ಕಿಸಿ ರೂ.1,00,000/- ಮುಂಗಡ ಹಣವನ್ನು ದಿನಾಂಕ 21.03.2015ರಲ್ಲಿ ಎಸ್ ಬಿ ಐ ಮೂಲಕ ಹಣವನ್ನು ಪಾವತಿಸಿದ್ದು, ಮತ್ತು 21 ತಿಂಗಳೊಳಗೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದೆಂದು ಭರವಸೆ ನೀಡಿದರೂ ಒಂದು ವರ್ಷ ನಂತರವೂ ಯೋಜನೆಯನ್ನು ಪ್ರಾರಂಭಿಸಿರುವುದಿಲ್ಲ ಎಂದು ಮನನೊಂದು ದಿನಾಂಕ 26.06.2016 ರಲ್ಲಿ ಪ್ಲಾಟ್ ರದ್ದು ಮಾಡಲು ಕೋರಿ ಪತ್ರವನ್ನು ಸಲ್ಲಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಎದುರುದಾರರು ರದ್ದು ಮಾಡಲು ಒಪ್ಪಿ ದಿನಾಂಕ 26.06.2016ರಂದು ರೂ.1,00,000/- ಗಳನ್ನು ಮರುಪಾವತಿಸಲು ಒಪ್ಪಿಕೊಂಡು ಮರುಪಾವತಿಸಲು ವಿಫಲರಾದಾಗ ಮನನೊಂದು (ದಿನಾಂಕ 16.11.2016ರಂದು ಡಿಮ್ಯಾಡ್ ಡ್ರಾಫ್ಟ್ ಅನ್ನು ಕೂಡ ಒಪ್ಪಿದ್ದು, ಒಟ್ಟು ಖರೀದಿಯ ಮೊತ್ತ ರೂ.34,00,000/- ನಮೂದಿಸಿದ್ದು) ದಿನಾಂಕ 12.10.2017ರಂದು ಕಾನೂನು ನೋಟೀಸ್ ಜಾರಿ ಮಾಡಿದ್ದು, ಮುಂಗಡ ಹಣವನ್ನು ಮರುಪಾವತಿಸುವಂತೆ ಇದಕ್ಕೆ ಉದ್ದೇಶ ಪೂರಕವಾಗಿ ಯಾವುದೇ ಜವಾಬು ಕೊಡದೆ ಸೇವಾ ನ್ಯೂನತೆ ಎಸಗಿದ್ದಾರೆಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರವನ್ನು ಕೋರಿರುತ್ತಾರೆ.
3. ದೂರುದಾರರು ದೂರನ್ನು ದಾಖಲಿಸಿದ ಬಳಿಕ ಎದುರುದಾರರಿಗೆ ನೋಟೀಸ್ ನೀಡಲಾಗಿ ಎದುರುದಾರರು ಹಾಜರಾಗದೇ, ಕನ್ನಡ ದಿನಪತ್ರಿಕೆಯ ಮೂಲಕ ನೋಟೀಸ್ ಜಾರಿ ಮಾಡಿದ್ದು, ಆಯೋಗಕ್ಕೆ ಹಾಜರಾಗದೇ ಇದ್ದ ಕಾರಣ ಅವರನ್ನು ಏಕಪಕ್ಷೀಯವಾಗಿ ಇಡಲಾಗಿದೆ.
4. ದೂರುದಾರರು ದೂರನ್ನು ಸಾಬೀತುಪಡಿಸಲು ನುಡಿ ಸಾಕ್ಷ್ಯವನ್ನು ಸಲ್ಲಿಸಿರುವುದಿಲ್ಲ ಆದರೆ ದಾಖಲೆಗಳನ್ನು ಹಾಜರು ಪಡಿಸಿರುತ್ತಾರೆ. ದಾಖಲೆ ಪಿ1 ರಿಂದ 6 ಎಂದು ಗುರುತಿಸಲಾಗಿದೆ. ಸಾಕ್ಷ್ಯಾಧಾರಗಳನ್ನು ಕುಲಂಕುಷವಾಗಿ ಪರಿಶೀಲಿಸಿ ತೀರ್ಪಿಗಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ಜಿಲ್ಲಾ ಗ್ರಾಹಕರ ವೇದಿಕೆಯು ಹಣದ ವ್ಯಾಪ್ತಿಯನ್ನು ಹೊಂದಿದೆ ಎಂಬುದನ್ನು ದೂರು ನೀಡಿದ ದಿನಾಂಕದಿಂದ 21.03.2018 ಮತ್ತು ಹೊಸ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರಡಿಯಲ್ಲಿ ದೂರನ್ನು ಮುಂದುವರಿಸಲಾಗುವುದಿಲ್ಲವೇ?
(2) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ?
(3) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
• 1ನೇ ಅಂಶ - ನಕಾರಾತ್ಮಕವಾಗಿ
• 2ನೇ ಅಂಶ - ಅರ್ಹತೆಯ ಮೇಲೆ ಪರಿಗಣಿಸಲಾಗುವುದಿಲ್ಲ
• 3ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರರು ನಿವೇಶನ ಖರೀದಿಸಲು ಎದುರುದಾರರಿಗೆ ಮುಂಗಡ ಹಣ 1,00,000/- ಗಳನ್ನು ಪಾವತಿಸಿದ್ದು, ಒಟ್ಟು ಮೊತ್ತದ ಖರೀದಿಯ ಹಣ ರೂ.34,00,000/-, ಎದುರುದಾರರು ರಶೀದಿಯನ್ನು ನೀಡಿದ್ದು, ಮತ್ತು ಕನ್‍ಫರ್‍ಮೇಷನ್ ಲೆಟರ್ ಅನ್ನು ದೂರುದಾರರಿಗೆ ಕೊಟ್ಟಿದ್ದು, ದಿನಾಂಕ 21.03.2015ರಲ್ಲಿ ಎಸ್ ಬಿ ಐ ಮೂಲಕ ಪಾವತಿಸಿದ್ದು, ಪುಟ 12 ಆದರೆ ಎದುರುದಾರರು 21 ತಿಂಗಳಲ್ಲಿ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸುವುದಾಗಿ ತಿಳಿಸಿ ಅವಧಿ ಮುಗಿದು 1 ವರ್ಷ ತದನಂತರವು ಪೂರ್ಣಗೊಳಿಸದೆ ಇದ್ದ ಕಾರಣ ಮನನೊಂದು 26.06.2016ರಂದು ಪ್ಲಾಟ್ ರದ್ದತಿಗಾಗಿ ಪತ್ರವನ್ನು ಸಲ್ಲಿಸಿದ್ದು, ದಾಖಲೆ 1 ಒಟ್ಟು ಪ್ಲಾಟ್‍ನ ಹಣ ರೂ.34,00,000/- ಎಂದು ಫಾರಂನಲ್ಲಿ ನಮೂದಿಸಿರುತ್ತಾರೆ ಆದರೆ ದೂರುದಾರರು ದೂರಿನಲ್ಲಿ ಒಟ್ಟು ಮೊತ್ತವನ್ನು ತಿಳಿಸಿರುವುದಿಲ್ಲ. ಇದಕ್ಕೆ ಪ್ರತಿಯಾಗಿ ಎದುರುದಾರರು ದಿನಾಂಕ 26.06.2016ರಂದು ಪತ್ರವನ್ನು ಕಳಿಸಿ 16.11.2016 ಒಳಗೆ ರದ್ದು ಮಾಡಿ ಮುಂಗಡ ಹಣವನ್ನು ಮರುಪಾವತಿಸುವುದಾಗಿ ತಿಳಿಸಿದರು ಹಣವನ್ನು ಮರುಪಾವತಿಸಿರುವುದಿಲ್ಲ. ಇದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿದ್ದಾರೆಂದು ಕಾನೂನು ನೋಟೀಸ್ ದಿನಾಂಕ 12.10.2017ರಂದು ನೀಡಿದ್ದು, ದಾಖಲೆ 3, ಇದಕ್ಕೆ ಎದುರುದಾರರು ಯಾವುದೇ ಜವಾಬು ನೀಡದೇ ಉದ್ದೇಶ ಪೂರ್ವಕವಾಗಿ, ಇದರಿಂದ ದೂರುದಾರರು ದೂರಿನಲ್ಲಿ ಹೇಳಿರುವ ಸಂಗತಿ ನಿಜವೆಂದು ಒಪ್ಪಿದರೂ ಕೂಡ ನಿವೇಶನದ ಬೇಡಿಕೆಯ ಮೊತ್ತದ ಒಟ್ಟು ರೂ.34,00,000/- ಮತ್ತು ಮುಂಗಡ ಹಣ ರೂ.1,00,000/- ಗಳಿಗೆ ಶೇ. 18ರ ಬಡ್ಡಿಯಂತೆ ಮುಂಗಡ ಹಣ ಪಾವತಿಸಿದ ದಿನಾಂಕ 21.03.2015ರಿಂದ 02.03.2018ರವರೆಗೆ ಪ್ರಕರಣ ದಾಖಲಿಸಿದ ದಿನಾಂಕದವರೆಗೆ ಪರಿಹಾರ ರೂಪವಾಗಿ ಶೇ.18ರ ಬಡ್ಡಿಯಂತೆ ನೀಡಲು ಕೋರಿರುತ್ತಾರೆ ಒಟ್ಟು ಮೊತ್ತ ರೂ.35.20,000/-.
At this stage, it is relevant to refer section 11(1) of CP Act 1986 as complainant has been filed u/s 12 of CP Act 1986 on 08.08.2019, the section 11(1) of C P Act 1986 which read thus;
11(1): Jurisdiction of the district forum (1) subject to the other provisions of this act the district forum shall have jurisdiction to entertain complainants where the value of the goods or services and the compensation, if any, claimed (does not exceed) Rs.5,00,000/-.
According to the above provision, the then district forum had pecuniary jurisdiction up to R.20,00,000/- if the value of flat and compensation claimed 50,000/- to 50,00,000/- are taken into consideration the value for the purpose of pecuniary jurisdiction was more than 20,00,000/-under such circumstances the complainant filed before this forum on 08.08.2019 was not maintainable for want of pecuniary jurisdiction.
The Hon’ble National Commission in the following two decisions categorically ruled that in order to ascertain the pecuniary jurisdiction the value of goods + compensation shall be the value for the purpose of pecuniary jurisdiction.
- 2022(1) CPR 363 (NC) in the matter between Apoorva Bansal –vs- M/s Vatika Limited
- 2022(1) CPR 572 NC in the matter between Amit Arora and another –vs- Vatika Limited
8. ದೂರು ಸಲ್ಲಿಸಿದ ದಿನಾಂಕದಂದು ಜಿಲ್ಲಾ ವೇದಿಕೆಯು ದೂರನ್ನು ಪರಿಗಣಿಸಲು ಯಾವುದೇ ಹಣದ ಅಧಿಕಾರವನ್ನು ಹೊಂದಿರುವುದಿಲ್ಲ. ಸಿ.ಪಿ ಆಕ್ಟ್ ಜಾರಿಗೊಳಿಸುವ ದೃಷ್ಠಿಯಿಂದ ಈ ಆಯೋಗದ ಮುಂದೆ ಅಂತಹ ದೂರನ್ನು ಮುಂದುವರಿಸಬಹುದೇ, ಪ್ರಶ್ನೆಗೆ 2019ರ ಜಾರಿಗೆ ಬಂದಿವೆ. ಇದು 20.07.2020 ಜಿಲ್ಲಾ ಆಯೋಗದ ಹಣದ ಅಧಿಕಾರ ವ್ಯಾಪ್ತಿಯನ್ನು ಒಂದು ಕೋಟಿಗೆ ಹೆಚ್ಚಿಸಿಲಾಗಿದೆ, ಹೊಸ ಕಾಯ್ದೆ 2019ರಡಿಯಲ್ಲಿ ಪಡೆದ ಸರಕು ಅಥವಾ ಸೇವೆಗೆ ಪಾವತಿಸಿದ ಪರಿಗಣನೆಯ ಆಧಾರದ ಮೇಲೆ 2019ರ ಸಿ.ಪಿ.ಆಕ್ಟ್ ಯಾವುದೇ ಹಿಂದಿನ ಪರಿಣಾಮವನ್ನು ಹೊಂದಿಲ್ಲ ಮತ್ತು ಸಿ.ಪಿ.ಆಕ್ಟ್ 1986ರ ನಿಬಂಧನೆಯಡಿಯಲ್ಲಿ ಪ್ರಾರಂಭಿಸಲಾದ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ಸಿ.ಪಿ. ಆಕ್ಟ್ 2019ರಡಿಯಲ್ಲಿ ಮುಂದುವರಿಸಲಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದೇವೆ.
This reasoning of us is supported by the following decisions of the Hon’ble supreme Court of india in case of 2021 (2) CPR 398 in the matter between Neena Aneja –vs- Jain Prakash Associates Ltd., dated 16th March 2021, their lordship have specifically observed in para 71 of the judgement.
9. ಮೇಲೆ ತಿಳಿಸಿದ ಕಾರಣಕ್ಕಾಗಿ 1ನೇ ಅಂಶ ನಕರಾತ್ಮಕವಾಗಿದೆ ಎಂದು ತೀರ್ಮಾನಿಸಲಾಗಿ ದೂರುದಾರರು ಸಲ್ಲಿಸಿದ ದಿನಾಂಕ 02.03.2018 ರಂದು ಈ ಆಯೋಗವು ದೂರನ್ನು ಪರಿಗಣಿಸಲು ಯಾವುದೇ ಹಣದ ಅಧಿಕಾರದ ವ್ಯಾಪ್ತಿಯನ್ನು ಹೊಂದಿಲ್ಲ ಮತ್ತು ಅದೇ ದೂರನ್ನು ಸಿ.ಪಿ.ಆಕ್ಟ್ 2019ರ ಅಡಿಯಲ್ಲಿ ಮುಂದುವರೆಸಲಾಗುವುದಿಲ್ಲ.
10. 2ನೇ ಅಂಶದ ಮೇಲೆ:- ಯಾವುದೇ ಹಣದ ಅಧಿಕಾರ ವ್ಯಾಪ್ತಿ ಹೊಂದಿರದಿದ್ದಾಗ ಅರ್ಹತೆಯ ಮೇಲೆ ಪ್ರಕರಣವನ್ನು ನಿಗದಿಪಡಿಸುವ ಅಧಿಕಾರವನ್ನು ಹೊಂದಿರುವುದಿಲ್ಲ ಎಂಬುದು ಕಾನೂನಿನ ಪ್ರತಿಪಾದನೆಯಲ್ಲಿ ಇತ್ಯರ್ಥಪಡಿಸಲಾಗಿದೆ.
11. ಮೇಲೆ ತಿಳಿಸಿದ ಕಾರಣಗಳು, ಈ ಜಿಲ್ಲಾ ಆಯೋಗವು ದೂರನ್ನು ಪರಿಗಣಿಸಲು ಯಾವುದೇ ಹಣದ ಅಧಿಕಾರವನ್ನು ಹೊಂದಿಲ್ಲ ಮತ್ತು ಅದೇ ದೂರನ್ನು ಸಿ.ಪಿ.ಆಕ್ಟ್ 2019ರ ಅಡಿಯಲ್ಲು ಮುಂದುವರೆಸಲು ಆಗುವುದಿಲ್ಲ. ಅದರಂತೆ ಈ ಕೆಳಕಂಡ ಆದೇಶವನ್ನು ಮಾಡಿದ್ದೇವೆ.
ಆದೇಶ
1. ದಿನಾಂಕ 02.03.2018ರ ದೂರನ್ನು ಜಿಲ್ಲಾ ಆಯೋಗವು ಯಾವುದೇ ಹಣದ ನ್ಯಾಯ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ ಮತ್ತು ಈ ದೂರನ್ನು ಹೊಸ ಕಾಯ್ದೆ ಸಿ.ಪಿ.ಆಕ್ಟ್ 2019ರ ನಿಬಂಧನೆಗಳಡಿಯಲ್ಲಿ ಮುಂದುವರೆಸಲು ಬರುವುದಿಲ್ಲ.
2. ಈ ದೂರನ್ನು ಗೌರವಾನ್ವಿತ ರಾಜ್ಯ ಆಯೋಗದ ಮುಂದೆ ಹಾಜರುಪಡಿಸುವ ಅಗತ್ಯವಿದೆಯೆಂದು, ದೂರುದಾರರಿಗೆ ದೂರನ್ನು ದಾಖಲಾತಿ ಸಹಿತ ಹಿಂದಿರುಗಿಸತಕ್ಕದ್ದು.
3. ಯಾವುದೇ ವೆಚ್ಚವಿಲ್ಲ.
4. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಕೆ.ಎಸ್.ಬೀಳಗಿ)ಅಧ್ಯಕ್ಷರು
Documents produced by the Complainant-P.W.1 are as follows:
1. | Ex.A1 : Copy of the Cancellation letter dated 26.06.2016 |
2. | Ex.A2: Cancellation refund letter dated 26.06.2016 |
3. | Ex.A3: Legal notice dated 12.10.2017 |
4. | Ex.A4: Returned legal notice |
5. | Ex.A5: Company master data from ROC |
6. | Ex.A6: Receipt |
Documents produced by the representative of opposite party : NIL
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಕೆ.ಎಸ್.ಬೀಳಗಿ)ಅಧ್ಯಕ್ಷರು